ಜ.16-17 : ಸುನಾದ ಸಂಗೀತ ಕಲಾ ಶಾಲಾ ಸಂಗೀತೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುನಾದ ಸಂಗೀತ ಕಲಾ ಶಾಲೆ ಪುತ್ತೂರು ಶಾಖೆಯ ’ಸುನಾದ ಸಂಗೀತೋತ್ಸವ’ಕಾರ್ಯಕ್ರಮವು ಜ.16 ಹಾಗೂ 17ರಂದು ಎರಡು ದಿನಗಳ ಕಾಲ ನೆಹರು ನಗರ ಸುದಾನ ವಸತಿಯುತ ಶಾಲೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವಿದುಷಿ ಮಾಲತಿ ಡಿ ಹೇಳಿದರು.

ಕಳೆದ 23 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪೋಷಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸುನಾದ ಸಂಗೀತ ಕಲಾ ಶಾಲೆಯು ಪ್ರತಿಭೆಗಳಿಗೆ ಉತ್ತಮ ವೇದಿಕೆ ನೀಡುವುದರ ಜೊತೆಗೆ ಸಂಗೀತ ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ. ಪುತ್ತೂರು, ಸುಳ್ಯ, ಕೊಯಿಲ ಹಾಗೂ ಸುಬ್ರಹ್ಮಣ್ಯಗಳಲ್ಲಿ ಶಾಖೆಯನ್ನು ಹೊಂದಿದ್ದು ಸುಮಾರು 500 ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕಲಾ ಶಾಲೆಯು ವಿದ್ಯಾರ್ಥಿಗಳ ಮೂಲಕ ಪ್ರತಿವರ್ಷ 70ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಜ.16ರಂದು ಮಧ್ಯಾಹ್ನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಸಂಗೀತ ಕಲಾ ಶಾಲೆಯ ಸಂಚಾಲಕ ವಿದ್ವಾನ್ ಕಾಂಚನ ಈಶ್ವರ ಭಟ್ ದೀಪ ಬೆಳಗಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾಂಚನ ಈಶ್ವರ ಭಟ್‌ರವರಿಗೆ ಗುರುವಂದನಾ ಕಾರ್ಯಕ್ರಮವು ನಡೆಯಲಿರುವುದು. ಬಳಿಕ ಸುನಾದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ವೇಣುವಾದನ ಕಛೇರಿ ನಡೆಯಲಿದೆ. ವೇಣುವಾದನದಲ್ಲಿ ವಿದುಷಿ ಸ್ಮಿತಾಕಿರಣ್ ಮೈಸೂರು, ವಯಲಿನ್‌ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭೋಗ್ ಮಂಗಳೂರು, ಮೃದಂಗದಲ್ಲಿ ವಿದ್ವಾನ್ ಎಂ. ಆರ್ ಸಾಯಿನಾಥ್ ಮಂಗಳೂರು ಹಾಗೂ ಘಟಂನಲ್ಲಿ ವಿದ್ವಾನ್ ವಿ.ಎಸ್ ರಮೇಶ್ ಮೈಸೂರು ಸಹಕರಿಸಲಿದ್ದಾರೆ ಎಂದರು. ಜ.17ರಂದು ಬೆಳಿಗ್ಗೆ ಸುನಾದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಸಂಜೆ ನಡೆಯುವ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ಸಂಗೀತ ಕಲಾನಿಧಿ ಮಧುರೈ ಟಿ.ಎನ್ ಶೇಷಗೋಪಾಲ್ ಚೆನ್ನೈ, ವಯಲಿನ್‌ನಲ್ಲಿ ವಿದ್ವಾನ್ ವಿಠಲರಾಮ ಮೂರ್ತಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಘಟಂನಲ್ಲಿ ತುಮಕೂರು ಬಿ ಶಶಿ ಶಂಕರ್ ಮೈಸೂರು, ಮೋರ್ಚಿಂಗ್‌ನಲ್ಲಿ ವಿದ್ವಾನ್ ವಿ.ಎಸ್ ರಮೇಶ್ ಮೈಸೂರು ಸಹಕರಿಸಲಿದ್ದಾರೆ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.