Breaking News

ಬಲಾತ್ಕಾರ ಬಂದ್, ಕೋಮು ಯಾ ಗಲಭೆ ವಿರೋಧಿ ಸುದ್ದಿ ಆಂದೋಲನಕ್ಕೆ ದ.ಕ.ಜಿಲ್ಲಾ ಜನತಾದಳ ಬೆಂಬಲ

Puttur_Advt_NewsUnder_1
Puttur_Advt_NewsUnder_1

mahammadಪುತ್ತೂರು: ಬಲತ್ಕಾರದ ಬಂದ್, ಕೋಮು ಯಾ ಇತರ ಗಲಭೆಗೆ ಕರೆ ಕೋಡುವವರು ಬಾಲ ಮಡಚಿ ಓಡುವಂತೆ ಮಾಡುವ ಸುದ್ದಿ ವೇದಿಕೆಯ “ಜನತೆಯ ಯೋಜನೆಗೆ” ದ.ಕ.ಜಿಲ್ಲಾ ಜನತಾದಳ (ಜ್ಯಾ) ಸ್ವಾಗತ ಕೋರುತ್ತದೆ.

ಜಿಲ್ಲೆಯಲ್ಲಿ ಇಂತಹ ಒಂದು ಯೋಜನೆಯನ್ನು ತಂದಂತಹ ಸುದ್ದಿ ಸಂಪಾದಕರಿಗೂ ಮತ್ತು ಅದರ ಸಿಬ್ಬಂದಿ ವರ್ಗದವರಿಗೂ ವಂದನೆಗಳು ಎಂದು ದ.ಕ. ಜಿಲ್ಲಾ ಜೆಡಿಎಸ್. ಅಧ್ಯಕ್ಷ ಬಿ.ಮಹಮ್ಮದ್ ಕುಂಞಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಬಹಳಷ್ಟು ಪ್ರಚಾರದಲ್ಲಿರುವ ಈ ಒಂದು ಕಾರ‍್ಯಕ್ರಮವು ಯಶಸ್ವಿಯಾಗಲಿ, ಜಿಲ್ಲೆಯ ಜನತೆ ಶಾಂತಿ ನೆಮ್ಮದಿಯಿಂದ ಬಾಳುವಂತಾಗಲಿ ಇದಕ್ಕೆ ನಮ್ಮ ಎಲ್ಲಾ ಪೂರ್ಣ ಸಹಕಾರವಿದೆಯೆಂದು ಈ ಮೂಲಕ ತಿಳಿಸುತ್ತೇನೆ. ಈ ಕಾರ‍್ಯಕ್ರಮವು ರೂಪಿಸಿದ ತಮಗೆ ಮತ್ತೊಮ್ಮೆ  ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.