ಜ.14ರಿಂದ ವಿಟ್ಲ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆ ಜ.14ರಿಂದ ಜ.22ರವರೆಗೆ ನಡೆಯಲಿದೆ ಎಂದು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ.13ರಂದು ಸಂಜೆ ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸೀಮೆಯ ಪ್ರತಿ ಮನೆಯಿಂದ ಫಲವಸ್ತುಗಳ ಜತೆಯಲ್ಲಿ ಹೊರೆಕಾಣಿಕೆಯಲ್ಲಿ ಭಾಗವಹಿಸಬೇಕು ಎಂದರು.

ಜ.14ರಂದು ಧ್ವಜಾರೋಹಣ, ಸಂಜೆ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ, ರಾತ್ರಿ ಲಕ್ಷದೀಪೋತ್ಸವ ನಡೆಯಲಿದ್ದು ಭಕ್ತಾದಿಗಳು 5 ಹಣತೆಗಳೊಂದಿಗೆ ಆಗಮಿಸಿ ದೇವಾಲಯದ ಸುತ್ತ ಹಣತೆ ಹಚ್ಚಿ ದೀಪೋತ್ಸವದಲ್ಲಿ ಭಾಗವಹಿಸಬೇಕು. ರಾತ್ರಿ ಯಕ್ಷ ಸಿಂಧೂರ ವಿಟ್ಲದ ವತಿಯಿಂದ ಯಕ್ಷಗಾನ ನಡೆಯಲಿದೆ.

ಜ.15ರಂದು ಸಂಜೆ ನಿತ್ಯೋತ್ಸವ ನಡೆಯಲಿದ್ದು, ವಿಆರ್‌ಸಿ ವಿಟ್ಲದ ವತಿಯಿಂದ ಕಟೀಲು ೫ ನೇ ಮೇಳದಿಂದ ಮೋಕ್ಷ ಸಂಗ್ರಾಮ ಯಕ್ಷಗಾನ ಬಯಲಾಟ ನಡೆಯಲಿದೆ.

ಜ.16 ರಂದು ಸಂಜೆ ನಿತ್ಯೋತ್ಸವ, ಸ್ನೇಹಕಲಾವಿದರು ಪುಣಚ ಅವರಿಂದ ನಾಟಕ ನಡೆಯಲಿದೆ.

ಜ.17ರಂದು ಸಂಜೆ ನಿತ್ಯೋತ್ಸವ ನಡೆಯಲಿದ್ದು, ಲಲಿತಕಲಾ ಸದನ ವಿಟ್ಲದ ವಿದೂಷಿ ನಯನಾ ಸತ್ಯನಾರಾಯಣ ಅವರಿಂದ ಭರತನಾಟ್ಯ ಮತ್ತು ನೃತ್ಯ ರೂಪಕ ಗಣೇಶ ಉದ್ಭವ ನಡೆಯಲಿದೆ.

ಜ.೧೮ರಂದು ರಾತ್ರಿ ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ   ಬಂದು ಬಯ್ಯದ ಬಲಿ ಉತ್ಸವ ನಡೆಯಲಿದೆ. ಊರ ಕಲಾವಿದರಿಂದ ಭಕ್ತಿ ರಸಮಂಜರಿ ನಡೆಯಲಿದೆ. ಜ.19 ರಂದು ಬೆಳಗ್ಗೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ನಡು ದೀಪೋತ್ಸವ ನಡೆಯಲಿದೆ. ವಿಶ್ವಹಿಂದೂ ಪರಿಷದ್ ವತಿಯಿಂದ ಹರಿಕಥೆ ನಡೆಯಲಿದೆ.

ಜ.೨೦ರಂದು ಬೆಳಗ್ಗೆ ದರ್ಶನ ಬಲಿ, ಬಟ್ಲು ಕಾಣಿಕೆ, ರಾತ್ರಿ ಹೂತೇರು ನಡೆಯಲಿದೆ. ವಿಆರ್‌ಸಿ ವಿಟ್ಲೋತ್ಸವದ ಅಂಗವಾಗಿ  ನೃತ್ಯ ನಿಕೇತ ಕೊಡವೂರು ಉಡುಪಿ ಅವರಿಂದ ನೃತ್ಯ ಸಿಂಚನ,  ವಿಜಯಕುಮಾರ್ ಕೊಡಿಯಾಲ್‌ಬೈಲ್ ರಚಿಸಿ ನಿರ್ದೇಶಿಸಿದ ಒರಿಯದ್ದೊರಿ ಅಸಲ್ ನಾಟಕ ನಡೆಯಲಿದೆ.

ಜ. ೨೧ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ರಾತ್ರಿ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು, ರಾತ್ರಿ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ. ಪ್ರೆಂಡ್ಸ್ ವಿಟ್ಲ ತಂಡ ಸಪ್ತಸ್ವರ ಮೂಸಿಕಲ್ ನೈಟ್ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಜ.22ರಂದು ಬೆಳಗ್ಗೆ ಕವಟೋದ್ಘಾತನೆ, ಮಹಾಪೂಜೆ, ಕಾಲಾವಧಿ ಬಟ್ಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ. ಪಂಚಶ್ರೀ ಗ್ರೂಪ್‌ನಿಂದ ಸಂಗೀತ ರಸಮಂಜರಿ ನಡೆಯಲಿದೆ.

ಜ.೨೪ರಂದು ಮಧ್ಯಾಹ್ನ 1ಗಂಟೆಗೆ ಕೇಪುವಿನ ಶ್ರೀ ಮಲರಾಯಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ ನಡೆಯಲಿದೆ.ಜ. 26ಕ್ಕೆ ಮಧ್ಯಾಹ್ನ ಅರಮನೆಯಲ್ಲಿ ನೇಮೋತ್ಸವ ಬಳಿಕ ಕೇಪಿಗೆ ಭಂಡಾರ ಹೊರಡುವುದು ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಅರುಣ್ ವಿಟ್ಲ, ವಿಶ್ವಹಿಂದೂ ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ಆನಂದ ಕಲ್ಲಕಟ್ಟ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಿ ರಾಮದಾಸ್ ಶೆಣೈ, ಹರೀಶ್ ಕೆ, ನಾಗೇಶ ಬಸವನಗುಡಿ, ನವೀನ್ ಚಂದಳಿಕೆ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.