Breaking News

ಮುಕ್ವೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮೇಳ ಸಮಾರೋಪ

Puttur_Advt_NewsUnder_1
Puttur_Advt_NewsUnder_1

20160112235549 (1)

ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪುತ್ತೂರು ಇದರ ಆಶ್ರಯದಲ್ಲಿ ಮುಕ್ವೆ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆತಿಥ್ಯದಲ್ಲಿ ನಡೆದ ಎರಡು ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮೇಳ 2015-16 ಒಂದು ಮಾದರಿ ಮೇಳವಾಗಿ ಮೂಡಿಬಂದು ಜ.13ರಂದು ಮಧ್ಯಾಹ್ನ ಸಂಪನ್ನಗೊಂಡಿತು. ಎರಡು ದಿನಗಳ ಕಾಲ ವಿವಿಧ ಘಟಕಗಳ ವಿದ್ಯಾರ್ಥಿಗಳು ಸುಮಾರು ೪೦ ಆಟಗಳಲ್ಲಿ ತೊಡಗಿಸಿಕೊಂಡು ಈ ಮೇಳದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

 ಶಿಬಿರದಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್, ರೋವರ‍್ಸ್ ಹಾಗೂ ರೇಂಜರ‍್ಸ್ ನ ಒಟ್ಟು ೮೧೯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೆ 53 ಶಿಕ್ಷಕರು ಪಾಲ್ಗೊಂಡಿದ್ದರು. ಎರಡು ದಿನಗಳ ಕಾಲ ನಡೆದ ಮೇಳವನ್ನು ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಿದ್ದರು.

ನಗರ ಮೆರವಣಿಗೆ: ಜ.12ರಂದು ಸಂಜೆ ವಿದ್ಯಾರ್ಥಿಗಳಿಂದ ನಗರ ಮೆರವಣಿಗೆ ನಡೆಯಿತು. ಪುತ್ತೂರು ನಗರ ಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಮುಕ್ವೆಯಿಂದ ಪುರುಷರಕಟ್ಟೆ ತನಕ ಮೆರವಣಿಗೆ ನಡೆಯಿತು.  ಈ ಸಂದರ್ಭದಲ್ಲಿ ಪುರುಷರಕಟ್ಟೆ ಮತ್ತು ಮುಕ್ವೆ ಪರಿಸರದ ಜನ ಮಕ್ಕಳಿಗೆ ಕಲ್ಲಂಗಡಿ ಪಾನೀಯ ಮತ್ತು ಲಡ್ಡು ವ್ಯವಸ್ಥೆ ಮಾಡಿದ್ದರು.

ಶಿಬಿರಾಗ್ನಿ: ರಾತ್ರಿ ಶಿಬಿರಾರ್ಥಿಗಳಿಂದ ಭವ್ಯ ಶಿಬಿರಾಗ್ನಿ ನಡೆಯಿತು. ಸ್ಥಳೀಯರಾದ ಜಯರಾಜ ಎಲಿಕ ಅವರು ಶಿಬಿರಾಗ್ನಿಯನ್ನು ಉದ್ಘಾಟಿಸಿದರು.

ಸಮಾರೋಪ ಸಮಾರಂಭ: ಮೇಳದ ಸಮಾರೋಪ ಭಾಷಣ ಮಾಡಿದ ದ.ಕ. ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತರಾದ ಎನ್.ಜಿ. ಮೋಹನ್‌ರವರು, ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ಈ ಘಟಕದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಉಪಯೋಗವಾಗುವ ವಿನೂತನ ಕಾರ‍್ಯಕ್ರಮಗಳನ್ನು ಸರಕಾರ ಹಾಕಿಕೊಂಡಿದೆ. ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ರೂ. ೫ ಕೋಟಿ ಅನುದಾನವನ್ನೂ ಮೀಸಲಿಟ್ಟಿದೆ ಎಂದರು. ದ.ಕ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸತತವಾಗಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದು,ಕಳದೆ ಸಾಲಿನಲ್ಲೂ ಪ್ರಶಸ್ತಿ ಬಂದಿದೆ. ಇದನ್ನು ಮುಂದೆಯೂ ಉಳಿಸಿಕೊಳ್ಳಬೇಕಾದರೆ ಜಿಲ್ಲಾ ಘಟಕದಲ್ಲಿ ಮಕ್ಕಳ ಸಂಖ್ಯಾ ಬಲವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಬಲಿಷ್ಠಗೊಳಿಸಲು ಶಿಕ್ಷಕರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಆಯುಕ್ತರಾದ ರಾಮಶೇಷ ಶೆಟ್ಟಿಯವರು ಮಾತನಾಡಿ, ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉದ್ದೇಶ ಎಂದರು.  ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಕನ್‌ಸ್ಟ್ರಕ್ಷನ್ ಮ್ಹಾಲಕ ಪ್ರಸನ್ನ ಭಟ್ ಪಂಚವಟಿಯವರು ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಆಗುತ್ತದೆ ಎಂಬುದು ತನ್ನ ಅನಿಸಿಕೆ ಎಂದು ಹೇಳಿದರು.

ಅನಿಸಿಕೆ: ಮೇಳದಲ್ಲಿ ಭಾಗವಹಿಸಿದ ಕಬ್ಸ್ ವಿಭಾಗದಿಂದ ಲಿಟ್ಲ್ ಫ್ಲವರ್ ಹಿ.ಪ್ರಾ.ಶಾಲೆಯ ಗುರುದತ್, ಬುಲ್ ಬುಲ್ ವಿಭಾಗದಿಂದ ಕೈಕಾರ ಶಾಲೆಯ ಧನ್ಯಶ್ರೀ, ಗೈಡ್ಸ್‌ನಿಂದ ಮುಂಡೂರು ಶಾಲೆಯ ಕೃಪಾ, ಸ್ಕೌಟ್ಸ್‌ನ ತನುಷ್ ಪಾಪೆಮಜಲು ಶಾಲೆ, ರೋವರ‍್ಸ್‌ನ ಶ್ರೀವತ್ಸ ಹಾಗೂ ರೇಂಜರ‍್ಸ್ ವಿಭಾಗದಿಂದ ವಿವೇಕಾನಂದ ಕಾಲೇಜಿನ ಆಶಿಕಾ, ಶಿಕ್ಷಕರ ವಿಭಾಗದಿಂದ ದೇವಪ್ಪ (ಸ್ಕೌಟ್ಸ್) ಮತ್ತು ಹರಿಣಾಕ್ಷಿ (ಗೈಡ್ಸ್)ಯವರು ಮೇಳದ ಬಗ್ಗೆ ಅನಿಸಿಕೆ ಹೇಳಿದರು.

ಸ್ಮರಣಿಕೆ ನೀಡಿ ಗೌರವ: ಬೆಳಿಯೂರುಕಟ್ಟೆ ಕಾಲೇಜು, ವಿವೇಕಾನಂದ ಕಾಲೇಜು ರೋವರ‍್ಸ್ ಮತ್ತು ರೇಂಜರ‍್ಸ್ ಘಟಕ, ಮುಕ್ವೆ ಶಾಲಾ ಶಿಕ್ಷಕ ವೃಂದದವರಿಗೆ, ಅಕ್ಷರ ದಾಸೋಹ ಸಿಬ್ಬಂದಿಗಳಿಗೆ, ಶ್ರೀದೇವಿ ಕೆಟರರ‍್ಸ್‌ನ ಮ್ಹಾಲಕರಿಗೆ, ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ಮತ್ತು ಸದಸ್ಯರು, ಆರೋಗ್ಯ ಸಹಾಯಕಿ, ಪೊಲೀಸ್ ಸಿಬ್ಬಂದಿ ಉಮೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಎಂ. ಹಾಗೂ ಮೇಳದ ಪೂರ್ವ ಸಿದ್ದತೆಗೆ ಆಗಮಿಸಿದ ವಿವಿಧ ಶಾಲೆಯ ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಕೋಶಾಧಿಕಾರಿ ವಾಸುದೇವ ಬೋಳಾರ್, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಆಚಾರ್ ಹಿಂದಾರು, ಟಿಂಬರ್ ಮರ್ಚಂಟ್ಸ್ ಹನೀಫ್ ಮುಕ್ವೆ ಆಗಮಿಸಿದ್ದರು. ವೇದಿಕೆಯಲ್ಲಿ ಮುಕ್ವೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಎಂ, ಕಾರ್ಯದರ್ಶಿ ಅಶ್ರಫ್ ಮುಕ್ವೆ, ಉಮಾ ಡಿ. ಪ್ರಸನ್ನ, ಗೈಡ್ಸ್ ಸಹಾಯಕ ತರಬೇತಿ ನಾಯಕಿ ಸುನೀತಾ ಎಂ, ಉಪಸ್ಥಿತರಿದ್ದರು. ಗೈಡ್ಸ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆ  ಕಾರ್ಯಾಧ್ಯಕ್ಷ ಶ್ರೀಧರ ರೈ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆ ಕಾರ‍್ಯದರ್ಶಿ ವಿದ್ಯಾ ಆರ್. ಗೌರಿ ಮತ್ತು ಶಿಕ್ಷಕಿ ಮೇಬುಲ್ ರವರು ಅತಿಥಿಗಳಿಗೆ ಗುಲಾಬಿ ನೀಡಿ ಗೌರವಿಸಿದರು. ಮೇಳದ ನಾಯಕಿ, ಮುಕ್ವೆ ಹಿ.ಪ್ರಾ. ಶಾಲಾ ಸಹ ಶಿಕ್ಷಕಿ ವೇದಾವತಿಯವರು ಎರಡು ದಿನಗಳ ಕಾಲ ನಡೆದ ಮೇಳದ ವರದಿಯನ್ನು ಮಂಡಿಸಿದರು. ಮುಕ್ವೆ ಶಾಲಾ ಮುಖ್ಯೊಪಾದ್ಯಾಯಿನಿ ಅನಸೂಯ ಮತ್ತು ಶಿಕ್ಷಕ ವೃಂದ, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಊರ ಮತ್ತು ಪರವುರ ದಾನಿಗಳ ಸಹಕಾರದಿಂದ ಮೇಳವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  ಮುಕ್ವೆ ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ಬಾ ವಂದಿಸಿದರು. ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಶಿಕ್ಷಕಿ ಹೇಮಲತಾ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು. ಎರಡೂ ದಿನಗಳಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

ಬನ್ನೀಸ್’ ಉದ್ಘಾಟನೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ನೂತನ ಘಟಕ ‘ಬನ್ನೀಸ್’ ವನ್ನು ಮೇಳದ ಸಮಾರೋಪ ಸಮಾರಂಭದಲ್ಲಿ ಉದ್ಘಾಟಿಸಲಾಯಿತು. ಮುಕ್ವೆ ಶಾಲೆಯ ಎಲ್‌ಕೆಜಿಯ ೨೬ ಪುಟಾಣಿಗಳಿಗೆ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾದ ಎನ್.ಜಿ. ಮೋಹನ್‌ರವರು ಸಮವಸ್ತ್ರ ತೊಡಿಸಿ ಘಟಕವನ್ನು ಉದ್ಘಾಟಿಸಿದರು. ಕಾವು ಹೇಮನಾಥ ಶೆಟ್ಟಿಯವರು ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.

20160112234117

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.