ಪೆರ್ನಾಜೆ ಶ್ರೀ ಸೀತಾರಾಘವ ಪ್ರೌಢಶಾಲೆಯ ಸುವರ್ಣ ಸಂಭ್ರಮದ ಉದ್ಘಾಟನೆ, ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

94f1cc13-4975-4543-b844-31fe339d04a4ಕಾವು : ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಶ್ರೀ ಸೀತಾರಾಘವ ಪ್ರೌಢಶಾಲೆಯ ಸುವರ್ಣ ಸಂಭ್ರಮದ ಉದ್ಘಾಟನೆ ಮತ್ತು ವಾರ್ಷಿಕೋತ್ಸವವು ಜ.9ರಂದು ಶಾಲಾ ವಠಾರದಲ್ಲಿ ನಡೆಯಿತು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪೆರ್ನಾಜೆ ಶಂಕರನಾರಾಯಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ|ಕೆ.ವಿ ಚಿದಾನಂದ ಪ್ರಧಾನ ಅತಿಥಿಯಾಗಿ ಉಪಸ್ಥಿತರಿದ್ದರು. ಮಣಿಪಾಲ ಎಂಐಟಿ ಮೆಕಾನಿಕಲ್ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಶ್ರೀನಿವಾಸ್‌ರವರು ಶಾಲೆಯ ಸಂಸ್ಥಾಪಕ ದಿ| ಸೀತಾರಾಮ ಭಟ್ಟರವರ ಭಾವಚಿತ್ರ ಅನಾವರಣ ಮತ್ತು ಸಂಸ್ಮರಣೆ ಮಾಡಿದರು. ಕಾಸರಗೋಡು ಪೆರಡಾಲ ನವಜೀವನ ಹಯರ್ ಸೆಕೆಂಡರಿ ಸ್ಕೂಲ್‌ನ ಮುಖ್ಯ ಶಿಕ್ಷಕ ಶಂಕರ್ ಸಾರಡ್ಕ ಗುರುವಂದನೆ ಸಲ್ಲಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಪ್ರತಿಭಾ ಪುರಸ್ಕಾರ ಮಾಡಿದರು. ತಾಲೂಕು ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಕೆ.ಆರ್ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುರುವಂದನೆ : ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ, ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ. ಶಾಮಣ್ಣ, ಬಾಲಕೃಷ್ಣ ಭಟ್, ಸೂರ್ಯನಾರಾಯಣ ಭಟ್, ಪಿ. ವೆಂಕಟ್ರಮಣ ಭಟ್, ಪಟ್ಟಾಜೆ ಸುಬ್ರಹ್ಮಣ್ಯ ಭಟ್‌ರವರನ್ನು ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.

ಸನ್ಮಾನ ಕಾರ್ಯಕ್ರಮ : ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳಾದ ಮಳಿ ಮಧುಮಲ್ಟಿಪಲ್ಸ್‌ನ ಮಾಲ್ಹಕ, ಉದ್ಯಮಿ ವೆಂಕಟಕೃಷ್ಣ ಮಳಿ, ಡಾ. ನಝೀರ್ ಅಹಮ್ಮದ್, ಶರತ್ ಕುಮಾರ್ ರೈ, ಅಬ್ದುಲ್ ಲತೀಫ್, ಶರತ್ ಅಡ್ಕಾರ್‌ರವರನ್ನು ಸನ್ಮಾನಿಸಲಾಯಿತು.

ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ : ಸುವರ್ಣ ಸಂಭ್ರಮದ ಪ್ರಾರಂಭೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು ಮತ್ತು ಶಾಲೆಯ ಶೈಕ್ಷಣಿಕ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

50 ಹಣತೆ ಹಚ್ಚಿ ಸುವರ್ಣ ಸಂಭ್ರಮದ ಉದ್ಘಾಟನೆ : ಶಾಲಾ ವಿದ್ಯಾರ್ಥಿಗಳು 50 ಹಣತೆಗಳನ್ನು ಹಚ್ಚಿ, ಆಶಯ ಗೀತೆಯನ್ನು ಹಾಡುವ ಮೂಲಕ ಸುವರ್ಣ ಸಂಭ್ರಮದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಶೈಕ್ಷಣಿಕ ಕಾರ್ಯದರ್ಶಿ ಯು. ಶಿವಶಂಕರ ಭಟ್ ಪ್ರಸ್ತಾವನೆಗೈದರು. ಮುಖ್ಯಗುರು ಪಿ. ಶ್ರೀಕೃಷ್ಣ ವರದಿವಾಚಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೊಚ್ಚಿ ಸ್ವಾಗತಿಸಿ, ಆಡಳಿತ ಮಂಡಳಿಯ ನಿರ್ದೇಶಕಿ ಸರೋಜಿನಿ ನಾಗಪ್ಪಯ್ಯ ವಂದಿಸಿದರು. ಪುತ್ತೂರು ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕರುಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಗೀತ-ಸಾಹಿತ್ಯ ಸಂಭ್ರಮ : ಸಭಾ ಕಾರ್ಯಕ್ರಮ ಆರಂಭದ ಮೊದಲು ಶಾಲಾ ಮಕ್ಕಳಿಂದ ಸ್ವಾಗತ ಗೀತೆ, ನೃತ್ಯ ನಡೆಯಿತು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತ-ಸಾಹಿತ್ಯ ಸಂಭ್ರಮ ಮನರಂಜಿಸಿತು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.

 ಚಿತ್ರ : ಅಶ್ವಿನಿ ಸ್ಟುಡಿಯೋ

829ffc90-5106-4a9e-8e69-83c136b1e72f

949b5275-a48e-4e19-8df8-b3325da11e45

957aaa76-3a3c-4adf-8480-8dbe6cd3545e

b468f143-24f3-46a1-a05a-99f40a87cfd9

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.