ಚಿಕ್ಕಪುತ್ತೂರು: ಕಾಲುದಾರಿ ದುರಸ್ತಿಗೊಳಿಸಲು ಟೆಂಡರ್

Puttur_Advt_NewsUnder_1
Puttur_Advt_NewsUnder_1

2ಪುತ್ತೂರು: ರೈಲ್ವೆ ನಿಲ್ದಾಣದ ರಸ್ತೆಯ ಪಕ್ಕದಲ್ಲಿರುವ ಚಿಕ್ಕಪುತ್ತೂರಿನಿಂದ ಲಕ್ಷ್ಮಿದೇವಿ ಬೆಟ್ಟ-ಸಾಲ್ಮರಕ್ಕೆ ಹೋಗುವ ಸಂಪರ್ಕ ರಸ್ತೆ ಬಳಿಯ ಕಾಲುದಾರಿಯನ್ನು ದುರಸ್ತಿಗೊಳಿಸಲು ಇದೀಗ ಟೆಂಡರ್ ಕರೆಯಲಾಗಿದ್ದು ಕೂಡಲೇ ದುರಸ್ತಿಯಾಗಲಿದೆ.

ಆಮ್ ಆದ್ಮಿ ಹೋರಾಟದ ಫಲ: ಕಳೆದ ಮಳೆಗಾಲದಲ್ಲಿ ಕಾಲುದಾರಿಯ ಮಣ್ಣು ಜರಿದು ಬಿದ್ದು ಕಾಲುದಾರಿಯಲ್ಲಿ ನಡೆದಾಡಲು ಅವ್ಯವಸ್ಥೆ ನಿರ್ಮಾಣವಾದ ಕುರಿತು ಆಮ್ ಆದ್ಮಿ ಪಕ್ಷದ ಪುತ್ತೂರು ಘಟಕದ ನಿಯೋಗವು ನಗರಸಭೆಗೆ ತೆರಳಿ ಕಾಲುದಾರಿಯನ್ನು ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿತ್ತು. ಮಾತ್ರವಲ್ಲದೆ `ಸುದ್ದಿ’ ಪತ್ರಿಕೆಯಲ್ಲಿ ಈ ಕುರಿತು ಸಚಿತ್ರ ವರದಿ ಪ್ರಕಟವಾಗಿತ್ತು. ದುರಸ್ತಿಗೊಳಿಸುವ ಲಿಖಿತ ಭರವಸೆ ಪಕ್ಷಕ್ಕೆ ನಗರಸಭೆಯಿಂದ ಬಂದಿತ್ತಾದರೂ ಕೆಲಸದಲ್ಲಿ ಮಾತ್ರ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಜನವರಿ ಮೊದಲ ವಾರದಲ್ಲಿ ಪಕ್ಷದ ನಿಯೋಗವು ಮತ್ತೊಮ್ಮೆ ನಗರಸಭೆಗೆ ಹೋಗಿ ಪೌರಾಯುಕ್ತರನ್ನು ಭೇಟಿಯಾಗಿ ಜ್ಞಾಪಿಸಿದ ಫಲವಾಗಿ ಕಾಲುದಾರಿಯ ದುರಸ್ತಿ ಕುರಿತು ಜನವರಿ 13ನೇ ತಾರೀಖಿನಂದು ಟೆಂಡರ್ ಕರೆಯಲಾಗಿದೆ. ನಿಯೋಗದಲ್ಲಿ ಸಂಚಾಲಕ ಇಗ್ನೀಶಿಯಸ್ ಡಾಯಸ್, ಸಹಸಂಚಾಲಕ ಕೃಷ್ಣಪ್ಪ ಕಲ್ಲೇಗ, ಕಾರ್ಯದರ್ಶಿ ಮಾರ್ಸೆಲ್ ಡಿ’ಸೋಜ ಅರೋಮ, ಗೌರವಾಧ್ಯಕ್ಷರಾದ ಎಸ್.ರಾಧಾಕೃಷ್ಣ ನಾಯಕ್, ಜಯಪ್ರಕಾಶ್ ಚಿಕ್ಕಪುತ್ತೂರು, ಸಿದ್ಧೀಕ್ ಮೊಟ್ಟೆತ್ತಡ್ಕ, ರಿಚ್ಚಾರ್ಡ್ ಡಾಯಸ್, ಎಮ್.ಬಿ.ಇಸ್ಮಾಯಿಲ್ ಬಲ್ನಾಡ್ ಉಪಸ್ಥಿತರಿದ್ದರು.

1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.