ಉಪ್ಪಿನಂಗಡಿಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಮಿಲಾದ್ ಕ್ಯಾಂಪೇನ್, “ಸಮಸ್ತ” ಸುವರ್ಣ ಪಥ ಕಾರ್ಯಕ್ರಮ

SKSSF MILADಉಪ್ಪಿನಂಗಡಿ: ಎಸ್‌ಕೆಎಸ್‌ಎಸ್‌ಎಫ್. ಉಪ್ಪಿನಂಗಡಿ ವಲಯ ವತಿಯಿಂದ ಇಲ್ಲಿನ ಉಪ್ಪಿನಂಗಡಿ ಮಾಲಿಕ್‌ದೀನಾರ್ ಜುಮಾ ಮಸೀದಿ ಸಭಾಂಗಣದಲ್ಲಿ ಸಮಸ್ತ 90ನೇ ವಾರ್ಷಿಕ ಪ್ರಚಾರಾರ್ಥ ಮಿಲಾದ್ ಕ್ಯಾಂಪೇನ್ ಮತ್ತು “ಸಮಸ್ತ” ಪ್ರವಾದಿ ಚರ್ಯೆ ಸುವರ್ಣ ಪಥ ಕಾರ್ಯಕ್ರಮ ಜ. 8ರಂದು ಜರಗಿತು.

 ಕರಾಯ ಮಸೀದಿ ಖತೀಬ್ ಅಶ್ರಫ್ ಬಾಖವಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರವಾದಿಯವರ ತತ್ವ ಆದರ್ಶ, ಸರಳ ಜೀವನದ ಬಗ್ಗೆ ಗುಣಗಾನ ಮಾಡಿದರು.

ಶ್ರೀರಂಗಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಮುಹಮ್ಮದ್ ಮುಸ್ತಫಾ ಆತೂರು ಮಾತನಾಡಿ ಇಸ್ಲಾಂ ಮೃದುತ್ವ ಮತ್ತು ಮಿತತ್ವ ಉಳ್ಳ ಸಮುದಾಯವಾಗಿದೆ, ಆದರೆ ತಪ್ಪು ಕಲ್ಪನೆಯಿಂದಾಗಿ ಇಸ್ಲಾಂ ಎಂದರೆ ಜಿಹಾದ್, ಭಯೋತ್ಪಾದನೆ, ಪೈಶಾಚಿಕ ಕೃತ್ಯಗಳಿಗೆ ಈ ಸಮುದಾಯದಿಂದಲೇ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹೀಗಾಗಿ ಸಮುದಾಯ ದೂಷಣೆಗೆ ಒಳಗಾಗುತ್ತಿದೆ, ಇದು ವಿಷಾದನೀಯ ಎಂದರು.

 ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿದ್ದರು. ಅಜೀಜ್ ದಾರಿಮಿ, ಇಂಡಿಯನ್ ಸ್ಕೂಲ್ ಪ್ರಾಂಶುಪಾಲ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿದರು. ಮಸೀದಿ ಸಮಿತಿ ಕಾರ‍್ಯದರ್ಶಿ ಹೆಚ್. ಯೂಸುಫ್ ಹಾಜಿ, ನೆಕ್ಕಿಲಾಡಿ ಗ್ರಾಪಂ ಉಪಾಧ್ಯಕ್ಷ ಅಸ್ಕರ್ ಮೊದಲಾದವರು ಉಪಸ್ಥಿತರಿದ್ದರು.

 ಎಸ್‌ಕೆಎಸ್‌ಎಸ್‌ಎಫ್. ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೊಳ್ಳೇಜಾಲ್ ಸ್ವಾಗತಿಸಿ, ಮಹಮ್ಮದ್ ಹಾರಿಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.