ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸುದಾನದಲ್ಲಿ ‘ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ’

Puttur_Advt_NewsUnder_1
Puttur_Advt_NewsUnder_1

DSC02505ಪುತ್ತೂರು : ಸುದಾನ ಶಾಲೆಯಲ್ಲಿ ಬೆಳ್ಳಿಹಬ್ಬ ಆಚರಣೆಯ ಪ್ರಯುಕ್ತ ಜ.8 ರಂದು ಮೂರು ಶೈಕ್ಷಣಿಕ ಕಾರ‍್ಯಕ್ರಮಗಳನ್ನು ಜಂಟಿಯಾಗಿ ನಡೆಸಲಾಯಿತು. ತಾಲೂಕಿನ ಪ್ರೌಢ ಶಾಲಾ ಮಕ್ಕಳಿಗೆ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.  ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು.  ದಿನೇಶ್‌ಭಟ್‌ರವರಿಂದ ‘ ಗ್ರಾಹಕರ ಹಕ್ಕುಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ | ನಿತ್ಯಾನಂದ ಪೈಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರಿಸಿದರು. Making India Telefilm  ನ ಆಧಾರದಲ್ಲಿ ಪ್ರಬಂಧ ಸ್ಪರ್ದೆ ನಡೆಸಲಾಯಿತು.  ವಿವೇಕಾನಂದ ಪಿ.ಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹರೀಶ್ ಶಾಸ್ತ್ರಿ ರಸಪ್ರಶ್ನೆ ಸ್ಪರ್ಧೆಯನ್ನು 6 ಸುತ್ತುಗಳಲ್ಲಿ ನಡೆಸಿಕೊಟ್ಟರು. ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಹರಿನಂದನ ಮತ್ತು ಶ್ಯಾಮ್ ಪ್ರದೀಪ್ ಪ್ರಥಮ, ಬೆಥನಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯ  ಬೆವನ್ ಮತ್ತು     ಆಯ್ಯುಷ್ ರೈ  ದ್ವಿತೀಯ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲೆಯ  ವಿಶ್ರಾಂತ್ ಎ ಮತ್ತು ಯಶಸ್ವಿನಾರಾಯಣ್ ತೃತೀಯ ಬಹುಮಾನವನ್ನು ಪಡೆದರು. ಇಂದ್ರಪ್ರಸ್ಥ ವಿದ್ಯಾಲಯದ ಅಮೃತ ನಾಯರ್ ಎ.ಎಸ್ ಹಾಗೂ ಸ್ಪೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ವಿಘ್ನರಾಜ್ ಕೆ.ಎಮ್, ಬಿ.ಖುಷಿ ಎಸ್ ರೈ, ಸಂತಫಿಲೋಮಿನಾ ಹೈಸ್ಕೂಲ್‌ನ ನೆವಿಲ್ ಮತ್ತು ಆಶ್ರಿತ್ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು. ಶಾಲೆಯ ಸಹಶಿಕ್ಷಕರಾದ ನಿಕೇತ್ ಮೋಹನ್ ಶೆಟ್ಟಿ ಮತ್ತು  ರೇಖಾರವರು ಕಾರ್ಯಕ್ರಮ ನಿರೂಪಿಸಿದರು.

DSC02532

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.