ಸಾಧನಾ ಸಂಗೀತ ವಿದ್ಯಾಲಯದಿಂದ ‘ಸ್ವರಮಾಲಾ-17’ ಶ್ರದ್ಧೆ, ಮನಸ್ಸಿದ್ದರೆ ಯಾವುದೇ ವಿದ್ಯೆ ಒಲಿಯಬಲ್ಲುದು-ಡಾ|ಶ್ಯಾಮ್

Puttur_Advt_NewsUnder_1
Puttur_Advt_NewsUnder_1

sadana

sadana1

sadana2

ಪುತ್ತೂರು: ಇತ್ತೀಚೆಗಿನ ದಿನಗಳಲ್ಲಿ ಜನಾಂಗದ ಬದಲಾವಣೆಯಿಂದ ಅಥವಾ ಕಾಲಘಟ್ಟದಿಂದ ಸಂಗೀತವು ಯಶಸ್ಸು ಪಡೆಯದಿರಬಹುದು. ಆದರೆ ಸಂಗೀತವೆಂಬುದು ತಪಸ್ಸಿನ ಹಾಗೆ. ಸಂಗೀತ ಸೇರಿದಂತೆ ಯಾವುದೇ ವಿದ್ಯೆಯನ್ನು ಯಾರು ಶ್ರದ್ಧೆ ಮತ್ತು ಒಳ್ಳೆಯ ಮನಸ್ಸಿನಿಂದ ಕಲಿಯುತ್ತಾರೋ ಅವರಿಗೆ ವಿದೈ ಖಂಡಿತಾ ಒಲಿಯುತ್ತದೆ ಎಂದು ಆದರ್ಶ ಆಸ್ಪತ್ರೆಯ ವೈದ್ಯ ಡಾ. ಶ್ಯಾಮ್ ಬಿ.ರವರು ಹೇಳಿದರು.

ಅವರು ಜ.10  ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಪಂಚಾಕ್ಷರಿ ಮಂಟಪದಲ್ಲಿ ಕೊಂಬೆಟ್ಟು ಸಾಧನಾ ಸಂಗೀತ ವಿದ್ಯಾಲಯದ ತಿಂಗಳ ಸರಣಿ  ‘ಸ್ವರಮಾಲಾ-17 ’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾಧನಾ ಸಂಗೀತ ವಿದ್ಯಾಲಯದ ವಿದುಷಿ ಸುಚಿತ್ರಾ ಹೊಳ್ಳರವರು ಸರಿಯಾದ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳು ಬೆಳಕಿಗೆ ಬರಲು ವೇದಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ ಸಾಧನಾ ಸಂಗೀತ ವಿದ್ಯಾಲಯದ ಅಧ್ಯಕ್ಷೆ ಸುಚಿತ್ರಾ ಹೊಳ್ಳರವರು ಮಾತನಾಡಿ, ಸಂಗೀತವು ಧಾರ್ಮಿಕ ವಿಧಿವಿಧಾನಗಳಲ್ಲೂ ಹಾಸುಹೊಕ್ಕಾಗಿದ್ದು ಎಲ್ಲಾ ಧರ್ಮಗಳಲ್ಲಿ ಸಮರಸ ಉಂಟುಮಾಡಲು ಸಂಗೀತವು ಪ್ರಮುಖ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಪಾಶ್ಚಾತ್ಯ ಸಂಗೀತದ ಕಡೆಗೆ ಆಸಕ್ತಿ ವಹಿಸುತ್ತಿರುವಾಗ ಸ್ವರಮಾಲಾ ಕಾರ್ಯಕ್ರಮದ ಮೂಲಕ ಯುವಜನತೆಯನ್ನು ಪೋಷಿಸುತ್ತಾ ಭಾರತೀಯ ಸಂಗೀತದ ಅಭಿರುಚಿಯನ್ನು ಉಳಿಸಬಲ್ಲುದು ಎಂದರು.

ಸಂಗೀತ ಸೇವಾ ಕಾರ್ಯಕ್ರಮ: ಬಳಿಕ ನಡೆದ ಸಂಗೀತ ಸೇವಾ ಕಾರ್ಯಕ್ರಮದಲ್ಲಿ ಆದಿತ್ಯ ಎಮ್.ಎಮ್., ಕುಮಾರಿ ಶೋಭಾ ಕಾಣಿಯೂರು, ಶ್ರೀಮತಿ ಸರಸ್ವತಿ ಆರ್.ಮಯ್ಯ, ಕುಮಾರಿ ರಕ್ಷಿತಾ ಮಯ್ಯ, ಕುಮಾರಿ ಪಂಚಮಿ ಸರ್ಪಂಗಳರವರು ಹಾಡುಗಾರಿಕೆಯನ್ನು ನಿರ್ವಹಿಸಿದರೆ ವಯಲಿನ್‌ನಲ್ಲಿ ವಿದ್ವಾನ್ ಬಲರಾಜ್ ಕಾಸರಗೋಡು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆರವರು ಸಹಕರಿಸಿದರು.

ಮೌನ ಪ್ರಾರ್ಥನೆ: ಇತ್ತೀಚೆಗೆ ಅಗಲಿದ ಸಂಸ್ಥೆಯ ಹಿತೈಷಿ ಶ್ರೀಮತಿ ಪದ್ಮಿನಿರವರಿಗೆ ಭಗವಂತನು ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಈಶ್ವರ್ ಬೆಡೇಕರ್ ಉಪಸ್ಥಿತರಿದ್ದರು. ನಂದಿನಿ ಎಸ್ ಪ್ರಾರ್ಥಿಸಿದರು. ಮಯೂರಿ ಪೊಳಲಿ ಸ್ವಾಗತಿಸಿ, ಸೌಪರ್ಣಿಕ ಬೆಡೇಕರ್ ವಂದಿಸಿದರು. ಶ್ರೀಮತಿ ವಾಣಿ ಅತಿಥಿಗಳ ಪರಿಚಯ ಮಾಡಿದರು. ತೇಜಸ್ವಿನಿ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.