ಮರ್ದಾಳ ಗ್ರಾ.ಪಂ.ನ ವಿಶೇಷ ಗ್ರಾಮಸಭೆ; ಮುಂದಿನ ಐದು ವರ್ಷಗಳ ಅಭಿವೃದ್ದಿ ಬೇಡಿಕೆ ಕ್ರಿಯಾ ಯೋಜನೆ ತಯಾರಿ

mardala g.pಕಡಬ: ಮರ್ದಾಳ ಗ್ರಾಮ ಪಂಚಾಯತ್‌ಗೊಳಪಟ್ಟ ಬಂಟ್ರ ಮತ್ತು 102 ನೆಕ್ಕಿಲಾಡಿ ಗ್ರಾಮಗಳ ಮುಂದಿನ 5 ವರ್ಷಗಳ ಅಭಿವೃದ್ದಿ ಬಗ್ಗೆ ಬೇಡಿಕೆ ಪಡೆದು ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಜ.11 ರಂದು ಮರ್ದಾಳ ಅಂಬೇಡ್ಕರ್ ಭವನದಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.
ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತ ಎಂ ಅಧ್ಯಕ್ಷತೆ ವಹಿಸಿ ಮುಂದಿನ 5 ವರ್ಷಗಳಲ್ಲಿ ಗ್ರಾ.ಪಂ.ನ ವಿವಿಧ ವಾರ್ಡ್‌ಗಳ ಅಗತ್ಯವಾದ ಬೇಡಿಕೆಗಳಿಗೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸುವರೇ ಇಂದು ಗ್ರಾಮಸಭೆ ನಡೆಸಿದ್ದು ಗ್ರಾಮಸ್ಥರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಸಲಹೆ ಸೂಚನೆ ನೀಡಬೇಕೆಂದರಲ್ಲದೆ ಈಗಾಗಲೇ ತಯಾರಿಸಿದ ಪಟ್ಟಿಯಲ್ಲಿ ಯಾವುದಾದರೂ ಬಿಟ್ಟು ಹೋಗಿದ್ದರೆ ತಮ್ಮ ಸಲಹೆ ಮೆರೆಗೆ ಸೇರಿಸಿಕೊಳ್ಳಲಾಗುವುದು ಎಂದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಭುವನೇಂದ್ರ ಕುಮಾರ್‌ರವರು ಮಾಹಿತಿ ನೀಡಿ 14ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಮುಂದಿನ 5ವರ್ಷಗಳ ಪಂಚವಾರ್ಷಿಕ ಪಟ್ಟಿ ತಯಾರಿಸಲಾಗುತ್ತಿದ್ದು ಅಲ್ಲದೆ ಡಾ| ಅಂಬೇಡ್ಕರ್ ವಸತಿ ಯೋಜನೆಯಲ್ಲಿ ವಸತಿ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಸಲಾಗುತ್ತಿದೆ. ತಾವುಗಳು ಈ ಬಗ್ಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕೆಂದರು.
ಉಪಾಧ್ಯಕ್ಷೆ ಲತಾ ಕೆ.ಎಸ್, ತಾ.ಪಂ ಸದಸ್ಯೆ ದಿವ್ಯಾ ಬಾಲಕೃಷ್ಣ, ಪಂಚಾಯತ್ ಸದಸ್ಯರಾದ ಸುಲೈಮಾನ್.ಪಿ, ಹರೀಶ್ ಕೊಡಂದೂರು, ದಾಮೋದರ ಗೌಡ ಡೆಪ್ಪುಣಿ, ಅಬೂಬಕ್ಕರ್, ಸುಶೀಲ, ಗಿರಿಜ, ಮೀನಾಕ್ಷಿ ಉಪಸ್ಥಿತರಿದ್ದರು. .
ಪ್ರಮುಖರಾದ ವೆಂಕಟರಮಣ ಗೌಡ, ಗಣೇಶ್ ಕೈಕುರೆ, ಪಂಚಾಯತ್ ಮಾಜಿ ಉಪಾಧ್ಯಕ್ಷ ವಿಜಯ ಕುಮಾರ್ ರೈ ಕೆರ್ಮಾಯಿ, ಮಾಜಿ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ನಡುಮಜಲು, ವಿಠಲ ಗೌಡ ಪಾಂಗ, ರಾಮಯ್ಯ ಆಳ್ವ ಕುಡಾಲ, ಕಿ.ಆ.ಸಹಾಯಕಿಯರಾದ ಸೂಸಮ್ಮ , ಮರಿಯಮ್ಮ , ಅಂಗನವಾಡಿ ಕಾರ್ಯಕರ್ತೆಯರಾದ ದಮಯಂತಿ, ಮೋಹಿನಿ, ಪಾರ್ವತಿ, ಲಿಲ್ಲಿಡಿಸೋಜ, ಆಶಾ ಕಾರ್ಯಕರ್ತೆಯರಾದ ದೇವಕಿ, ಸುಚರಿತಾ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಭುವನೇಂದ್ರ ಕುಮಾರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಆಶಾಲತಾ, ಹಸ್ಸನ್ ಪ್ರಾರ್ಥನೆ ಹಾಡಿದರು. ಗುಮಾಸ್ತ ಓಮನ ನೈಕ್  ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.