ಕಡಬದ ಹಿರಿಯ ಆರೋಗ್ಯ ಸಹಾಯಕಿ ಅನ್ನಮ್ಮ ನಿಧನ

Puttur_Advt_NewsUnder_1
Puttur_Advt_NewsUnder_1

Annamma Thಕಡಬ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇ.ಜಿ.ಅನ್ನಮ್ಮ (60ವ) ಹೃದಯಾಘಾತದಿಂದ ಜ.12 ರಂದು ಮಂಗಳೂರಿನ ಒಮೇಗ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಲೇಡಿ ಹೆಲ್ತ್ ವಿಸಿಟರ್ ತರಬೇತಿ ಪಡೆದು 1979 ಮಾರ್ಚ್ 1 ರಂದು ಚಿತ್ರದುರ್ಗದ ಚಲ್ಲಕೆರೆ ತಾಲೂಕಿನ ಥಳಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಸೇರಿದ ಅವರು ನಂತರ ಮೈಸೂರು ಜಿಲ್ಲೆಯ ತಗಡೂರು, ನಂಜನಗೂಡಿನ ದೇವನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ 2000 ಜೂನ್‌ನಿಂದ ದಕ್ಷಿಣ ಕನ್ನಡ ಜಿಲ್ಲಾ ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದು, 2012 ಜೂನ್ ನಿಂದ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಇನ್ನು 3 ತಿಂಗಳಲ್ಲಿ ನಿವೃತ್ತಿ ಹೊಂದುವವರಾಗಿದ್ದರು.

ಮೃತರು ಪತಿ ಬಿಳಿನೆಲೆ ಗ್ರಾ.ಪಂ.ಮಾಜಿ ಸದಸ್ಯ ಅಲೆಕ್ಸಾಂಡರ್, ಪುತ್ರಿಯರಾದ ಸ್ಟಾಫ್ ನರ್ಸ್ ಪ್ರಿನ್ಸಿ, ಪ್ರಿಯಾಂಕ(ಬಿಎಸ್ಸಿ), ಪುತ್ರ ಇಂಜಿನಿಯರ್ ಪೃಥ್ವಿರಾಜ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನೆಟ್ಟಣ ಸೈಂಟ್ ಮೇರೀಸ್ ಚರ್ಚ್‌ನಲ್ಲಿ ಜ.13 ರಂದು ನಡೆಯಲಿದೆ. ಪಾರ್ಥಿವ ಶರೀರವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜ.12 ರಂದು ಸಂಜೆ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ, ಡಾ| ಸುಚಿತ್ರಾ ರಾವ್, ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ್ ಕೆ ಅಲ್ಲದೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಸ್ಟಾಫ್ ನರ್ಸ್‌ಗಳು, ಕಿರಿಯ ಆರೋಗ್ಯ ಸಹಾಯಕಿಯರು ಸೇರಿದಂತೆ ರಾಜಕೀಯ, ಧಾರ್ಮಿಕ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಮೃತರ ದರ್ಶನ ಪಡೆದು ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.