ಜ 14-16ರವರೆಗೆ ಪುಣ್ಚತ್ತಾರು ಪೈಕ -ಕರಿಮಜಲಿನಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ- ಕರಿಮಜಲು ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ, ಶ್ರೀ ಚಾಮುಂಡಿ, ಪರಿವಾರ ದೈವಗಳ ಹಾಗೂ ಶ್ರೀ ಅಮ್ಮನವರ ಗ್ರಾಮ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲತ್ತಾಯ ಇವರ ನೇತೃತ್ವದಲ್ಲಿ  ಜ.14ರಿಂದ ಜ.16ರವರೆಗೆ ನಡೆಯಲಿದೆ. ಜ 14ರಂದು ಸಂಜೆ ಪೈಕಮಾಲೈದಿಂದ ಕರಿಮಜಲು ದೈವಸ್ಥಾನದವರೆಗೆ ಭಂಡಾರ ಆಗಮನ, ರಾತ್ರಿ ಪ್ರಾರ್ಥನೆ, ಪ್ರಸಾದ ಪರಿಗ್ರಹ, ಬಿಂಬ ಪರಿಗ್ರಹ, ಪುಣ್ಯಾಹ ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಬಲಿ, ಅಸ್ತ್ರಕಲಶ ಬಿಂಬ ಜಲಾಧಿವಾಸ ಕಾರ‍್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ದಾಮ ಮಾಣಿಲ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಪುತ್ತೂರು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ| ರಾಮಯ್ಯ ಭಟ್, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಮೋಹನ ಗೌಡ ಇಡ್ಯಡ್ಕರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುದ್ರೋಳಿ ಗಣೇಶ್ ಇವರಿಂದ ವಿಸ್ಮಯ್ಯ ಜಾದು ಪ್ರದರ್ಶನ ನಡೆಯಲಿವೆ. ಜ ೧೫ರಂದು ಗಣಪತಿ ಹೋಮ, ಬಿಂಬ ಶುದ್ಧಿ, ಸಾನ್ನಿಧ್ಯ ಕಲಶ ಪೂಜೆ, ಶ್ರೀ ಉಳ್ಳಾಕುಲು ಹಾಗೂ ಶ್ರೀ ಶಿರಾಡಿ, ಶ್ರೀ ಅಮ್ಮನವರ ಶ್ರೀ ಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಬೆಳಿಗ್ಗೆ ಗಂಟೆ ೧೦ರಿಂದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಮತ್ತು ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಪೈಕ ಮಾಲ್ಯೆಗೆ ಭಂಡಾರ ನಿರ್ಗಮನ, ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ದೈವ ಭಂಡಾರದ ಮನೆಯಲ್ಲಿ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಇತ್ಯಾದಿ ನಡೆಯಲಿವೆ. ಸಂಜೆ ಪುಣ್ಚತ್ತಾರು ಕರಿಮಜಲು ದೈವಸ್ಥಾನದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ. ಕ್ಷೇ.ಧ.ಗ್ರಾ.ಯೋಜನೆಯ ಶಿವಮೊಗ್ಗ ಜಿಲ್ಲೆಯ ನಿರ್ದೇಶಕ ಶಿವರಾಮ ಪ್ರಭು, ವಾಸ್ತು ಶಾಸ್ತ್ರಜ್ಞರಾದ ಪ್ರಸಾದ್ ಮುನಿಯಂಗಳ, ನರಸಿಂಹ ಪ್ರಸಾದ್ ಪಾಂಗಾಣ್ಣಾಯ ಕುವೆತ್ತೋಡಿ, ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುಂಶೀಯ ಮೊಕ್ತೇಸರರಾದ ರಾಜದೀಪಕ್ ಜೈನ್ ಕುದ್ಮಾರುಗುತ್ತು, ಚಾರ್ವಾಕ ಅಮರಕಾಸ್ಪಾಡಿಗುತ್ತು ಶ್ರೀ ಜೋಡು ದೈವಗಳ ಆಡಳಿತದಾರ ಕುಸುಮಾಧರ ರೈರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯ ಪದವು ಶ್ರೀ ಮಹಾವಿಷ್ಣು ಯಕ್ಷಗಾನ ಕಲಾ ಸಂಘದವರಿಂದ ಶ್ರೀ ಶಬರಿಮಲೆ ಅಯ್ಯಪ್ಪ ಯಕ್ಷಗಾನ ನಡೆಯಲಿವೆ. ಜ ೧೬ರಂದು ಪೈಕಮಾಲೈಯಲ್ಲಿ ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಸಾನ್ನಿಧ್ಯ ಕಲಶ ಪೂಜೆ, ಭಂಡಾರದ ಮನೆ ಪ್ರವೇಶ, ಸಾನ್ನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪೈಕ ಕರಿಮಜಲು ಗ್ರಾಮ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಪುಟ್ಟಣ್ಣ ಗೌಡ ಪೈಕ, ಕೊರಗಪ್ಪ ರೈ ಮಾಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಠಲ ರೈ ಮಾಳ, ಪ್ರಧಾನ ಕಾರ್ಯದರ್ಶಿ ಹರೀಶ್ ಪೈಕ, ಉಪ ಕಾರ್ಯದರ್ಶಿ ರಾಮಣ್ಣ ಗೌಡ ಮೂಡೈಮಜಲು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶೀನಪ್ಪ ಗೌಡ ಕಿನ್ನಿಕುಮೇರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರದೀಪ್ ಬೊಬ್ಬೆಕೇರಿಯವರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.