ಮುಡಿಪುನಡ್ಕ ವಾರ್ಷಿಕ ನೇಮೋತ್ಸವ-ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

27fda4c9-9c91-4f11-b41b-76ad05cbf639ಪೆರಾಬೆ: ಶ್ರೀ ಮುಡಿಪುನಾರು ಚಾಮುಂಡಿ ದೈವಸ್ಥಾನ, ಮುಡಿಪಿನಡ್ಕ ಕುಂತೂರು ವಾರ್ಷಿಕ ನೇಮೋತ್ಸವದ ಬಗ್ಗೆ ಸಾಮಾನ್ಯ ಸಭೆ ಜ.12ರಂದು ಸಂಜೆ ಉತ್ಸವ ಸಮಿತಿ ಅಧ್ಯಕ್ಷರಾದ ಮುರಮೇಶ್ವರ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯಿತ್ತು. ಅರ್ಭಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಪ್ರಸಾದ್ ಉಪಾಧ್ಯಾಯರವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭಗೊಂಡಿತು. 2014-15ನೇ ಸಾಲಿನ ಉತ್ಸವ ಸಮಿತಿ ರಚಿಸಿ ವಾರ್ಷಿಕೋತ್ಸವದ ಆಯ-ವ್ಯಯಗಳ ಬಗ್ಗೆ ವಾರ್ಷಿಕ ಲೆಕ್ಕಪತ್ರಗಳ ವರದಿಯನ್ನು ಆಡಳಿತ ಸಮಿತಿ ಕಾರ್ಯದರ್ಶಿ ಮಂಜಪ್ಪ ಕೆ. ವಾಚಿಸಿದರು. 2014-15ನೇ ಸಾಲಿನ ಸಮಿತಿ ರಚನೆಯಾದ ಬಗ್ಗೆ ಯೋಗೀಶ ಅಗತ್ತಾಡಿ ಸಭೆಗೆ ವಿವರಿಸಿದರು. ಸಭೆಯಲ್ಲಿ ವರ್ಷಂಪ್ರತಿ ನೇಮೋತ್ಸವ ನಡೆಸುವುದೆಂದು ತೀರ್ಮಾನಿಸಲಾತು. 2015-16ನೇ ಸಾಲಿನ ನೇಮೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ವಿಶ್ವನಾಥ ಕೇವಳ ಸಭೆಗೆ ಸೂಚಿಸಿದರು. ನೇಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಖರ್ಚು-ವೆಚ್ಚಗಳನ್ನು ಭರಿಸುವ ಬಗ್ಗೆ ಕಿಟ್ಟಣ್ಣ ಶೆಟ್ಟಿ ವಿವರಿಸಿದರು. ಇದರ ಸಾದಕ-ಬಾಧಕಗಳ ಬಗ್ಗೆ ಜ.19ರಂದು ಸಂಜೆ ಪೂರ್ವ ತಯಾರಿ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಉತ್ಸವ ಸಮಿತಿ ಕೋಶಾಧಿಕಾರಿ ಬಿ.ಎನ್. ಕೃಷ್ಣಕುಮಾರ್ ಅಗತ್ತಾಡಿ, ಪಂಚಾಯತ್ ಸದಸ್ಯ ಹಾಗೂ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ರೈ ಅಗತ್ತಾಡಿ, ಸದಸ್ಯರುಗಳಾದ ಕಿಟ್ಟಣ್ಣ ಶೆಟ್ಟಿ, ಸಂದೀಪ್ ನೂಜಿಲ, ಜನಾರ್ಧನ ರೈ ಗುತ್ತುಪಾಲು, ಉದಯ ಕುಮಾರ್ ಬಾಣಬೆಟ್ಟು, ಮಹಾಬಲ ರೈ ಬಾಲಾಜೆ, ಶಾಂತಾರಾಮ ರೈ ಕೂಂತೂರುಗುತ್ತು, ನಾಗಪ್ಪ ಗೌಡ ಅಲಂಗಪ್ಪೆ, ಸುಂದರ ಆಚಾರ್ಯ ಕುಂತೂರು, ನೇಮಿರಾಜ ಶೇಡಿ, ಶೈಲೇಶ್ ಕುಮಾರ್ ಆಗತ್ತಾಡಿ, ಸುಬ್ರಹ್ಮಣ್ಯ ಬಂಗೇರ ಆಗತ್ತಾಡಿ, ವಿಶ್ವನಾಥ ಕೇವಳ, ದಾಮೋದರ ಗೌಡ ಬಾಣಬೆಟ್ಟು, ಬಲತ್ತನೆ ಕೋಡಿ, ಕುಶಾಲಪ್ಪ ಗೌಡ, ಸತೀಶ ರೈ, ರವೀಂದ್ರದಾಸ್ ಪೂಂಜ, ಹರೀಶ ಬಾಣಬೆಟ್ಟು, ದೈವ ನರ್ತಕರಾದ ಚೆನ್ನಪ್ಪ ಅಜಲಾಯ ನಲ್ಲಜಾಲ್ ಹಾಗೂ ಕರಿಯಪ್ಪ ಅಜಲಾಯ ನಲ್ಲಜಾಲ್ ಉಪಸ್ಥಿತರಿದ್ದರು.

ಚಿತ್ರ, ವರದಿ: ಬಾಲಕೃಷ್ಣ ಪೆರಾಜೆ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.