Breaking News

ನಕಲಿ ಪರ್ಮಿಟ್‌ನಲ್ಲಿ ಅಕ್ರಮ ಮರಳು ಸಾಗಾಟ – ಆರೋಪಿ ಮಂಗಳೂರು ಉರ್ವದ ವಿನಾಯಕಗೆ ನಿರೀಕ್ಷಣಾ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಕಲಿ ಪರ್ಮಿಟ್‌ನೊಂದಿಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣದ ಆರೋಪಿಯೋರ್ವನಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಉಪ್ಪಿನಂಗಡಿಯಲ್ಲಿ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯೊಂದರಲ್ಲಿ ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.ತನಿಖೆ ಮುಂದುವರಿದು, ಲಾರಿಗಳಲ್ಲಿದ್ದ ಪರ್ಮಿಟ್ ಕೂಡಾ ನಕಲಿ ಎನ್ನುವುದು ಬೆಳಕಿಗೆ ಬಂದಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಮಾಲಕ ಮಂಗಳೂರು ಉರ್ವದ ವಿನಾಯಕ ಎಂಬವರಿಗೆ ಐದನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.ಆರೋಪಿ ಪರ ವಕೀಲರಾದ ಪ್ರಶಾಂತ್ ರೈ ಪುಣ್ಚಪ್ಪಾಡಿ, ಹರಿಪ್ರಸಾದ್ ರೈ ಅಜ್ಜಿಕಲ್ಲು ವಾದಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.