ಜ.29,30: ಬನ್ನೂರು ಹನಫಿ ಮಸೀದಿಯಲ್ಲಿ ಮದೀನೇ ಕಿ ಧುನ್ ಕಾರ್ಯಕ್ರಮ – ಆಮಂತ್ರಣ ಪತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

bannuruಪುತ್ತೂರು: ಮಸ್ಜಿದ್ ಎ ನೂರಿ ಸುನ್ನಿ ಹನಫಿ ಜುಮಾ ಮಸೀದಿ ಬನ್ನೂರು ಮತ್ತು ಫೈಝಾನ್ ಎ ಮುಸ್ತಫಾ ಯಂಗ್‌ಮೆನ್ಸ್ ಎಸೋಸಿಯೇಶನ್ ಬನ್ನೂರು ಇದರ ಜಂಟಿ ಆಶ್ರಯದಲ್ಲಿ ಮದೀನೇ ಕಿ ಧುನ್ ಏಕ್ ಶಾಮ್ ಹಝ್ರತ್ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಂ ಕೆ ನಾಮ್ ಎಂಬ ಕಾರ್ಯಕ್ರಮವು ಜ.29 ಮತ್ತು 30ರಂದು ಬನ್ನೂರು ಹನಫಿ ಜುಮ್ಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ. ಹಝ್ರತ್ ಅಲ್ಲಾಮ ಮೌಲಾನಾ ಅಲ್‌ಹಾಜಿ ಡಾ|ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಜ.29ರಂದು ಧಾರ್ಮಿಕ ಮತ ಪ್ರವಚನ ಮತ್ತು ಜಲಾಲಿಯ ದ್ಸಿಕ್ರ್ ನಡೆಯಲಿದೆ. ಜಲಾಲಿಯ ದ್ಸಿಕ್ರ್‌ನ ನೇತೃತ್ವವನ್ನು ಇಬ್ರಾಹಿಂ ಖಲೀಲುಲ್ಲಾ ಖಾದಿರಿ, ನಾಹೂರಿ ನಾಗೂರು ತಮಿಳ್‌ನಾಡ್‌ರವರು ವಹಿಸಲಿದ್ದಾರೆ.  ಜ. 30ರಂದು ಬೃಹತ್ ಬುರ್ದಾ ಮಜ್ಲೀಸ್ ಮತ್ತು ನಾತೋಂಕಿ ಮೆಹಫಿಲ್ ನಡೆಯಲಿದ್ದು ಇದರ ನೇತೃತ್ವವನ್ನು ಫೈಝಾನ್ ಎ ಮದೀನ ಬುರ್ದಾ ಸಂಘದ ಅಂತರಾಷ್ಟ್ರೀಯ ಖ್ಯಾತಿ ಪಡೆದ ದಕ್ಷಿಣಆಫ್ರಿಕಾ ಮೂಲದ ಖ್ಯಾತ ನಾತ್ ಖ್ವಾನ್‌ಗಳಾದ ಮುಹಮ್ಮದ್ ಫಾರೂಕ್ ಬರಕಾರಿ ಮುಹಮ್ಮದ್ ಶಬ್ಬೀರ್ ಬರಕಾರಿ, ಮುಹಮ್ಮದ್ ಅಸ್ಲಂ ಬರಕಾರಿ ಗುಜರಾತ್‌ರವರು ವಹಿಸಲಿದ್ದಾರೆ. ಉತ್ತರ ಪ್ರದೇಶದವರಾದ ಪೀರೇ ತ್ವರಿಖತ್ ರಹ್‌ಬರೇ ಶರೀಯತ್ ನಾಸಿರೇ ಬಸ್ಲಕೇ ಅಲಾ ಹಝ್ರತ್ ಔಲಾದೇ ಗೌಸೇಆಝಂ ಹಝ್ರತ್ ಅಲ್‌ಹಾಜ್ ಸಯ್ಯದ್ ಶಾ ಮುಹಮ್ಮದ್ ಶರಾಫತ್ ರಸೂಲ್ ರಝ್ವಿ ಖಾದ್ರಿ ರವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಪುತ್ತೂರಿನ ಬಾಲ ಪ್ರತಿಭೆ ಬನ್ನೂರು ಎ ನೂರಿಯಾ ರಝ್ವಿಯಾ ಮಸ್ರಸದ ವಿದ್ಯಾರ್ಥಿ ಮುಹಮ್ಮದ್ ಸೈಫಾಝ್ ರಝಾ ರವರಿಂದ ವಿಶೇಷ ನಾತ್ ಆಲಾಪನೆ ನಡೆಯಲಿದೆ.  ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಬಿಡುಗಡೆ ಸಮಾರಂಭವು ಜ.೮ರಂದು  ಹನಫಿ ಮಸೀದಿಯಲ್ಲಿ ಜುಮಾ ನಮಾಝಿನ ಬಳಿಕ ಜಮಾಅತರ ಸಮ್ಮುಖದಲ್ಲಿ ನಡೆಯಿತು. ಮಸ್ಜಿದ್ ಎ ನೂರಿ ಸುನ್ನಿ ಹನಫಿ ಜುಮಾ ಮಸೀದಿಯ  ಖತೀಬರಾದ ಮೌಲಾನ ಮುಹಮ್ಮದ್ ವಜಾಹತ್ ಹುಸೈನ್ ರಝ್ವಿ ರವರು ಆಮಂತ್ರಣ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಸ್ಜಿದ್ ಎ ನೂರಿ ಸುನ್ನಿ ಹನಫಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್ ರೈಲ್ವೆ, ಕಾರ್ಯದರ್ಶಿ ಶೇಖ್ ಇಸ್ಮಾಯಿಲ್, ಸಂಚಾಲಕ ಮುಹಮ್ಮದ್ ಅಲಿ ಉಸ್ತಾದ್, ರಝಾಕ್ ಅಲಿ ಸೂಫಿ, ಜೊತೆ ಕಾರ್ಯದರ್ಶಿ ಶೇಖ್ ಸುಬಾನ್ ಸಾಹೇಬ್‌ರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.