ಕಾವು: ನವೋದಯ ಸ್ವಸಹಾಯ ಸಂಘಗಳ ಮಾಡ್ನೂರು ಒಕ್ಕೂಟದ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ : ಚಿದಾನಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ: ಜಯಲಕ್ಷ್ಮೀ

kavuಕಾವು : ನವೋದಯ ಸ್ವಸಹಾಯ ಸಂಘಗಳ ಮಾಡ್ನೂರು ಗ್ರಾಮ ಒಕ್ಕೂಟದ ನೂತನ ಅಧ್ಯಕ್ಷರಾಗಿ ಚಿದಾನಂದ ಆಚಾರ್ಯ ಸಸ್ಪೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಲಕ್ಷ್ಮೀರವರು ಆಯ್ಕೆಯಾಗಿದ್ದಾರೆ. ಜ.11ರಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಒಕ್ಕೂಟದ ಉಪಾಧ್ಯಕ್ಷರಾಗಿ ನಿರ್ಮಲಾ ರೈ ಮದ್ಲ, ಜತೆ ಕಾರ್ಯದರ್ಶಿಯಾಗಿ ಕೇಶವ ಸಸ್ಪೆಟ್ಟಿ, ಕೋಶಾಧಿಕಾರಿಯಾಗಿ ಲೀಲಾವತಿ, ಸದಸ್ಯರುಗಳಾಗಿ ಲಕ್ಷ್ಮೀ ಅಮ್ಚಿನಡ್ಕ, ಹರಿಣಾಕ್ಷಿ ಆಚಾರ್ಯ, ರಾಮಣ್ಣ ನಾಯ್ಕ ಪಳನೀರು, ಸುಮತಿ, ಶಾಂತಾ ರವರು ಆಯ್ಕೆಯಾದರು. ಸಭೆಯಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಸಂಘದ ತಾಲೂಕು ಮೇಲ್ವಿಚಾರಕ ಗಿರೀಶ್ ಗೋಲ್‌ವಲ್ಕಾರ್, ಪ್ರೇರಕಿ ವಸಂತಿ ಉಪಸ್ಥಿತರಿದ್ದರು. ಒಕ್ಕೂಟದ ನಿರ್ಗಮಿತ ಅಧ್ಯಕ್ಷ ದೇವಣ್ಣ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ರಾವ್ ನಿಧಿಮುಂಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.