ಪೆರಾಬೆ ಪಂಚಾಯತ್ ವ್ಯಾಪ್ತಿಯಲ್ಲಿ ಸೋಲಾರ್ ಘಟಕಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1

perabe news-12ಪೆರಾಬೆ : ದಕ್ಷಿಣ ಕನ್ನಡ ಜಿಲ್ಲೆಯನ್ನು ಸೋಲಾರ್ ಜಿಲ್ಲೆಯಾಗಿ ಪರಿವರ್ತಿಸಿ ಕರ್ನಾಟಕ ರಾಜ್ಯದ ಸೋಲಾರ್‌ಗೆ ಮಾದರಿ ಗ್ರಾಮವನ್ನಾಗಿಸುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ ನುಡಿದರು. ಅವರು ಜ. 12ರಂದು ಪೆರಾಬೆ ಗ್ರಾಮಕ್ಕೆ ಭೇಟಿ ನೀಡಿ ಎಂಡೋ ಪೀಡಿತರ ಮನೆಗಳಿಗೆ ಅಳವಡಿಸಲಾದ ಸೋಲಾರ್ ಘಟಕಕ್ಕೆ ಚಾಲನೆ ನೀಡಿ ಪೆರಾಬೆ ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಎಂಡೋ ಸಂತ್ರಸ್ಥರ ಮನೆಗಳಿಗೆ  ವಿಧಾನ ಪರಿಷತ್ ಅನುದಾನದಿಂದ ಬಿಡುಗಡೆಯಾದ ಮೊತ್ತದಲ್ಲಿ ಸೋಲಾರ್ ಘಟಕವನ್ನು ನಿರ್ಮಿಸಿ ಕೊಡುತ್ತೇನೆ. ಈ ಘಟಕದಿಂದ ಎರಡು ಬಲ್ಬ್ ಮತ್ತು ಒಂದು ಫ್ಯಾನ್ ಈ ಸೋಲಾರ್ ಘಟಕದಿಂದ ಚಾಲೂ ಮಾಡಬಹುದಾಗಿದೆ.  ಸರಕಾರ ಈಗಾಗಲೇ ಎಂಡೋ ಸಂತ್ರಸ್ಥರಿಗೆ ಯೋಗ್ಯ ಮಾಸಾಸನ, ಉಚಿತ ಪಡಿತರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಆಲಂಕಾರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾಶ್ವತ ಪುನರ್ವಸತಿ ಕೇಂದ್ರದ ನಿರ್ಮಾಣಕ್ಕಾಗಿ ವಿಧಾನ ಪರಿಷತ್‌ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದರು.

ಸೋಲಾರ್ ಘಟಕವನ್ನು ನಾನು ಸ್ವತಃ ನನ್ನ ಮನೆಯಲ್ಲಿ ಆಳವಡಿಸಿ ನಾನು ವಿಧಾನ ಪರಿಷತ್‌ನಲ್ಲಿ ಇದರ ಮಹತ್ವವನ್ನು ತಿಳಿಯಪಡಿಸಿದ್ದೆ. ಸೋಲಾರ್‌ನ ಮಹತ್ವವನ್ನು ತಿಳಿದುಕೊಂಡ ಮುಖ್ಯಮಂತ್ರಿಗಳು ವಿಕಾಸ ಸೌಧ, ವಿಧಾನಪರಿಷತ್‌ಗೆ ಪ್ರಥಮವಾಗಿ ಸೋಲಾರ್ ಅಳವಡಿಸಲು ಸೋಚಿಸಿದ್ದರು. ಈ ಮೂಲಕ ಸ್ವತಃ ನಾನೇ ಸೋಲಾರ್ ನನ್ನ ಮನೆಗೆ ಅಳವಡಿಸಿ ಇತರರಿಗೆ ಮಾದರಿಯಾಗಿದ್ದೇನೆ. ಇದೀಗ ದ.ಕ.ಜಿಲ್ಲೆಯಲ್ಲಿ ಸ್ವಯಂ ಪ್ರೇರಿತರಾಗಿ ಪೆರಾಬೆ ಗ್ರಾಮದ ಜನರು ಸೋಲಾರ್ ಅಳವಡಿಸುತ್ತಿದ್ದು ಇದು ಉತ್ತಮ ಬೆಳವಣಿಗೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಧಾನ ಪರಿಷತ್ ಸದಸ್ಯರಿಂದ ಪೆರಾಬೆ ಗ್ರಾಮಕ್ಕೆ ಸೋಲಾರ್ ಘಟಕ ಅಳವಡಿಸಲು ಅನುದಾನಗಳನ್ನು ತರಿಸಿಕೊಡುವುದಾಗಿ ಭರವಸೆಯಿತ್ತರು.

ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ.ಸಿ ಪಾಟಾಳಿಯವರ ಅಧ್ಯಕ್ಷತೆಯಲ್ಲಿ  ನಡೆದ ಸಭೆಯ ವೇದಿಕೆಯಲ್ಲಿ ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ, ಪೆರಾಬೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಲಿತಾ.ಜಿ.ಡಿ, ಸೋಲಾರ್ ಅನುಷ್ಠಾನ ಸಮಿತಿ ಅಧ್ಯಕ್ಷೆ ಯಮುನಾ ಎಸ್.ರೈ, ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ.ಪಿ ವರ್ಗಿಸ್, ಪೆರಾಬೆ ಪಂಚಾಯತ್ ಮಾಜಿ ಸದಸ್ಯ ರೋಯಿ ಅಬ್ರಾಹಂ, ಸೆಲ್ಕೋ ಸೋಲಾರ್ ಘಟಕದ ಮೆನೇಜರ್ ಕೃಷ್ಣರಾಜ್, ಸುಧಾಕರ, ಪೆರಾಬೆ ಪಂಚಾಯತ್ ಸದಸ್ಯರಾದ, ಅಮೃತಾ ರೈ, ಗಂಗಾರತ್ನಾ, ಚಂದ್ರಶೇಖರ ರೈ, ದಿನೇಶ್.ಎ, ಮಧುರಾ, ಚಂದ್ರಶೇಖರ ರೈ, ಸುರುಳಿ ಬಾಲಸುಬ್ರಹಣ್ಯ ದೇವಾಲಯದ ಆಡಳಿತ ಮೊಕ್ತೇಸರರಾದ ರಾಮಮೋಹನ್ ರೈ,  ಎಂಡೋ ಹೋರಾಟ ಸಮಿತಿ ಅಧ್ಯಕ್ಷ ಪೀರ್‌ಮಹಮ್ಮದ್, ಯತೀಶ್ ಕುಮಾರ್ ಬಾನಡ್ಕ, ಫಸಲ್ ಕೊಡಿಂಬಾಳ, ರೆ|.ಫಾ.ಮಾಣಿವೆಳ್‌ತೇಡ್‌ತ್ ಪರಂಬಿಳ್, ಕಮಲಾಕ್ಷ ರೈ ಪರಾರಿ, ಮಹಾಬಲ ಶೆಟ್ಟಿ ಬಾಲಾಜೆ, ಚೆನ್ನಕೇಶವ ರೈ ಗುತ್ತುಪಾಲು, ಓ.ಜೆ ಮೈಕಲ್, ಶೋಭಿತ್.ಕೆ.ಸಿ, ಸೋಲಾರ್ ಅನುಷ್ಠಾನ ಸಮಿತಿಯ ಜೊತೆ ಕಾರ್ಯದರ್ಶಿ ಪ್ರದೀಪ್ ರೈ, ಮುರಳಿಧರ ರೈ ಬಳಂಪೋಡಿ, ಜಿ.ಪಿ.ಶೇಷಪತಿ ರೈ ಗುತ್ತುಪಾಲು, ಅಂಗನವಾಡಿ ಮೇಲ್ವೀಚಾರಕಿ ಭವಾನಿ,  ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.  ಪಂಚಾಯತ್ ಕಾರ್ಯದರ್ಶಿ ಲಲಿತಾ.ಜಿ.ಡಿ ಸ್ವಾಗತಿಸಿ ವಂದಿಸಿದರು.

perabe news-12-1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.