ಕೊಳ್ತಿಗೆ:ಕ್ಷುಲ್ಲಕ ಕಾರಣ-ಕೊಳ್ತಿಗೆ ನಿವಾಸಿ ಚಿದಾನಂದ ರೈ ಗೆ ತಂಡದಿಂದ ಹಲ್ಲೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿದಂತೆ ತಂಡವೊಂದು ಹಲ್ಲೆ ನಡೆಸಿದ್ದಾರೆ ಎಂದು ವ್ಯಕ್ತಿಯೋರ್ವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊಳ್ತಿಗೆ ಕೆಳಗಿನಮನೆ ನಾರಾಯಣ ರೈಯವರ ಪುತ್ರ ಚಿದಾನಂದ ರೈ(27.ವ) ಹಲ್ಲೆಗೊಳಗಾದವರು. ಮನೆಗೆ ಅಡಿಕೆ ಕೀಳಲೆಂದು ಅಮಲ ರಾಮ ಎಂಬವರನ್ನು ಬರಹೇಳಿ ತನ್ನ ಸಹೋದರ ಪ್ರಮೋದ್‌ರವರ ಜೊತೆಗೆ ಹೀರೋ ಹೋಂಡಾ ಗ್ಲಾಮರ್ ಬೈಕ್‌ನಲ್ಲಿ ವಾಪಸ್ಸಾಗುತ್ತಿರುವ ವೇಳೆ ಮಾರುತಿ ಝೆನ್ ಕಾರಿನಲ್ಲಿ ಬಂದ ಪಾಂಬಾರು ನಿವಾಸಿ ಜೀವರಾಜ್, ಪ್ರದೀಪ್ ರೈ, ಷಣ್ಮುಖರಾಜ್ ಹಾಗೂ ಇತರ ಇಬ್ಬರು ನಮ್ಮನ್ನು ತಡೆದು ಮನೆಯ ಕೆಲಸಕ್ಕೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕಾರಿನಲ್ಲಿದ್ದ ಜೀವರಾಜ್ ಮೊಗಪ್ಪೆ ಕಾರಿನಲ್ಲಿದ್ದ ಚೂರಿ ತೆಗೆದು ಇರಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಸಹೋದರ ಪ್ರಮೋದ್ ಬೊಬ್ಬೆ ಹೊಡೆದಾಗ ತಂಡ ನನ್ನ ಗ್ಲಾಮರ್ ಬೈಕ್(ಕೆಎ21ಕೆ2415) ಹಾಗೂ ಎರಡು ಮೊಬೈಲ್‌ಗಳನ್ನು ಅವರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿದಾನಂದ ರೈ ಆರೋಪಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.