ಜ.17ರಿಂದ ಅಗರ್ತಬೈಲು ಮಠದ ಬ್ರಹ್ಮಕಲಶೋತ್ಸವ : ಪುತ್ತೂರಿನಲ್ಲಿ ಆಮಂತ್ರಣ ಪತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಲ್ನಾಡು ಗ್ರಾಮದ ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವರ ಮಠದ ಬ್ರಹ್ಮಕಲಶೋತ್ಸವವು ಜ.17ರಿಂದ 21ರ ತನಕ ಜರಗಲಿದ್ದು, ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ಕಾರ‍್ಯಕ್ರಮ ಜ.13ರಂದು ನಡೆಯಿತು.

ದರ್ಬೆ ವೃತ್ತದಲ್ಲಿ ಸ್ವಾಗತ ಸಮಿತಿಯ ಪದಾಧಿಕಾರಿಗಳು ಜಯರಾಜ ಎಲಿಕ ಅವರಿಗೆ ಆಮಂತ್ರಣ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ದರ್ಬೆ ವೃತ್ತದಿಂದ ಪ್ರಾರಂಭಿಸಿ ಬೊಳುವಾರು ತನಕ ಪ್ರತಿ ಅಂಗಡಿಗಳಿಗೆ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಸ್ವಾಗತ ಸಮಿತಿ ಸಂಚಾಲಕ ಗುಂಡ್ಯಡ್ಕ ಹೊಸಮನೆ ಅನಂತರಾಮ ರೈ, ಸಹ ಆಡಳಿತ ಮೊಕ್ತೇಸರ ಬೆಳಿಯೂರು ಬೀಡ ಜತ್ತಪ್ಪ ರೈ ಬಿ. ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ, ಎಂ.ಬಿ. ವಿಶ್ವನಾಥ ರೈ, ಗಂಗಾಧರ ರೈ ಗುಂಡ್ಯಡ್ಕ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ.ಎಂ. ಪ್ರಕಾಶ್ಚಂದ್ರ ಆಳ್ವ, ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಪ್ರವೀಣಚಂದ್ರ ಆಳ್ವ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ‍್ಯದರ್ಶಿ ಗುಂಡಡ್ಕ ಎನ್.ಜಿ ಗೌರಿ ಶಂಕರ ರೈ, ರಾಮಚಂದ್ರ ರೈ ಬೀಡು, ರಾಕೇಶ್ ರೈ ಕೆಡೆಂಜಿ, ಸತ್ಯಪ್ರಸಾದ್ ರೈ ಅಗರ್ತಬೈಲು, ಶಶಿರಾಜ್ ರೈ ಚಿಲ್ಮೆತ್ತಾರು, ರಾಧಾಕೃಷ್ಣ ರೈ ಅಗರ್ತಬೈಲು, ಸಂಜೀವ ರೈ ಚಿಲ್ಮೆತ್ತಾರು, ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಭಗವಾನ್‌ದಾಸ್ ರೈ ಚಿಲ್ಮೆತ್ತಾರು, ಮಹಿಳಾ ಸಮಿತಿ ಸಂಚಾಲಕಿ ಬೆಳಿಯೂರುಬೀಡು ಸುಜಾತರಂಜನ್ ರೈ, ಅಗರ್ತಬೈಲು ತಾರಾ, ಸುವಾಸಿನಿ ವಿಠಲ ರೈ ಅಗರ್ತಬೈಲು, ದಾಕ್ಷಾಯಿಣಿ ಜಿ. ಗೌರಿಶಂಕರ್ ಗುಂಡ್ಯಡ್ಕ, ಸುಪ್ರಿಯಾ ಧನಂಜಯ ರೈ, ಬೆಳಿಯೂರುಬೀಡು ಸುವಾಸಿನಿ ರಾಮಚಂದ್ರ ರೈ, ಸುಧಾಮಣಿ ಜಿ. ರೈ, ಜಯಲಕ್ಷ್ಮೀ ಆರ್. ರೈ, ಶಕಿಲಾ ಅಜಿತ್ ಆಳ್ವ ಅಗರ್ತಬೈಲು, ಶಮಿಳಾ ಸುಧಾಕರ ರೈ ಕುಂಜಾಡಿ, ಅಗರ್ತಬೈಲು ಸುರಕ್ಷಿತ್ ಜೆ.ರೈ, ಗುಂಡಡ್ಕ ಸಜಿತ್ ಕುಮಾರ್ ರೈ, ಮತ್ತಿತರರು ಉಪಸ್ಥಿತರಿದ್ದರು.

20160112215730

20160112215749

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.