ಪ್ರಜ್ಞಾಹೀನ ಹೇಳಿಕೆ ನೀಡಿದ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷರು ಕ್ಷಮೆ ಯಾಚಿಸಬೇಕು-ಮೊಗೇರ ಸಂಘ ಒತ್ತಾಯ

Puttur_Advt_NewsUnder_1
Puttur_Advt_NewsUnder_1

20160113_111137

ಪುತ್ತೂರು: ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಶಾಖೆಯ ಎರಡನೇ ವರ್ಷದ ವಾರ್ಷಿಕ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡುರವರು ಸರ್ವೆಗ್ರಾಮದ ಸೊರಕೆಯಲ್ಲಿ ಮೊಗೇರ ಜಾತಿಯ ಹುಡುಗಿಗೆ ಅನ್ಯಾಯವಾದಾಗ ಮೊಗೇರ ಸಂಘದವರು ಮೌನವಾಗಿದ್ದರು ಎಂದು ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಈ ಕುರಿತು ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಸಾರ್ವಜನಿಕ ಕ್ಷಮೆ ಯಾಚಿಸಬೇಕು ಎಂದು ಮೊಗೇರ ಯುವ ವೇದಿಕೆ ಅಧ್ಯಕ್ಷ ಶೇಖರ್ ಮಾಡಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜಾತಿಯ ಹುಡುಗಿಗೆ ಅನ್ಯಾಯವಾದಾಗ ಮೊಗೇರ ಸಂಘ ಮೌನದಿಂದಿರಲಿಲ್ಲ. ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ಹೋರಾಟ ರೂಪಿಸುವ ಸಲುವಾಗಿ ದರ್ಬೆಯಿಂದ ಮೆರವಣಿಗೆ  ನಡೆಸಿ ಮಿನಿ ವಿಧಾನ ಸೌಧದ ಬಳಿ ಬೃಹತ್ ಪ್ರತಿಭಟನಾ ಸಭೆಯನ್ನು ಮೊಗೇರ ಯುವ ವೇದಿಕೆ ಮತ್ತು ದಲಿತ್ ಸೇವಾ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿತ್ತು. ಈ ಕಾರ‍್ಯಕ್ರಮದಲ್ಲಿ ಶೇ.80 ರಷ್ಟು ಮೊಗೇರ ಸಮುದಾಯದವರೇ ಭಾಗವಹಿಸಿದ್ದರು. ಆದರೆ ಕಾರ‍್ಯಕ್ರಮದ ಬ್ಯಾನರ್‌ನಲ್ಲಿ ಸೇಸಪ್ಪ ಬೆದ್ರಕಾಡುರವರ ದಲಿತ್ ಸೇವಾ ಸಮಿತಿಯ ಹೆಸರನ್ನು ಮಾತ್ರ ನಮೂದಿಸಿ ಕಾರ‍್ಯಕ್ರಮವನ್ನು ಅವರ ನೇತೃತ್ವದಲ್ಲಿ ನಡೆಸಲಾಗಿದೆ ಎಂದು ಬಿಂಬಿಸಲಾಗಿದೆ. ಮೊಗೇರ ಸಮುದಾಯದವರು ನ್ಯಾಯ ಪರವಾಗಿ ಹೋರಾಟದಲ್ಲಿ ಹಿಂದಿನಿಂದಲೂ ದಲಿತ ಸಂಘಟನೆಗಳ ಜೊತೆ ಸೇರಿಕೊಂಡ ಸಮುದಾಯವಾಗಿರುತ್ತದೆ. ಆಧರೆ ಸೇಸಪ್ಪ ಬೆದ್ರಕಾಡುರವರು ನಮ್ಮ ಮೊಗೇರ ಸಮುದಾಯವನ್ನೇ ಅಪಮಾನಿಸಿದ್ದಾರೆ. ಈ ಕುರಿತು ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲು ಸಿದ್ಧ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೊಗೇರ ಯುವ ವೇದಿಕೆ ಕಾರ್ಯದರ್ಶಿ ಕೊರಗಪ್ಪ ಈಶ್ವರಮಂಗಲ, ಉಪಾಧ್ಯಕ್ಷ ಸುಮಿತ್ರಾ ಪುರುಷಕಟ್ಟೆ, ಸದಸ್ಯ ವಸಂತ ಕುಬಲಾಡಿ, ರಾಜೀವ ಹೊಸ್ಮಠ ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.