ಕರವಡ್ತ ವಲಿಯುಲ್ಲಾಹಿ ಫ್ರೆಂಡ್ಸ್ ಕಮಿಟಿಯ ವಾರ್ಷಿಕೋತ್ಸವ ಬಡ ಹೆಣ್ಮಕ್ಕಳ ಮದುವೆಗೆ ಧನ ಸಹಾಯ ಇಸ್ಲಾಮಿನಲ್ಲಿ ಇಲ್ಲದ ವರದಕ್ಷಿಣೆ ಪದ್ದತಿಯ ನಿರ್ಮೂಲನೆಗೆ ಮುಂದೆ ಬರುವ ಅನಿವಾರ‍್ಯತೆ ಇದೆ.-ಎಸ್.ಬಿ ದಾರಿಮಿ

Puttur_Advt_NewsUnder_1
Puttur_Advt_NewsUnder_1

muslimಪುತ್ತೂರು: ವರದಕ್ಷಿಣೆ ಇಸ್ಲಾಂನಲ್ಲಿ ಇಲ್ಲದ ಪದ್ದತಿಯಾಗಿದ್ದು, ಬದಲಾಗಿ ವಧು ದಕ್ಷಿಣೆ ಇಸ್ಲಾಂನ ಕ್ರಮವಾಗಿದೆ. ಆದರೆ ನಾವು ಇಂದು ಅನಿಸ್ಲಾಮಿಕ್ ಪದ್ದತಿಯನ್ನು ಅನುಸರಿಸಿಕೊಂಡು ಬರುತ್ತಿರುವುದು ಖೇದಕರ. ಇಂತಹ ಕೆಟ್ಟ ಪದ್ದತಿಯಿಂದಾಗಿ ಅದೆಷ್ಟೇ ಹೆಣ್ಮಕ್ಕಳು ಮದುವೆಯಾಗದೆ ಕೊರಗುತ್ತಿದ್ದಾರೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅನಿವಾರ‍್ಯತೆ ಇದೆ ಎಂದು ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಹೇಳಿದರು.

ಅವರು ಪರ್ಲಡ್ಕದ ಖಿಳ್ಹ್‌ರ್ ಮಸೀದಿಯ ಸಭಾಂಗಣದಲ್ಲಿ ನಡೆದ ಕರವಡ್ತ ವಲಿಯಲ್ಲಾಹಿ ಫ್ರೆಂಡ್ಸ್ ಕಮಿಟಿ ಇದರ ತೃತೀಯ ವಾರ್ಷಿಕೋತ್ಸವದ ಸಮಾರಂಭ ಹಾಗೂ ಸಮಿತಿಯ ವತಿಯಿಂದ ಬಡ ಹೆಣ್ಮಕ್ಕಳ ಮದುವೆಗೆ ಸುಮಾರು ರೂ. 75 ಸಾವಿರ ಮೌಲ್ಯದ ಚಿನ್ನಾಭರಣ ಹಸ್ತಾಂತರಿಸುವ ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡುತ್ತಿದ್ದರು. ವರದಕ್ಷಿಣೆಗೆ ತಿಲಾಂಜಲಿ ಹೇಳಿ. ವಧು ದಕ್ಷಿಣೆಗೆ ನಾವು ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಸಮಾಜವನ್ನು ಬದಲಾಯಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಾಲ್ಮರ ಸಯ್ಯದ್ ಮಲೆ ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ ರವರು ಮಾತನಾಡಿ ಯುವ ಜನಾಂಗವು ಬಡ, ಅನಾಥ, ನಿರ್ಗತಿಕ ಮದುವೆಗೆ ನೀಡುವ ಪ್ರೋತ್ಸಾಹ ಮತ್ತು ಅವರ ಬಾಳನ್ನು ಬೆಳಗಿಸುವಂತಾಗಬೇಕು.  ಎಂದ ಅವರು ಯುವ ಜನಾಂಗವು ಸತ್ಕರ್ಮದ ಮೂಲಕ ಬಹು ಎತ್ತರಕ್ಕೆ ಏರುವಂತಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪರ್ಲಡ್ಕ ಮೊದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ ದಾರಿಮಿರವರು ಮಾತನಾಡಿ, ನಮಗೆ ದೇವರು ನೀಡಿದ ಸಂಪತ್ತನ್ನು ಇತರರಿಗೆ ದಾನ ಮಾಡುವ ಮೂಲಕ ಸಮಾಜದಲ್ಲಿ ದಾರಿದ್ರ್ಯ ನಿರ್ಮೂಲನಕ್ಕೆ, ಸಹಕಾರಿಯಾಗಲಿದ್ದು, ಅಲ್ಲಾಹುವಿನ ಸಂಪ್ರೀತಿಗೆ ಕಾರಣವಾಗಲಿದೆ, ಇಲ್ಲಿನ ಯುವಕರ ಸೇವೆ ಎಲ್ಲರಿಗೂ ಆದರ್ಶ ಪ್ರಾಯವಾಗಲಿ ಎಂದು ಅವರು ನುಡಿದರು.

ಸ್ವಾಗತಿಸಿ ಮಾತನಾಡಿದ ಒಳತ್ತಡ್ಕ ಮಸೀದಿಯ ಖತೀಬರಾದ ಅಬ್ದುಲ್ ನಾಸಿರ್ ದಾರಿಮಿರವರು ಮಾತನಾಡಿ, ಹೆಣ್ಮಕ್ಕಳು ಹುಟ್ಟುವುದು ಅಪಮಾನ ಎಂದು ತಾತ್ಸಾರ ಮನೋಭಾವ ಸಲ್ಲದು. ಹೆಣ್ಣು ಎಂದರೆ ಅದು ಸ್ವರ್ಗಕ್ಕೆ ದಾರಿ, ತಾಯಿಯ ಕಾಲಡಿಯಲ್ಲಿ ಸ್ವರ್ಗ ಇದೆ ಎಂಬ ಪ್ರವಾದಿಯವರ ಸಂದೇಶದಂತೆ ನಾವು ಹೆಣ್ಮಕ್ಕಳ ಹಕ್ಕನ್ನು ನೀಡಬೇಕಾದ ಅವಶ್ಯಕತೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಪರ್ಲಡ್ಕ ಖಿಳ್ಹ್‌ರ್ ಮಸೀದಿಯ ಇಬ್ರಾಹಿಂ ಮುಸ್ಲಿಯಾರ್ ಮತ್ತು ಅಬೂಬಕ್ಕರ್ ಮುಸ್ಲಿಯಾರ್, ಪರ್ಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಶಹಬಾನ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಪರ್ಲಡ್ಕ ಖಿಳ್ಹ್‌ರ್ ಮಸೀದಿಯ ಅಧ್ಯಕ್ಷ ಜೈನುದ್ದೀನ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಅನ್ಸಾರ್ ಪರ್ಲಡ್ಕ, ಒಳತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸುಲೈಮಾನ್ ದರ್ಖಾಸ್, ಪ್ರಧಾನ ಕಾರ್ಯದರ್ಶಿ ಮಜೀದ್ ಕೆ.ಪಿ, ಪುತ್ತೂರು ಎಂ.ಟಿ ರಸ್ತೆಯಲ್ಲಿರುವ ಸಿಟಿ ಬಝಾರ್‌ನ ಮ್ಹಾಲಕ ಕೆ.ಹಸನ್ ಹಾಜಿ, ಮಂಗಳ ಟ್ರೇಡಿಂಗ್‌ನ ಮ್ಹಾಲಕ ಹಸನ್ ಪರ್ಲಡ್ಕ ಮತ್ತಿತರರು ಅತಿಥಿಗಳಾಗಿ ಆಗಮಿಸಿದ್ದರು.  ವೇದಿಕೆಯಲ್ಲಿ ಕರವಡ್ತ ವಲಿಯಲ್ಲಾಹಿ ಫ್ರೆಂಡ್ಸ್ ಕಮಿಟಿಯ ಗೌರವಾಧ್ಯಕ್ಷ ಪಿ.ಎಸ್ ಶಮ್ಮೂನ್ ಪರ್ಲಡ್ಕ ಉಪಸ್ಥಿತರಿದ್ದರು. ಕರವಡ್ತ ವಲಿಯಲ್ಲಾಹಿ ಫ್ರೆಂಡ್ಸ್ ಕಮಿಟಿಯ ಅಧ್ಯಕ್ಷ ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಒಳತ್ತಡ್ಕ, ಉಪಾಧ್ಯಕ್ಷ ಅನ್ಸಾರ್ ಪರ್ಲಡ್ಕ, ಖಜಾಂಜಿ ಶಫಿಕ್ ಅಹ್ಮದ್, ಜೊತೆ ಕಾರ್ಯದರ್ಶಿ ತ್ವಾಹೀರ್ ಒಳತ್ತಡ್ಕ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಚಿನ್ನಾಭರಣ ಹಸ್ತಾಂತರ: ಇದೇ ಸಂದರ್ಭದಲ್ಲಿ ಒಳತ್ತಡ್ಕದ ಆಯೆಷಾ ಎಂಬವರ  ಪುತ್ರಿ ಸುಮಯ್ಯ ರವರ ವಿವಾಹಕ್ಕೆ  ರೂ.75  ಸಾವಿರ ಮೌಲ್ಯದ ಚಿನ್ನಾಭರಣ ನೀಡಲಾಯಿತು. ಕರವಡ್ತ ವಲಿಯಲ್ಲಾಹಿ ಫ್ರೆಂಡ್ಸ್ ಕಮಿಟಿಯ ಗೌರವಾಧ್ಯಕ್ಷ ಪಿ.ಎಸ್ ಶಮ್ಮೂನ್ ಪರ್ಲಡ್ಕರವರು ಚಿನ್ನಾಭರಣವನ್ನು ಹಸ್ತಾಂತರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.