Breaking News

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಕೇಂದ್ರ ಕಾನೂನು ಸಚಿವರ ಕುಟುಂಬಸ್ಥರ ಭೇಟಿ – ಗೋಪೂಜೆ

Puttur_Advt_NewsUnder_1
Puttur_Advt_NewsUnder_1

bilineleಕಡಬ: ಮಕರ ಸಂಕ್ರಮಣದ ನಿಮಿತ್ತ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜ.13 ರಂದು ನಡೆದ ಮಹಾಪೂಜೆ ಹಾಗೂ ವಿಶೇಷ ಗೋಪೂಜೆಗೆ ಕೇಂದ್ರ ಕಾನೂನು ಸಚಿವರಾದ ಡಿ.ವಿ ಸದಾನಂದ ಗೌಡರ ಕುಟುಂಬಸ್ಥರು ಆಗಮಿಸಿ ಗೋಪೂಜೆ ಮಾಡಿಸುವುದರೊಂದಿಗೆ ಪೂಜಾ ಕಾರ‍್ಯಕ್ರಮದಲ್ಲಿ ಭಾಗವಹಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ್ ಭಟ್ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ಅನುವಂಶೀಯ ಮೊಕ್ತೇಸರ ಚಕ್ರೇಶ್ವರ ಆರಿಗ, ಆಡಳಿತಾಧಿಕಾರಿ ಕಡಬ ಉಪತಹಶೀಲ್ದಾರ್ ನವ್ಯ, ಕೇಂದ್ರ ಕಾನೂನು ಸಚಿವರ ಸಂಬಂಧಿಕರಾದ ಕೊಡಗು ಜಿಲ್ಲಾ ಕುಶಾಲನಗರ ಗುಡ್ಡೆಮನೆ ಮಣಿಕುಮಾರ್, ವಿಶ್ವ ಕುಮಾರ್, ವನಜಾಕ್ಷಿ, ಜಯ, ಪುಷ್ಪಾ, ಶಾಂತಿ, ಲತಾ, ಪುನೀತ್, ಬಿಳಿನೆಲೆ ತಾ.ಪಂ.ಸದಸ್ಯೆ ಸರೋಜಿನಿ ಜಯಪ್ರಕಾಶ್, ಬಿಳಿನೆಲೆ ಗ್ರಾಮ ಸಹಾಯಕ ಶ್ರೀನಿವಾಸ್, ದೇವಸ್ಥಾನದ ಸಹಾಯಕ ಜಿನ್ನಪ್ಪ, ಬಿಳಿನೆಲೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೇಶವ ಗೌಡ, ಪುತ್ತಿಲ ಬೈಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುಡ್ಡಪ್ಪ ಗೌಡ, ಸತೀಶ್ ಎರ್ಕ ಸೇರಿದಂತೆ ಹಲವಾರು ಊರಿನ, ಪರವೂರಿನ, ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.