ಹೆಲ್ಮೆಟ್ ಕಡ್ಡಾಯ – ಪುತ್ತೂರಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾಗಿದ ಜಾಗೃತಿ ಜಾಥಾ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ್ವಿಚಕ್ರ ವಾಹನ ಸವಾರ ಸಹಸವಾರನಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆಯಾದರೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮುನ್ನ ಈ ಕುರಿತು ಜನ ಜಾಗೃತಿ ಮೂಡಿಸಲು ದ.ಕ.ಜಿಲ್ಲಾ ಪೊಲೀಸ್, ಪುತ್ತೂರು ಸಂಚಾರಿ ಪೊಲೀಸ್ ಮತ್ತು ಜೆಸಿಐ, ಜೆಸಿ ರೆಟ್, ಜ್ಯೂನಿಯರ್ ಜೆ.ಸಿ  ಸಂಸ್ಥೆಯೊಂದಿಗೆ ಜಂಟಿಯಾಗಿ 27ನೇ ರಾಷ್ಟ್ರೀಯ ’ರಸ್ತೆ ಸುರಕ್ಷತಾ ಸಪ್ತಾಹ’ ದೊಂದಿಗೆ ಜ.13ರಂದು ಬೈಕ್ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.

ನೆಹರುನಗರ ಕಲ್ಲೇಗದಿಂದ ದರ್ಬೆ ವೃತ್ತದ ತನಕ ಬೈಕ್ ರ‍್ಯಾಲಿ ನಡೆಯಿತು. ಎ.ಎಸ್ಪಿ ರಿಷ್ಯಂತ್‌ರವರು ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರಲ್ಲದೆ ತಾನೆ ಸ್ವಲ್ಪ ದೂರ ಹೆಲ್ಮೆಟ್ ಧರಿಸಿ ಸ್ಕೂಟರ್ ಚಲಾಯಿಸಿದರು.  ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರ ಠಾಣಾಧಿಕಾರಿ ಮಹೇಶ್‌ಪ್ರಸಾದ್, ಸಂಚಾರಿ ಠಾಣಾಧಿಕಾರಿ ನಾಗರಾಜ್, ಜೆ.ಸಿ.ಐ ಅಧ್ಯಕ್ಷ ಪುರುಷೊತ್ತಮ ರೈ, ಜೆ.ಸಿ.ರೆಟ್‌ನ ರೂಪರೇಖಾ ಆಳ್ವ, ಶಿವರಂಜನ್, ಉದ್ಯಮಿ ಬಲರಾಮ್ ಆಚಾರ್ಯ, ಜಯಪ್ರಕಾಶ್ ಅಮೈ ಮತ್ತಿತರ ಅನೇಕರು ಈ ಸಂದರ್ಭದಲ್ಲಿ ಜಾಥಾದಲ್ಲಿ ಭಾಗವಹಿಸಿದ್ದರು.

ಜಿ.ಎಲ್ ಆಚಾರ್ಯ ವತಿಯಿಂದ ಬ್ಯಾರಿಕೇಡ್ ಕೊಡುಗೆ  : 

ಪುತ್ತೂರು: ವಾಹನಗಳ ವೇಗ ನಿಯಂತ್ರಣಕ್ಕಾಗಿ ನೆಹರುನಗರ ಸಮೀಪ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ವತಿಯಿಂದ ನೀಡಲಾದ ಬ್ಯಾರಿಕೇಡರ್‌ನ್ನು ಜ.13ರಂದು ಅಳವಡಿಸಲಾಯಿತು.

ಬ್ಯಾರಿಕೇಡರ್‌ನ್ನು ಉದ್ಘಾಟಿಸಿ ದಾನಿ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ಮಾತನಾಡಿ ಇಂದು ಕಣ್ಣಿಗೆ ಕುಕ್ಕುವ ಟ್ರಾಫಿಕ್‌ಗಳಿಂದಾಗಿ ರಿಲಾಕ್ಸ್ ಡ್ರೈವಿಂಗ್ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಚಿಂತನೆಗೆ ಸ್ಪಂಧಿಸಿ ಸೇವಾ ಕಾರ್ಯ ಮಾಡಿದ್ದೇವೆ ಹೊರತು ಇದೊಂದು ಕೊಡುಗೆಯಲ್ಲ ಎಂದ ಅವರು ಅಪಘಾತಗಳ ಸಂಖ್ಯೆ ತಡೆಗಟ್ಟುವಲ್ಲಿ ಇದು ಪ್ರಯೋಜವಾಗಲಿ ಎಂದು ಶುಭ ಹಾರೈಸಿದರು. ಎ.ಎಸ್ಪಿ ರಿಷ್ಯಂತ್ ಸಿ.ಬಿಯವರು ಶುಭ ಹಾರೈಸಿದರು. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ ನಗರ ಪ್ರದೇಶಕ್ಕೆ ಇಂತಹ ಬ್ಯಾರಿಕೇಡರ್ ಅತೀ ಅವಶ್ಯ. ಜೊತೆಗೆ ಬೈಕ್ ಸವಾರರ ರಕ್ಷಣೆಗಾಗಿ ಹೆಲ್ಮಟ್ ಕಡ್ಡಾಯ ಕಾನೂನು ಬಂದಿರುವುದು ಒಳ್ಳೆಯ ವಿಚಾರ ಎಂದರು. ಜೆ.ಸಿ.ಐ ಅಧ್ಯಕ್ಷ ಪುರುಷೋತ್ತಮ ರೈ ಸ್ವಾಗತಿಸಿ, ವಂದಿಸಿದರು. ನಗರ ಠಾಣಾಧಿಕಾರಿ ಮಹೇಶ್‌ಪ್ರಸಾದ್, ಸಂಚಾರಿ ಠಾಣಾಧಿಕಾರಿ ನಾಗರಾಜ್ ಮತ್ತು ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

20160113_110105

ಎ.ಎಸ್ಪಿ ರಿಷ್ಯಂತ್ ರವರು ಹಳೆಯ ಸ್ಕೂಟರ್ ನಲ್ಲಿ ಹೆಲ್ಮೆಟ್ ಧರಿಸಿ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು.
ಎ.ಎಸ್ಪಿ ರಿಷ್ಯಂತ್ ರವರು ಹಳೆಯ ಸ್ಕೂಟರ್ ನಲ್ಲಿ ಹೆಲ್ಮೆಟ್ ಧರಿಸಿ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು.

20160113_105342
Trafic 4 Trafic 3

Trafic 2

Trafic 1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.