Breaking News

ವಿವೇಕಾನಂದ ಕ್ಯಾಂಪಸ್‌ಗೆ ತಲುಪಿದ ರಥಯಾತ್ರೆ 5 ಸಾವಿರ ವಿದ್ಯಾರ್ಥಿಗಳಿಂದ ಭವ್ಯ ಸ್ವಾಗತ

Puttur_Advt_NewsUnder_1
Puttur_Advt_NewsUnder_1

News Photoಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಜನವರಿ ೫ರಂದು ಪುತ್ತೂರಿನ ಮಹಲಿಂಗೇಶ್ವರ ದೇವಸ್ಥಾನದಿಂದ ಹೊರಟಿದ್ದ ವಿವೇಕ ರಥಯಾತ್ರೆ ಜ. 11ರಂದು ನೆಹರು ನಗರದಲ್ಲಿನ ವಿವೇಕಾನಂದ ಕ್ಯಾಂಪಸ್‌ಗೆ ಆಗಮಿಸಿತು. ಆಡಳಿತ ಮಂಡಳಿ ಹಿರಿಯರು, ಉಪನ್ಯಾಸಕರು, ಉಪನ್ಯಾಸಕೇತರ ವೃಂದ ಮಾತ್ರವಲ್ಲದೆ ಸುಮಾರು ಐದು ಸಾವಿರ ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ಅಪಾರ ಜನಸ್ತೋಮ ರಥವನ್ನು ಸ್ವಾಗತಿಸಿತು. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಅಡ್ಯಂತಾಯರವರು ಮಾತನಾಡಿ, ಸ್ವಾಮಿ ವಿವೇಕಾನಂದರು ಹಾಗೂ ಡಾ.ಹೆಗಡೇವಾರ್ ಅವರು ಯೋಚಿಸಿದಂತಹ ರಾಷ್ಟ್ರಭಕ್ತಿ, ಸಂಸ್ಕಾರ, ಭಾರತೀಯತೆಯನ್ನೊಳಗೊಂಡ ಶಿಕ್ಷಣವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳು ನೀಡುತ್ತಿವೆ. ತನ್ಮೂಲಕ ಯುವಸಮೂಹದಲ್ಲಿ ಸ್ವಾವಲಂಬನೆಯನ್ನು ಮೂಡಿಸುವುದಕ್ಕೆ ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ದೇಶದ ಅಡಿಗಲ್ಲುಗಳು. ಆದುದರಿಂದ ಅತ್ಯುತ್ತಮವಾದಂತಹ ಭಾರತೀಯ ಶಿಕ್ಷಣದ ಮೂಲಕ ಭಾರತವನ್ನು ವೈಭವದ ಶಿಖರವನ್ನು ಏರಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಳದಿಂದ ಪಡೆದು ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳಿಗೂ ಸಂಚರಿಸಿ ಆಗಮಿಸಿದ್ದ ವಿವೇಕಜ್ಯೋತಿಯನ್ನು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್ ಅವರುಗಳಿಗೆ ಹಸ್ತಾಂತರಿಸಲಾಯಿತು, ಪ್ರೊ.ವಿ.ಜಿ.ಭಟ್, ಹರಿಣಿ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.