Breaking News

ಕಾಣಿಯೂರು ಗ್ರಾಮದ ಬಂಡಾಜೆ – ನಾವೂರು ಸಂಪರ್ಕ ಸೇತುವೆ ಉದ್ಘಾಟನೆ :  ಜನರ ಸೇವೆ ಮತ್ತು ಊರಿನ ಅಭಿವೃದ್ಧಿಗೆ ನಮ್ಮ ಮೊದಲ ಆಧ್ಯತೆಯಾಗಬೇಕು – ಎಸ್. ಅಂಗಾರ

Puttur_Advt_NewsUnder_1
Puttur_Advt_NewsUnder_1

bandaje- navuru photoಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಒಬ್ಬ ಮನುಷ್ಯನಿಗೆ ಆಸ್ತಿ ಸಂಪತ್ತು ಮುಖ್ಯವಲ್ಲ, ಅದು ಶಾಶ್ವತವು ಅಲ್ಲ. ಜನರ ಸೇವೆ ಮಾಡುವುದು ಮತ್ತು ಊರಿನ ಅಭಿವೃದ್ಧಿ ಮಾಡುವುದು ನಮ್ಮ ಮೊದಲ ಆಧ್ಯತೆಯಾಗಬೇಕು. ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ನಮ್ಮ ಕರ್ತವ್ಯಗಳಲ್ಲಿ ಸಾರ್ಥಕತೆಯನ್ನು ಕಾಣುತ್ತೇವೆ. ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ತೀರ ಅಗತ್ಯವಿದೆ ಎಂದು ಸುಳ್ಯ ಶಾಸಕ ಎಸ್ ಅಂಗಾರ ಹೇಳಿದರು. ಅವರು ಕಾಣಿಯೂರು ಗ್ರಾಮದ ಬಂಡಾಜೆ- ನಾವೂರು ಸಂಪರ್ಕ ಸೇತುವೆಯನ್ನು ಜ 11 ರಂದು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗರವರು ವಹಿಸಿದ್ದರು. ತಾ.ಪಂ ಉಪಾಧ್ಯಕ್ಷ ದಿನೇಶ್ ಮೆದು, ತಾ.ಪಂ ಸದಸ್ಯ ಬಾಬು ಮಾದೋಡಿ, ಕಾಣಿಯೂರು ಗ್ರಾ.ಪಂ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಜನಾರ್ದನ, ಕಾಣಿಯೂರು ಗ್ರಾ.ಪಂ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ದಿನೇಶ್ ಗೌಡ ಇಡ್ಯಡ್ಕ, ಗಣೇಶ್ ಉದನಡ್ಕ, ಸುರೇಶ್ ಓಡಬಾಯಿ, ವೀರಪ್ಪ ಉದ್ಲಡ್ಡ, ಬಾಬು ದರ್ಖಾಸ್ತು, ಚಾರ್ವಾಕ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಉಪಾಧ್ಯಕ್ಷ ಬಾಲಕೃಷ್ಣ ಗೌಡ, ಕಾಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಪದ್ಮಯ್ಯ ಗೌಡ ಅನಿಲ, ಶಿವಾನಂದ ಟಿ ಪುಣ್ಚತ್ತಾರು, ಗುತ್ತಿಗೆದಾರರಾದ ಗಿರೀಶ್‌ರವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಜಯರಾಮ ಗೌಡ ಬಂಡಾಜೆ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.