ಪುತ್ತೂರು : ನಂದನ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1

4ಪುತ್ತೂರು : ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಸೌಹಾರ್ದ ಸಹಕಾರಿ ದಿನದ ಸಲುವಾಗಿ ನಂದನ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ ಪುತ್ತೂರು, ಜೈಂಟ್ಸ್ ಗ್ರೂಪ್ ಆಫ್ ಪುತ್ತೂರು ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್‌ಬ್ಯಾಂಕ್ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ “2ನೇ ವರ್ಷದ ರಕ್ತದಾನ ಶಿಬಿರ”ವು ನಂದನ ವಿವಿದೋದ್ದೇಶ ಸಹಕಾರಿ ನಿಯಮಿತ ಇದರ ಪ್ರಧಾನ ಕಛೇರಿ ಪುತ್ತೂರಿನಲ್ಲಿ ಜ.12 ರಂದು ನಡೆಯಿತು. ಕಾರ‍್ಯಕ್ರಮವನ್ನು ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರು ಬಿ.ಕಿಟ್ಟಣ್ಣ ಗೌಡ ರವರು ಉದ್ಘಾಟಿಸಿ ಎಲ್ಲರೂ ರಕ್ತದಾನವನ್ನು ನಿಸ್ವಾರ್ಥದಿಂದ ಮಾಡಬೇಕೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಡಾ. ರಾಮಚಂದ್ರ ಭಟ್ ರಕ್ತದಾನದ ಮಹತ್ವವನ್ನು ಮತ್ತು ಯಾರೆಲ್ಲ ರಕ್ತದಾನ ಮಾಡಬಹುದು ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿ ಪುರಸಭಾ ಮಾಜಿ ಉಪಾಧ್ಯಕ್ಷ ಲಾನ್ಸಿ ಮಸ್ಕರೇನಸ್ ರವರು ಮಾತನಾಡಿ ಎಲ್ಲರೂ 18 ವರ್ಷದ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ಆಚರಿಸಬೇಕೆಂದು ಹೇಳಿದರು.

ಪುತ್ತೂರು ನಂದನ ವಿವಿಧೋದ್ದೇಶ ಸಹಕಾರಿ ನಿಯಮಿತದ ಅಧ್ಯಕ್ಷ ಚಂದ್ರಶೇಖರ್.ಎಸ್  ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ‍್ಯಕ್ರಮವನ್ನು ಸಂಸ್ಥೆಯ ಸಿಬ್ಬಂದಿಗಳಾದ ಸುಚಿತ್ರಾ.ಕೆ ಮತ್ತು ರಾಧ ಪ್ರಾರ್ಥಿಸಿದರು. ಜೈಂಟ್ಸ್ ಪೆಡ್ರೆಶನ್ ಆಫೀಸರ್ ತೇಜೇಶ್ವರ್ ರಾವ್ ಉಡುಪಿ, ಕಟ್ಟಡ ಮಾಲಕ ಶಿವಪ್ರಸಾದ್ ಶೆಟ್ಟಿಯವರು ಮತ್ತು ಸಂಸ್ಥೆಯ ಎಲ್ಲ ನಿರ್ದೆಶಕರುಗಳು ಉಪಸ್ಥಿತರಿದ್ದರು.

ಜೈಂಟ್ಸ್ ಗ್ರೂಪ್ ಆಫ್ ಪುತ್ತೂರು ಇದರ ಅಧ್ಯಕ್ಷ ಎಸ್. ದಾಮೋದರ್ ಪಾಟಾಳಿ ಸ್ವಾಗತಿಸಿ,  ನಿರ್ದೆಶಕ ಉಪೇಂದ್ರ ಬಲ್ಯಾಯರವರು ವಂದಿಸಿದರು.  ಸಂಸ್ಥೆಯ ಮುಖ್ಯ ಕಾರ‍್ಯನಿರ್ವಹಕರಾದ ಮಹೇಶ್. ಕೆ ರವರು  ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.