ಶ್ರೀವರ ಜ್ಯುವೆಲ್ಸ್ ಮಾಲಕ ಬಾಲಕೃಷ್ಣ ಭಟ್ ಪುತ್ರ ವರದೇಶ್ ಜಾಮೀನು ಅರ್ಜಿ ವಜಾ – ಅಳಿಯ ವಿನಯಕೃಷ್ಣರಿಗೆ ಮಳಿಗೆ ಬಿಟ್ಟುಕೊಡಲು ನ್ಯಾಯಾಲಯ ಆದೇಶ

Puttur_Advt_NewsUnder_1
Puttur_Advt_NewsUnder_1

ಗ್ರಾಹಕರಿಗೆ ಕೋಟ್ಯಂತರ ರೂ.ವಂಚನೆ ಪ್ರಕರಣ

ಪುತ್ತೂರು: ಶ್ರೀವರ ಜ್ಯುವೆಲ್ಸ್ ಮನೆಮನೆಗೆ ಚಿನ್ನ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಮೂಲಕ ಸಾವಿರಾರು ಗ್ರಾಹಕರಿಗೆ ಕೋಟ್ಯಾಂತರ ರೂ.ವಂಚನೆ ಎಸಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಮಳಿಗೆಯ ಮಾಲಕ ಬಾಲಕೃಷ್ಣ ಭಟ್ ಅವರ ಪುತ್ರ ವರದೇಶ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಜಾಗೊಂಡಿದೆ.ಮತ್ತೊಂದೆಡೆ ವ್ಯವಹಾರ ಮಳಿಗೆಯನ್ನು ಮಾಲಕರ ಅಳಿಯ ವಿನಯಕೃಷ್ಣರಿಗೆ ಬಿಟ್ಟುಕೊಡಲು ಕೋರ್ಟ್ ಆದೇಶಿಸಿದೆ.

ಗ್ರಾಹಕರಿಗೆ ಕೋಟ್ಯಂತರ ರೂ.ವಂಚಿಸಿರುವ ಆರೋಪದಡಿ ಜ್ಯುವೆಲ್ಸ್ ಮಾಲಕ ಬಾಲಕೃಷ್ಣ ಭಟ್ ಮತ್ತು ಅವರ ಮಗ ವರದೇಶ್ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ತನ್ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ವರದೇಶ್ ಅವರು ಪುತ್ತೂರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದರಿಂದ ಅವರು ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಜಿಲ್ಲಾ ನ್ಯಾಯಾಲಯವೂ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಜ.೧೧ರಂದು ಆದೇಶಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಕರ ಪುತ್ರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಮಾಲಕನಿಗೆ ಮಳಿಗೆ ಬಿಟ್ಟುಕೊಡಲು ಆದೇಶ: ಇಲ್ಲಿನ ದರ್ಬೆಯಲ್ಲಿ ವೆಲಂಕಣಿ ಕಾಂಪ್ಲೆಕ್ಸ್‌ನಲ್ಲಿ ಶ್ರೀವರ ಜ್ಯುವೆಲ್ಸ್ ಮಳಿಗೆ ಕಾರ್ಯನಿರ್ವಹಿಸುತ್ತಿತ್ತು.ವಂಚನೆ ಪ್ರಕರಣ ದಾಖಲಾಗುತ್ತಲೇ ಮಳಿಗೆಯನ್ನು ಬಂದ್ ಮಾಡಿ ಮಾಲಕ ಬಾಲಕೃಷ್ಣ ಭಟ್, ಪುತ್ರ ವರದೇಶ್ ನಾಪತ್ತೆಯಾಗಿದ್ದರು.ಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ಮಳಿಗೆಯೊಳಗೆ ತಪಾಸಣೆ ನಡೆಸಿ ಮಳಿಗೆಗೆ ಬೀಗ ಜಡಿದಿದ್ದರು.ಜ್ಯುವೆಲ್ಸ್ ವ್ಯವಹಾರ ನಡೆಯುತ್ತಿದ್ದ ಅಂಗಡಿ ಕೋಣೆಯನ್ನು ತಮ್ಮ ಸುಪರ್ದಿಗೆ ನೀಡುವಂತೆ, ಕಟ್ಟಡವನ್ನು ಮಾಲಕತ್ವದಲ್ಲಿ ಪಡೆದುಕೊಂಡಿದ್ದ ಬಾಲಕೃಷ್ಣ ಭಟ್ ಅವರ ಅಳಿಯ ವಿನಯಕೃಷ್ಣ ಅವರು ಐದನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು.ನ್ಯಾಯಾಲಯವು ಅವರ ಅರ್ಜಿಯನ್ನು ಪುರಸ್ಕರಿಸಿದ್ದು ಜ್ಯುವೆಲ್ಸ್ ವ್ಯವಹಾರದ ಮಳಿಗೆಯನ್ನು ವಿನಯಕೃಷ್ಣರಿಗೆ ಬಿಟ್ಟುಕೊಡಲು ಆದೇಶಿಸಿದೆ.ವಿನಯಕೃಷ್ಣರ ಪರ ವಕೀಲರಾದ ಬಿ.ನರಸಿಂಹಪ್ರಸಾದ್, ಪ್ರವೀಣಾ ವಾದಿಸಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.