Breaking News

ಐತ್ತೂರು ಗ್ರಾ.ಪಂ. ಮಾಜಿ ಸದಸ್ಯ ಸಂಜೀವ ಗೌಡ ಪುತ್ತಿಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆ

Puttur_Advt_NewsUnder_1
Puttur_Advt_NewsUnder_1

aithoorಕಡಬ: ಐತ್ತೂರು ಗ್ರಾ.ಪಂ.ನ ಮಾಜಿ ಸದಸ್ಯ ಸಂಜೀವ ಗೌಡ ಪುತ್ತಿಗೆ ಜ.8 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಸದಸ್ಯರ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಶಾಸಕರ ಅನುದಾನದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿದ ರಸ್ತೆಗಳನ್ನು ಉದ್ಘಾಟನೆಗೊಳಿಸಲು ಆಗಮಿಸಿದ್ದ ಶಾಸಕ ಅಂಗಾರರವರು ಹಾಗೂ ಪಕ್ಷದ ಮುಖಂಡರು ಬಳಿಕ ಸುಂದರ ಗೌಡ ಬಿ.ಆರ್ ರವರ ಮನೆಯಲ್ಲಿ ಸಭೆ ನಡೆಸಿದ್ದು ಸಭೆಯಲ್ಲಿ ಸಂಜೀವ ಗೌಡರಿಗೆ ಶಾಸಕರು ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಂಗಾರವರು ನಿಷ್ಟಾವಂತರಾಗಿ ಪಕ್ಷದಲ್ಲಿ ದುಡಿದವರಿಗೆ ಪಕ್ಷವು ಯಾವಾಗಲೂ ಇಂಬು ನೀಡುತ್ತದೆ. ಪಕ್ಷದಲ್ಲಿ ಪ್ರಾಮಾಣಿಕ ನಿಷ್ಠೆ, ಸಾಮಾಜಿಕ ಸೇವಾ ಮನೋಭಾವ ಇದ್ದು ಎಲ್ಲರನ್ನೂ ಒಗ್ಗಟ್ಟಿನಿಂದ ಸೇರಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಪಥದಲ್ಲಿ ನಾವೆಲ್ಲಾ ಮುನ್ನಡೆದಾಗ ಊರಿನ ಸಂಪೂರ್ಣ ಅಭಿವೃದ್ಧಿ ಆಗುವುದರೊಂದಿಗೆ ಮತದಾರರು ಎಂದೂ ನಮ್ಮೊಟ್ಟಿಗೆ ಇರುತ್ತಾರೆ ಎಂದು ಹೇಳಿದ ಅವರು ಹಲವಾರು ಅಭಿವೃದ್ಧಿಗಳನ್ನು ಈ ಭಾಗದಲ್ಲಿ ಮಾಡಲಾಗಿದೆ. ಇನ್ನು ಹೆಚ್ಚಿನ ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಅತೀ ಅಗತ್ಯ ಎಂದರು. ಸುಳ್ಯ ಬಿಜೆಪಿ ಮಂಡಲ ಉಪಾಧ್ಯಕ್ಷ ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ ಬಿಜೆಪಿ ಪಕ್ಷದಿಂದ ಆದ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ವಿವರಿಸಿದರು. ತಾ.ಪಂ.ಅಧ್ಯಕ್ಷೆ ಪುಲಸ್ತ್ಯಾ ರೈ, ನೆಲ್ಯಾಡಿ ಜಿ.ಪಂ.ಸದಸ್ಯ ಬಾಲಕೃಷ್ಣ ಬಾಣಜಾಲು, ತಾ.ಪಂ.ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ಕೊಣಾಜೆ ಗ್ರಾ.ಪಂ.ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಸೀರಾಡಿ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ಗೌಡ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ನಾಯಕ್, ಕಡಬ ಲಯನ್ಸ್ ಅಧ್ಯಕ್ಷ ಅಂಜೇರಿ ಜೋಸ್, ಕಡಬ ಸಿಎ ಬ್ಯಾಂಕ್ ನಿರ್ದೇಶಕ ರಘುಚಂದ್ರ ಮನೆಜಾಲು, ಕೊಣಾಜೆ ಪಂಚಾಯತ್ ಸದಸ್ಯರಾದ ಪೊಡಿಯ ಗೌಡ, ಪುಷ್ಪಾ, ಶಿರಾಡಿ ಪಂಚಾಯತ್ ಸದಸ್ಯ ಪ್ರಕಾಶ್ ಗುಂಡ್ಯ, ಶಶಿಧರ್ ಶೀರಾಡಿ, ಹೇಮಚಂದ್ರ, ನಾರಾಯಣ ಗೌಡ ಶೀರಾಡಿ, ಮೊದಲಾದವರು ಉಪಸ್ಥಿತರಿದ್ದರು. ಕೊಣಾಜೆ ಗ್ರಾ.ಪಂ.ಉಪಾಧ್ಯಕ್ಷ ಯಶೋಧರ ಗೌಡ ಸ್ವಾಗತಿಸಿ, ಸುಂದರ ಬಿ.ಆರ್  ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.