Breaking News

ಒಳಮೊಗ್ರು ಕುಂಡಚ್ಚಗಿರಿಯಲ್ಲಿ ತಂಡದಿಂದ ಹಲ್ಲೆ-ಒಳಮೊಗ್ರು ನಿವಾಸಿ ಮಹಮ್ಮದ್ ರಫೀಕ್ ಗಂಭೀರ – 10 ಮಂದಿ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು-ಓರ್ವನ ಬಂಧನ

Puttur_Advt_NewsUnder_1
Puttur_Advt_NewsUnder_1

olamo

ಪುತ್ತೂರು: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಯುವಕನೋರ್ವ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜ.10 ನಡೆದಿದೆ.

ಒಳಮೊಗ್ರು ಗ್ರಾಮದ ಪರ್ಪುಂಜ ಸಮೀಪದ ಕುಂಡಚ್ಚಗುರಿ ಎಂಬಲ್ಲಿ ಈ ಘಟನೆ ನಡೆದಿದ್ದು ಪ್ರಕರಣಕ್ಕೆ  ಸಂಬಂಧಿಸಿದಂತೆ 10 ಮಂದಿಯ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಒಳಮೊಗ್ರು ಗ್ರಾಮದ ನೀರ್ಪಾಡಿ ಕೆ.ಪಿ ಹಸೈನ್‌ರವರ ಪುತ್ರ ಮಹಮ್ಮದ್ ರಫೀಕ್(28.ವ) ಎಂಬವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ.

ಘಟನೆಯ ವಿವರ: ಮಹಮ್ಮದ್ ರಫೀಕ್‌ರವರು ತನ್ನ ಗೆಳೆಯನ ಇನೋವಾ (ಕೆ.ಎ.21ಎಂ. 6599)ಕಾರು ಪಡೆದುಕೊಂಡು ಕಾಸರಗೋಡಿಗೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸು ಹಿಂತಿರುಗುವ ವೇಳೆ ರಾತ್ರಿ 11 ಗಂಟೆಗೆ ವೇಳೆಗೆ ಪರ್ಪುಂಜ ಮುಖ್ಯ ರಸ್ತೆಯಿಂದ ಮನೆಗೆ ಹೋಗುವ ರಸ್ತೆಯ ಕುಂಡಚ್ಚಗುರಿ ಎಂಬಲ್ಲಿ ಮಾರುತಿ ಸ್ವಿಫ್ಟ್ ಕಾರನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿತ್ತು. ಇದರಿಂದ ಬೆದರಿದ ರಫೀಕ್‌ರವರು ತನ್ನ ಕಾರನ್ನು ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಹಿಂದಿನಿಂದ ಒಂದು ಮಾರುತಿ ಸ್ವಿಫ್ಟ್ ಹಾಗೂ ಹ್ಯೂಂಡಾಯ್ ಐ20 ಕಾರು ಹೋಗದಂತೆ ಅಡ್ಡವಾಗಿ ನಿಲ್ಲಿಸಿ ತಡೆಯಲಾಗಿತ್ತು. ಈ ಸಂದರ್ಭದಲ್ಲಿ ಮೂರು ಕಾರಿನಲ್ಲಿದ್ದ ಸಲಾಂ, ಕಡ್ತಿಮಾರ್ ರಫೀಕ್, ಕಡ್ತಿಮಾರ್ ಆಸೀಫ್, ಲತೀಫ್, ಯೂಸುಫ್ ಎ.ಕೆ, ಅಲಂಗೂರು ಅದ್ದು, ಬಾತಿಷ ಕುಂಬ್ರ, ಶಾಕೀರ್ ಕುಂಬ್ರ, ಆಶಿಕ್ ಎ.ಕೆ, ಉಮ್ಮರ್ ಫಾರೂಕ್ ಯಾನೆ ಕಡ್ತಿಮಾರ್ ಫಾರೂಕ್ ಎಂಬವರು ಬ್ಯಾಟ್, ವಿಕೆಟ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಇನ್ನೋವಾ ಕಾರಿನ ಗ್ಲಾಸ್‌ನ್ನು ಒಡೆದು ಪುಡಿ ಮಾಡಿ ಮಹಮ್ಮದ್ ರಫೀಕ್‌ರವರನ್ನು ಕಾರಿನಿಂದ ಎಳೆದು ಹಾಕಿ ಮನ ಬಂದಂತೆ ಹಲ್ಲೆ ನಡೆಸಿದ್ದಲ್ಲದೆ ವಿಕೆಟ್‌ನಿಂದ ಅವರ ದೇಹಕ್ಕೆ ತಿವಿದು ಕೊಲೆಗೆ ಯತ್ನಿಸಲಾಗಿದೆ ಅಲ್ಲದೆ, ರಫೀಕ್‌ರವರಲ್ಲಿದ್ದ 60 ಸಾವಿರ ರೂಪಾಯಿ ನಗದನ್ನು ದೋಚಿದ್ದಾರೆ ಎಂದು ಕೇಸು ದಾಖಲಾಗಿದೆ. ಐಪಿಸಿ ಸೆಕ್ಷನ್ ಪ್ರಕಾರ 143,147,148,341,427,504,326,323,307 ಹಾಗೂ 149 ಪ್ರಕರಣದನ್ವಯ ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದ್ದು ಈ ಪೈಕಿ ಉಮ್ಮರ್ ಫಾರೂಕ್ ಯಾನೆ ಕಡ್ತಿಮಾರ್ ಫಾರೂಕ್ ಎಂಬವನನ್ನು  ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಉಳಿದ ಒಂಬತ್ತು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವದ್ವೇಷದ ಹಿನ್ನೆಲೆಯೇ: ಕಳೆದ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಮಹಮ್ಮದ್ ರಫೀಕ್ ಹಾಗೂ ಆರೋಪಿಗಳ ಈ ತಂಡದ ಮಧ್ಯೆ ತೀವ್ರ ಮುಸುಕಿನ ಗುದ್ದಾಟ ನಡೆದಿತ್ತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಸುಮಾರು ಮೂರು ತಿಂಗಳ ಹಿಂದೆ ಒಳಮೊಗ್ರು ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್‌ರವರ ಪುತ್ರ ಮುಕ್ತಾರ್ ಮೊದಲಾದವರು ಸೇರಿಕೊಂಡು ಮಹಮ್ಮದ್ ರಫೀಕ್‌ರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಈ ಹಿಂದೆ ಸಂಪ್ಯ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಒಳಮೊಗ್ರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಸುಬು ಹಾಗೂ ಸದಸ್ಯ ಅಬ್ದುಲ್ ರಹಿಮಾನ್‌ರವರ ನಿರ್ದೇಶನದಂತೆ  ತನಗೆ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ರಫೀಕ್‌ರವರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಆಧಾರದಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾಗಿದ್ದ ರಫೀಕ್‌ರವರು ರಸ್ತೆಯಲ್ಲಿ ಹೊರಳಾಡುತ್ತಿದ್ದ ವೇಳೆ ಅದೇ ದಾರಿಯಿಂದಾಗಿ ಬಂದ ಮುಸ್ತಾಫ ಹಾಗೂ ರಶೀದ್ ಎಂಬವರು ರಫೀಕ್‌ರವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ರಫೀಕ್‌ರವರು ಚೇತರಿಸಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ರಫೀಕ್‌ರವರಿಗೆ ಹಲ್ಲೆ ನಡೆಸಲು ಆರೋಪಿಗಳು ಬಾಡಿಗೆ ಕಾರು ಪಡೆದುಕೊಂಡಿದ್ದರೆಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ನಾನು ನಿರ್ದೇಶನ ನೀಡಿಲ್ಲ, ಹೆಸರು ಕೊಟ್ಟದ್ದು ನನ್ನ

ಗಮನಕ್ಕೂ ಬರಲಿಲ್ಲಅಬ್ದುಲ್ ರಹಿಮಾನ್

 ಈ ಬಗ್ಗೆ ಒಳಮೊಗ್ರು ಗ್ರಾ.ಪಂ. ಸದಸ್ಯ ಪಿ.ಎಂ. ಅಬ್ದುಲ್ ರಹಿಮಾನ್‌ರವರನ್ನು ಸಂಪರ್ಕಿಸಿದಾಗ, ‘ನಾನು ಯಾರಿಗೂ ಹಲ್ಲೆ ನಡೆಸಲು ನಿರ್ದೇಶನ ನೀಡಲಿಲ್ಲ. ಆರೋಪ ಮಾಡುವವರಿಗೆ ಬೇರೆ ಕೆಲಸವಿಲ್ಲ. ನ್ಯಾಯದ ಪರ ನಿಲ್ಲುವವರ ಹೆಸರನ್ನು ಕೆಡಿಸಲು ನೋಡುವುದೇ ಅವರ ಕೆಲಸ. ಪೊಲೀಸರಿಗೆ ನನ್ನ ಹೆಸರನ್ನು ಕೊಟ್ಟಿರುವ ಬಗ್ಗೆ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.