ಕುಮ್ಕಿ ಹಕ್ಕನ್ನು ಸರಕಾರ ಯಾವುದೇ ಕಾರಣಕ್ಕೂ ವಶ ಪಡಿಸುವುದಿಲ್ಲ-ಹೇಮನಾಥ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

20160113_112316ಪುತ್ತೂರು: ಕುಮ್ಕಿ ಹಕ್ಕಿನ ವಿಚಾರಕ್ಕೆ ಸಂಬಂಧಿಸಿ ಭೂಮಿಯನ್ನು ವಶಪಡಿಸಿಕೊಳ್ಳಲು ಸುಪ್ರಿಂ ಕೋರ್ಟು ತೀರ್ಮಾನ ಕೊಟ್ಟಿದೆ ಎಂದೆಲ್ಲಾ ರೈತರಲ್ಲಿ ಗೊಂದಲವಿದೆ. ಆದರೆ ಭೂಮಿ ವಶಪಡಿಸಿಕೊಳ್ಳುವ ವಿಚಾರ ಸರಕಾರದ ಚಿಂತನೆಯಲ್ಲಿ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಸರಿಯಾಗಿ ಅರ್ಥೈಸಿಕೊಳ್ಳದ ಕೆಲವರು ಒಂದು ರೀತಿಯ ರಾಜಕೀಯ ಗೊಂದಲ ನಿರ್ಮಾಣ ಮಾಡಿ ರಾಜಕೀಯ ಲಾಭ ಗಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಸರಕಾರ ಮತ್ತು ನ್ಯಾಯಾಲಯದ ತೀರ್ಪಿನಲ್ಲಿ ಗೊಂದಲ ಇಲ್ಲ ಎಂದ ಅವರು ಕೃಷಿ ಸಮೇತ ಮಾಡಬಹುದು ಎಂಬ ನಿಟ್ಟಿನಲ್ಲಿ ರೈತರು ಭೂಮಿಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಏಕಪಕ್ಷೀಯವಾಗಿ ಸರಕಾರ ಯಾವುದೇ ಕಾರಣಕ್ಕೂ ಭೂಮಿಯನ್ನು ವಶಪಡಿಸುವುದಿಲ್ಲ. ಈ ಕುರಿತು ರೈತರ ಕುಮ್ಕಿಯನ್ನು ಉಳಿಸಲು ರಾಜ್ಯ ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಲಾಗುವುದು. ರೈತರಿಗೆ ಯಾವುದೇ ತೊಂದರೆ ಆದಲ್ಲಿ ರೈತರ ಪರವಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲು ನಾವು ಸಿದ್ಧರಾಗಿದ್ದೇವೆ. ಒಂದು ವೇಳೆ ಕುಮ್ಕಿ ಜಮೀನನ್ನು ಸ್ವಲ್ಪ ಭಾಗ ಸರಕಾರಿ ಸಾರ್ವಜನಿಕ ಉದ್ದೇಶಗಳಿಗೆ ತೀರಾ ಅವಶ್ಯವಾದಲ್ಲಿ ಅದನ್ನು ವಿರಹಿತ ಪಡಿಸುವ ಸಂದರ್ಭದಲ್ಲಿ ಕುಮ್ಕಿದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಸರಕಾವನ್ನು ಒತ್ತಾಯಿಸಲಿದ್ದೇವೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಾರ್ಮಿಕ ಘಟಕದ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಕಿಸಾನ್ ಘಟಕದ ಸಹ ಅಧ್ಯಕ್ಷ ಕಿಟ್ಟಣ್ಣ ಗೌಡ, ಸತೀಶ್ ನೈಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.