ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಶ್ರದ್ಧೆಯಿಂದ ಸೇವೆ ಕೊಟ್ಟರೆ ಸಂಘ ಬೆಳವಣಿಗೆಯಾಗುತ್ತದೆ-ರವಿರಾಜ ಹೆಗ್ಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಹಕಾರಿ ಕಾಯ್ದೆಯಡಿಯಲ್ಲಿ ಸಹಕಾರ ಭಾರತಿ ಕೆಲಸ ಮಾಡುತ್ತದೆ.  ಕಾಯ್ದೆಯನ್ನು ತಿಳಿದುಕೊಳ್ಳಲು ಸಹಕಾರಿ ರಂಗದವರು ಒಗ್ಗಟ್ಠಾಗಿ ಕೆಲಸ ಮಾಡಬೇಕು. ಸಹಕಾರಿ ರಂಗದಿಂದ ಸ್ಥಾಪಿತವಾದ ಸಹಕಾರಿ ಸಂಘಗಳು ಜನರಿಗೆ ಒಳ್ಳೆಯ ಸೇವೆಯನ್ನು ಕೊಡಬೇಕು ಎಂದು ದ.ಕ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು. ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜ.11  ರಂದು ನಡೆದ ಸಹಕಾರ ಭಾರತಿಯ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಸಂಘಟನೆಗೆ ಬೆನ್ನುಕೊಟ್ಟು ಕೆಲಸ ಮಾಡಿದರೆ ಸಂಘ ಬೆಳೆಯುತ್ತದೆ. ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಒಳ್ಳೆಯ ಸೇವೆ ಕೊಟ್ಟಲ್ಲಿ ಸಂಘ ಬೆಳವಣಿಗೆ ಹೊಂದುತ್ತದೆ ಎಂಧೂ ಅವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ದ.ಕ. ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಮಾತನಾಡಿ ಸಹಕಾರ ಭಾರತಿ ಒಳ್ಳೆಯ ಉದ್ಧೇಶವನ್ನಿಟ್ಟುಕೊಂಡು ಸಹಕಾರಿ ಕ್ಷೇತ್ರದಲ್ಲಿ ಸ್ಥಾಪನೆಯಾದ ಸಂಸ್ಥೆಯಾಗಿದೆ. ದೇಶದಲ್ಲಿಯೇ ಸಹಕಾರ ಭಾರತಿಯ ಕಡೆಗೆ ಜನರು ನೋಡುವಂತಾಗಿದೆ. ದ.ಕ. ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿ ಬಲಿಷ್ಠವಾಗಿ ಬೆಳೆದಿದ್ದು ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತದೆ. ನಾವೆಲ್ಲರೂ ಈ ಸಂಘವನ್ನು ಬೆಳೆಸೋಣ ಎಂದರು. ವೇದಿಕೆಯಲ್ಲಿ ಎಸ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ ಹೆಗ್ಡೆ ಉಪಸ್ಥಿತರಿದ್ದರು. ಮಂಗಳೂರು ಸಹಕಾರ ಭಾರತಿ ಅಧ್ಯಕ್ಷ ಉದಯ ಮಾದೋಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ವಂದಿಸಿದರು.

20160110215702

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.