Breaking News

ಜ.13ರಿಂದ ಕಲ್ಲೇಗ ಜುಮಾ ಮಸೀದಿಯಲ್ಲಿ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಕಲ್ಲೇಗ ಕ್ಲಸ್ಟರ್ ವತಿಯಿಂದ ಶಂಸುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಮತ್ತು ಸಮಸ್ತ 90 ಪ್ರಚಾರ ಸಮ್ಮೇಳನ ಹಾಗೂ 3 ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಜ. 13,14 ಮತ್ತು 15ರಂದು ಪುತ್ತೂರು ಕಲ್ಲೇಗ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಜ. ೧೩ರಂದು ನಡೆಯುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದಲ್ಲಿ ಕಲ್ಲೇಗ ಜೆ.ಎಂ. ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ಅಲ್‌ಹಾದಿ ಯಹ್ಯಾ ತಂಙಳ್ ಪೋಳ್ಯರವರು ದುಃವಾ ನೆರವೇರಿಸಲಿದ್ದಾರೆ. ಕಲ್ಲೇಗ ಜೆ.ಎಂ. ಮುದರ್ರಿಸ್ ಅಲ್‌ಹಾಜ್ ಮೊದು ಫೈಝಿರವರು ಉಪನ್ಯಾಸ ನೀಡಲಿದ್ದಾರೆ. ಜ. ೧೪ರಂದು ಸಾಲ್ಮರ ಸೈಯ್ಯಿದ್‌ಮಲೆ ಅಸ್ಸಯ್ಯದ್ ಎಸ್. ಮುಹಮ್ಮದ್ ತಂಙಳ್‌ರವರು ದುಃವಾ ನೆರವೇರಿಸಲಿದ್ದು, ಕುಂಬಳೆ ಇಮಾಂ ಶಾಫೀ ಇಸ್ಲಾಮಿಕ್ ಅಕಾಡೆಮಿ ಪ್ರೊ. ಅಶ್ರಫ್ ರಹ್ಮಾನಿ ಚೌಕಿರವರು ಉಪನ್ಯಾಸ ನೀಡಲಿದ್ದಾರೆ. ಜ. ೧೫ರಂದು ಶಂಸುಲ್ ಉಲಮಾ ಮೌಲಿದ್ ಪಾರಾಯಣದ ಬಳಿಕ ಧಾರ್ಮಿಕ ಸಭಾದ ಅಧ್ಯಕ್ಷತೆಯನ್ನು ಕಲ್ಲೇಗ ಜೆ.ಎಂ. ಅಧ್ಯಕ್ಷ ಅಲ್‌ಹಾಜ್ ಕೆ.ಪಿ. ಮುಹಮ್ಮದ್‌ರವರು ವಹಿಸಲಿದ್ದು, ಅಲ್‌ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿರವರು  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್‌ರವರು ದುಃವಾ ನೆರವೇರಿಸಲಿದ್ದಾರೆ. ಶೈಖುನಾ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು, ಕುಂಬಳೆ ಇಮಾಂ ಶಾಪೀ ಇಸ್ಲಾಮಿಕ್ ಅಕಾಡೆಮಿ ಪ್ರೊ. ಅನ್ವರ್ ಅಲೀ ಹುದವಿ ಚೆಮ್ಮಾಡ್, ಬೊಕ್ಕಬೆಟ್ಟು ಮುದರ್ರಿಸ್ ಅಬ್ದುಲ್ ಅಜೀಜ್ ದಾರಿಮಿ, ಅನೀಸ್, ಕೌಸರಿ ಕೆಐಸಿ ಕೂರ್ನಡ್ಕ, ಸಿದ್ದೀಕ್ ಅಹ್ಮದ್ ಜಲಾಲಿ, ಆತೂರು ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್‌ರವರು ಪ್ರಭಾಷಣವನ್ನು ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.