ಜ.17ರಿಂದ 24 ಮಠದಬೆಟ್ಟು ರಾಜರಾಜೇಶ್ವರಿ ದೇವಸ್ಥಾನ ಪುನಃಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೂರು ವರ್ಷಗಳಷ್ಟು ಇತಿಹಾಸವಿರುವ ಕೋಡಿಂಬಾಡಿ ಗ್ರಾಮದ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪುನ:ಪ್ರತಿಷ್ಠಾ-ಬ್ರಹ್ಮಕಲಶಾಭಿಷೇಕವು  ಶ್ರೀಕ್ಷೇತ್ರದ ತಂತ್ರಿ ಬ್ರಹ್ಮ ಶ್ರೀ ವೇದಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ಜ.17ರಿಂದ ಜ.24ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನೀವಾಸ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೂರು ವರ್ಷಗಳ ಬಳಿಕ ಸುಮಾರು ರೂ.1ಕೋಟಿ ವೆಚ್ಚದಲ್ಲಿ ದೇವಸ್ಥಾನದ ಪುನರ್ ನಿರ್ಮಾಣಗೊಂಡಿರುತ್ತದೆ. ದೇವಸ್ಥಾನದ ಗುಡಿಯು ಸಂಪೂರ್ಣ ಶಿಲಾಮಯವಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂ.7ಲಕ್ಷ, ಸಂಸದರ ನಿಧಿಯಿಂದ ತಡೆಗೋಡೆ ನಿರ್ಮಾಣಕ್ಕೆ ರೂ.3ಲಕ್ಷ ಸೇರಿದಂತೆ ಊರ ಪರವೂರು ಭಕ್ತಾದಿಗಳ ಸಹಕಾರದೊಂದಿಗೆ ದೇವಸ್ಥಾನದ ಪುನರ್ ನಿರ್ಮಾಣವಾಗಿದೆ ಎಂದರು.

ಜ.17ರಂದು ಕುಂಭಾಭಿಷೇಕ ಕಾರ್ಯಕ್ರಮಗಳು ನಡೆಯಲಿದೆ. ಜ.19ರಂದು ಸಂಜೆ ಶ್ರೀಕ್ಷೇತ್ರದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಬಳಿಕ ದೇವತಾ ಪ್ರಾರ್ಥನೆ, ಸಪ್ತಶುದ್ಧಿ,ಪ್ರಾಸಾದ ಶುದ್ಧಿ, ಅಸ್ತ್ರಕಲಶ ಪ್ರತಿಷ್ಠಾ ರಾಕ್ಷೋಘ್ನಹೋಮ,ವಾಸ್ತುಪೂಜಾ,ವಾಸ್ತುಹೋಮ,ವಾಸ್ತುಬಲಿ,ದಿಗ್ಬಲಿ ನಡೆಯಲಿದೆ. ಜ.20ರಂದು ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ತುಮಕೂರು ಹೆಬ್ಬೂರು ಮಠದ ಶ್ರೀ ಮಾಧವಾಶ್ರನ ಸ್ವಾಮೀಜಿ ಉದ್ಘಾಟಸಿ, ಆಶೀರ್ವಚನ ನೀಡಲಿದ್ದಾರೆ. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ! ವರದರಾಜ ಚಂದ್ರಗಿರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶೃಂಗೇರಿ ಮಠದ ಮಂಗಳೂರು ಕೋಟೆಕಾರು ಶಾಖಾ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಅಧ್ಯಕ್ಷತೆ ವಹಿಸಲಿದ್ದಾರೆ.  ಶಾಸಕರು, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾದ  ಶಕುಂತಳಾ ಟಿ.ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಸಂದ್ಯಾ ರಾಮಚಂದ್ರ, ಬೆಳ್ತಂಗಡಿ ಕೊಲ್ಲಿ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಕೆ ವಾಸುದೇವ ರಾವ್ ಕಕ್ಕೆನೇಜಿ, ಮಂಗಳೂರಿನ ಉದ್ಯಮಿ ಕೆ. ಹರ್ಷಕುಮಾರ್ ಕ್ಯಾದಿಗೆ, ಕೋಡಿಂಬಾಡಿ ಹಿ.ಪ್ರಾ ಶಾಲಾ ಮುಖ್ಯಗುರು ಜಯಂತಿ ಎಸ್, ಎಪಿಎಂಸಿ ಸದಸ್ಯರೂ, ಕೋಡಿಂಬಾಡಿ ಹಿ.ಪ್ರಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ ಕೃಷ್ಣ ನೈಕ್ ಕೃಷ್ಣಗಿರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ಶ್ರೀ ಸುಬ್ರಹ್ಮಣ್ಯ ಸಭಾ ಯಕ್ಷಗಾನ ಕಲಾಮಂಡಳಿ, ಮಂಗಳೂರು – ಇವರಿಂದ ’ಶ್ರೀ ಕೃಷ್ಣ ಪಾರಿಜಾತ ’-ಯಕ್ಷಗಾನ ನಡೆಯಲಿದೆ. ಜ.21ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಅಖಿಲ ಭಾರತ ಬ್ರಾಹ್ಮಣ ಸಭಾದ ಅಧ್ಯಕ್ಷ ಎ. ಶಿವರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ. ರಾಧಾಕೃಷ್ಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಠಂತಬೆಟ್ಟು  ಶ್ರೀ ಮಹಿಷಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು, ಪುತ್ತೂರು ತಾ.ಪಂ ಅಧ್ಯಕ್ಷೆ  ಪುಲಸ್ತ್ಯಾ ರೈ, ಕಡಬ  ಶ್ರೀಕಂಠಸ್ವಾಮಿ ಮತ್ತು  ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೆ. ಗೋಪಾಲ ರಾವ್ ಬಿಳಿನೆಲೆ, ಬೆಳ್ತಂಗಡಿ ಶ್ರೀಸುಬ್ರಹ್ಮಣ್ಯ ಸ್ಥಾನಿಕ ಸಂಘದ ಅಧ್ಯಕ್ಷ ಪಿ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು ಶ್ರೀ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಬಿ. ರಘು ಶಾಂತಿನಗರ, ಕೋಡಿಂಬಾಡಿ ಗ್ರಾ.ಪಂ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಲಿಂಗಪ್ಪ ಕಾಪಿಕಾಡು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಶ್ರೀಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ವತಿಯಿಂದ ನೃತ್ಯ-ಗಾನ-ವೈಭವ ಕಾರ್ಯಕ್ರಮ ನಡೆಯಲಿದೆ. ಜ.22ರಂದು ಬೆಳಿಗ್ಗೆ ಚಂಡಿಕಾ ಹವನ, ಪ್ರಾಯಶ್ಚಿತ್ತ ಹೋಮ, ಶಾಂತಿಹೋಮ, ಇಂದ್ರಾದಿ ದಿಕ್ಪಾಲಬಲಿ ಶಿಲಾ ಪ್ರತಿಷ್ಠೆ ನಡೆಯಲಿದೆ. ಸಂಜೆ ಗಣಪತಿ ಬಿಂಬ ಶುದ್ಧಿ, ಶಯ್ಯಾಧಿವಾಸಾದಿ ಪ್ರತಿಷ್ಠಾಪೂರ್ವಾಂಗ ವಿಧಿಗಳು, ಏಕೋನ ಪಂಚಾಶತ್ ಕಲಶಪ್ರತಿಷ್ಠಾ, ಅಧಿವಾಸ ಹೋಮ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಎಂ.ಸಿ.ಎಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಪ್ರಭಾಕರ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ ಉಪನ್ಯಾಸಕ ಡಾ.ಶ್ರೀಶಕುಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.  ಬೆಂಗಳೂರಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಎಂ, ಜಿ.ಪಂ ಸದಸ್ಯ ಕೇಶವ ಗೌಡ ಬಜತ್ತೂರು,  ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ  ಸಿ.ಎಸ್.ರಾವ್, ಸುಳ್ಯ ಸುಬ್ರಹ್ಮಣ್ಯ ಸ್ಥಾನಿಕ ಸೇವಾ ಸಂಘದ ಭಾಸ್ಕರ ರಾವ್ ಕೇರ್ಪಳ, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಬಾಬು ಗೌಡ ಭಂಡಾರಮನೆ, ಸದಸ್ಯರಾದ  ಭವ್ಯ ವಿ.ಶೆಟ್ಟಿ, ಭವಾನಿ ಸುಂದರ ಹಾಗೂ ಯಶೋಧ ಬಾಲಕೃಷ್ಣ ಗೌಡ ಕಾಪು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾರ್ಪಳ್ಳಿ ಶ್ರೀ ಗಂಗಾಧರ್ ರಾವ್ ಹಾಗೂ ಸಹೋದರರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಮತ್ತು ಕಿಶೋರ್ ಡಿ.ಶೆಟ್ಟಿ ಯವರ ನಿರ್ದೇಶನದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದರಿಂದ “ಬದ್ಕೆರೆಗಾದ್ ಸೈಪಿನಕುಲು”-ತುಳು ಹಾಸ್ಯ ನಾಟಕ ನಡೆಯಲಿದೆ. ಜ.23ರಂದು ಬೆಳಿಗ್ಗೆ ಗಣಪತಿ ಬಿಂಬ ಪ್ರತಿಷ್ಠಾ, ಕಲಾಷಾಭಿಷೇಕ, ಪ್ರಸನ್ನ ಪೂಜೆ, ಗಣೇಶಾಥರ್ವಶೀರ್ಷ ಹೋಮ ಸಂಜೆ ಕಲಶಮಂಡಲ ರಚನೆ, ಏಕೋತ್ತರತ್ರಿಶತಕಲಶಸಹಿತ ಬ್ರಹ್ಮಕುಂಭ ಸ್ಥಾಪನೆ, ಅಧಿವಾಸ ಹೋಮ, ದೈವಗಳ ಮಂಚ-ಉಪಾಧಿಶುದ್ಧಿ, ನವಕಲಶ ಸ್ಥಾಪನೆ ಹಾಗೂ ಅಧಿವಾಸ ಹೋಮ ನಡೆಯಲಿದೆ.  ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವಿರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಗುರು ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ, ತಾ.ಪಂ ಸದಸ್ಯೆ ನೇತ್ರಾವತಿ ಪಿ ಗೌಡ, ಮಂಗಳೂರು ಕೆನರಾ ಮೆಡಿಕಲ್ಸ್‌ನ ಮ್ಹಾಲಕ ಪಿ.ಕೆ.ಎಸ್ ಗೌಡ, ಕೋಡಿಂಬಾಡಿ ಗ್ರಾ.ಪಂ ಸದಸ್ಯರಾದ ಮನೋಹರ ಗೌಡ ಡಿ.ವಿ ದೇವಶ್ಯ ಹಾಗೂ ರಾಮಚಂದ್ರ ಪೂಜಾರಿ ಶಾಂತಿನಗರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಬಳಿಕ ವರ್ಷಾ ವೆಂಕಟೇಶ್ ಶ್ಯಾನುಬಾಗ್ ಹಾಗೂ ಕಾವ್ಯ ರಾವ್ ಬಳಗದವರಿಂದ ಭಕ್ತಿ ಸಂಗೀತ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸೌಜನ್ಯ ನಂದಳಿಕೆಯವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಹಾಗೂ ಶರವೂರು ಸುಬ್ರಹಣ್ಯ ರಾವ್ ಮತ್ತು ಬಳಗದವರಿಂದ ಮಕ್ಕಳ ಯಕ್ಷಗಾನ ’ಮಹಿಷಾಸುರ ವಧೆ’ ಎಂಬ ಯಕ್ಷಗಾನ ನಡೆಯಲಿದೆ.

ಜ.24ರಂದ ಪ್ರಾತಃಕಾಲ ಸೂರ್ಯೋದಯಕ್ಕೆ ಕವಾಟೋದ್ಘಾನ, ಪ್ರಾತಃಪೂಜಾ, ಶಾಂತಿ-ಪ್ರಾಯಶ್ಚಿತ್ತಾದಿ ಕಲಾಶಾಭಿಷೇಕ, ದೇವರಿಗೆ ಬ್ರಹ್ಮಕುಂಭಾಭಿಷೇಕ, ಅರ್ಚನೆ, ಪ್ರಸನ್ನಪೂಜಾ, ಮಂಗಳಾರತಿ, ಅವಸ್ತ್ರಾವಪ್ರೋಕ್ಷಣ, ಶ್ರೀ ರಕ್ತೇಶ್ವರೀ ಮತ್ತು ದುಗ್ಗಿಲಾಯ ದೈವಗಳ ಪ್ರತಿಷ್ಠಾ ಅಭಿಷೇಕ ಪೂಜಾ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಉತ್ಸವಕರ್ಮಸಮರ್ಪಣ ಮಂತ್ರಾಕ್ಷತೆ ಹಾಗೂ ಸಂಜೆ ಸಾಮೂಹಿಕ ಮಹಾರಂಗಪೂಜೆ, ಮಂಗಲಾಚರಣ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಪ್ರವಚನ ನಡೆಯಲಿದ್ದು, ಮಂಗಳೂರು ಸನಾತನ ಸಂಸ್ಥೆಯ ವಿಜಯ ಕುಮಾರ್ ಪ್ರವಚನ ನೀಡಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ  ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ.  ವಿದ್ವಾಂಸ  ಪಂಜ ಭಾಸ್ಕರ ಭಟ್ ’ಬ್ರಹ್ಮ ಕಲಶದ ಪ್ರಾಮುಖ್ಯತೆ’ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಉದ್ಯಮಿ, ’ರೈ ಎಸ್ಟೇಟ್’, ಕೋಡಿಂಬಾಡಿ ಅಶೋಕ್ ಕುಮಾರ್ ರೈ ಕೆ. ಎಸ್, ಮೈಸೂರು ಜ್ಞಾನಶಕ್ತಿ ಸಾಂಸ್ಕೃತಿಕ ಸಭಾದ ಅಧ್ಯಕ್ಷ ಕೆ. ಆನಂದ ರಾವ್, ಶಿಲ್ಪಶಾಸ್ತ್ರ ತಜ್ಞ ಎಸ್.ಎಂ.ಪ್ರಸಾದ್ ಮುನಿಯಂಗಳ ಬಿಳಿನೆಲೆ, ಬ್ರಹ್ಮಶ್ರೀ ವೇದಮೂರ್ತಿ ವಾಗೀಶ ತಂತ್ರಿಗಳು ಉಡುಪಿ, ಮೈಸೂರು ಏಕ್ಸ ಮೋಟೋ ಕಂಟ್ರೋಲ್ ಸಂಸ್ಥೆಯ ಮ್ಹಾಲಕ ವೆಂಕಟ್ರಾಯ ಪ್ರಭೂ ಲಿಂಗಪಾಲು, ಕೋಡಿಂಬಾಡಿ ಗ್ರಾ.ಪಂ ಸದಸ್ಯರಾದ ರಮಣಿ ಚಿತ್ರಾ ಕಿನ್ನಿತ್ತಪಳಿಕೆ ಹಾಗೂ ಯಮುನಾ ಕುಶಾಲಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರಿಂದ – ಯಕ್ಷಗಾನ ಬಯಲಾಟ, ರಾತ್ರಿ ಪುತ್ತೂರು ಅಂಬಿಕಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ವಾನ್ ಯಸ್. ಮಂಜುನಾಥ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ಹೇಳಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಜಯಾನಂದ ಕೋಡಿಂಬಾಡಿ, ಪ್ರಧಾನ ಕಾರ್ಯದರ್ಶಿ ಎಂ ನಾಗೇಶ ಶರ್ಮ, ಕೋಶಾಧಿಕಾರಿ ಎಂ. ನರೇಂದ್ರ ರಾವ್ ಪುತ್ರಬೈಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣ ರಾವ್ ಕುಂಜಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹೊರೆ ಕಾಣಿಕೆ ಸಮರ್ಪಣೆ

ಜ.19ರಂದು ಮಾಣಿ, ಪೆರ್ನೆ ಬಿಳಿಯೂರು, ಜ.20ರಂದು ಸುಳ್ಯ, ಪುತ್ತೂರು, ಸೇಡಿಯಾಪು ಹಾಗೂ ಜ.21ರಂದು ಬೆಳ್ತಂಗಡಿ, ಕಡಬ, ಉಪ್ಪಿನಂಗಡಿ, ಶಾಂತಿನಗರ ಹಾಗೂ ಬೆಳ್ಳಿಪ್ಪಾಡಿ ಭಾಗದ ಭಕ್ತಾಧಿಗಳಿಂದ ದೇವಸ್ಥಾನಕ್ಕೆ ಹೊರೆಕಾಣಿಕೆಯ ಸಮರ್ಪಣೆ ನಡೆಯಲಿದೆ.

ಎನ್.ಕೆ ಜಗನ್ನೀವಾಸ ರಾವ್, ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.