ತಿಂಗಳಾಡಿ: ದರ್ಬೆ ಮಸೀದಿಯಲ್ಲಿ ತಾಜುಲ್ ಉಲಮಾ ಅನುಸ್ಮರಣಾ ಸಂಗಮ

IMG-20160112-WA0027ಪುತ್ತೂರು: ತಾಜುಲ್ ಉಲಮಾ ಅವರು ನಮ್ಮೆಡೆಯಿಂದ ಮರೆಯಾಗಿ ಹೋಗಿರಬಹುದು ಆದರೆ ಅವರು ನಡೆಸಿರುವ ಆದರ್ಶಮಯ ಜೀವನ ಹಾಗೂ ಅವರು ಬೊಧಿಸಿದ ಬೋಧನೆಗಳು ಎಂದಿಗೂ ಮರೆಯಾಗಲು ಸಾಧ್ಯವಿಲ್ಲ ಎಂದು ಉಡುಪಿ, ಚಿಕ್ಕಮಗಳೂರು ಖಾಝಿ ಅಲ್‌ಹಾಜ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಹೇಳಿದರು. ಜ.11ರಂದು ತಿಂಗಳಾಡಿ, ದರ್ಬೆ ಬೈತುರ್ರಹ್ಮಾನ್ ಸುನ್ನೀ ಜುಮಾ ಮಸೀದಿ ವಠಾರದಲ್ಲಿ ನಡೆದ ತಾಜುಲ್ ಉಲಮಾ ಅನುಸ್ಮರಣಾ ಸಂಗಮ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ತಾಜುಲ್ ಉಲಮಾ ಉಳ್ಳಾಲ ತಂಙಳ್‌ರಂತಹ ಮಹಾನುಭಾವರು ತೋರಿಸಿದ ರೀತಿಯಲ್ಲಿ ಜೀವನ ಸಾಗಿಸಬೇಕು ಹಾಗೂ ಅವರನ್ನು ಮಾದರಿಯಾಗಿ ಸ್ವೀಕರಿಸಿ ನಮ್ಮ ಜೀವನದಲ್ಲಿ ಅನುಸರಿಸಬೇಕು ಆಗ ಜೀವನದಲ್ಲಿ ವಿಜಯವನ್ನು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ಕಮ್ಮಾಡಿ ಹಾಜಿ ಮಾದರಿ:
ತಾಜುಲ್ ಉಲಮಾ ಅವರು ತನ್ನ ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರು ಜೊತೆಗೆ ಅಲ್ಲಾಹನು ಇಷ್ಟಪಡುವ ಕಾರ್ಯದಲ್ಲಿ ಮಾತ್ರ ತೊಡಗುತ್ತಿದ್ದರು ಎಂದ ಬೇಕಲ ಖಾಝಿಯವರು ಕಮ್ಮಾಡಿ ಇಬ್ರಾಹಿಂ ಹಾಜಿಯವರಿಗೆ ತಾಜುಲ್ ಉಲಮಾ ಪ್ರೇರೇಪಣೆಯಾಗಿದ್ದಾರೆಂದು ಅನಿಸುತ್ತಿದೆ, ಅವರು ಮಸೀದಿಗಳನ್ನು ನಿರ್ಮಿಸುತ್ತಿದ್ದಾರೆ, ತಮ್ಮ ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ ಇದೀಗ ಎಲ್ಲರಿಗೂ ಪ್ರಯೋಜನಕಾರಿಯಾಗುವ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕುಂಬ್ರ ಮರ್ಕಝುಲ್ ಹುದಾ ವಿಮೆನ್ಸ್ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಮಹಮ್ಮದ್ ಸಅದಿ ವಳವೂರು ಉದ್ಘಾಟಿಸಿದರು. ಪ್ರೊ. ಅಶ್ರಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಅಭ್ಯಾಗತರಾಗಿ ಸಂಯುಕ್ತ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮರ್ಕಝ್ ಕಾಲೇಜಿನ ಕಾರ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ದರ್ಬೆ ಮಸೀದಿ ಅಧ್ಯಕ್ಷ ಮಹಮ್ಮದ್ ಅಲಿ ಸಅದಿ ಬಲ್ಕಾಡ್, ಕಮ್ಮಾಡಿ ತಾಜುಲ್ ಉಲಮಾ ಹಿಫ್‌ಲ್ ಕಾಲೇಜಿನ ಪ್ರಿನ್ಸಿಪಾಲ್ ಹಾಫಿಲ್ ನಝೀರ್ ಅಹ್ಮದ್ ಸಖಾಫಿ, ಎಸ್.ವೈ.ಎಸ್ ದ.ಕ ಜಿಲ್ಲಾ ಕಾರ್ಯದರ್ಶಿ ಅಝೀಝ್ ಸಖಾಫಿ ಕೊಳ್ತಿಗೆ, ಮರ್ಕಝುಲ್ ಹುದಾ ಮುದರ್ರಿಸ್ ಡಿ.ಎಚ್ ಇಬ್ರಾಹಿಂ ಸಅದಿ, ಬಾವಾ ಹಾಜಿ ಕೂರ್ನಡ್ಕ, ಮಹಮ್ಮದ್ ಕೆಜಿಎನ್ ಕಲ್ಪಣೆ ಮೊದಲಾದವರು ಉಪಸ್ಥಿತರಿದ್ದರು. ಸ್ಥಳಿಯ ಖತೀಬ್ ಮಹಮೂದ್ ಮದನಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ದರ್ಬೆ ಮಸೀದಿ ಕಾರ್ಯದರ್ಶಿ ಅಶ್ರಫ್ ದರ್ಬೆ ಹಾಗೂ ಪದಾಧಿಕಾರಿಗಳು ಸಹಕಾರ ನೀಡಿದರು.

ಚಿತ್ರ: ಯೂಸುಫ್ ರೆಂಜಲಾಡಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.