ಉಪ್ಪಿನಂಗಡಿ ಆಮ್ ಆದ್ಮಿ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

uppi

ಪುತ್ತೂರು: ಆಮ್ ಆದ್ಮಿ ಉಪ್ಪಿನಂಗಡಿ ಘಟಕದ ಸಭೆ ಉಪ್ಪಿನಂಗಡಿ ಝೀನಾ ಬಿಲ್ಡಿಂಗ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.

ಪಕ್ಷದ ಮುಖಂಡ ಆನಂದ ರಾಮಕುಂಜ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪ್ಪಿನಂಗಡಿ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಮ್ಯಾಕ್ಸಿಂ ಲೋಬೋ ಬಿಳಿಯೂರು, ಕಾರ್ಯದರ್ಶಿಯಾಗಿ ಯಾಕೂಬ್ ಕೆಮ್ಮಾರ, ಖಜಾಂಜಿಯಾಗಿ ಮಹಮ್ಮದ್ ಇಕ್ಬಾಲ್, ಸಂಘಟಕರಾಗಿ ಇಬ್ರಾಹಿಂ ಬಾತಿಷ್‌ರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಆನಂದ ರಾಮಕುಂಜ ಇವರನ್ನು ಆಯ್ಕೆ ಮಾಡಲಾಯಿತು.

ದ.ಕ.ಜಿಲ್ಲಾ ಸಮಿತಿ ಸಂಚಾಲಕ ಅಲೆಕ್ಸಾಂಡರ್ ಮಾತನಾಡಿ, ಪಕ್ಷದ ಕಾರ್ಯಕರ್ತರು ಸಮಾಜ ಸೇವಕರಾಗಬೇಕು. ಮಾನವೀಯ ಗುಣಗಳನ್ನು ಬೆಳೆಸಿಕೊಂಡು, ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ನಡೆಯಬೇಕೆಂದು ಹೇಳಿದರು. ಆನಂದ ಗೌಡ ಮಾತನಾಡಿ, ನಮ್ಮದು ಕ್ರಾಂತಿಕಾರಿ ಹೋರಾಟಗಾರರ ಸಂಘಟನೆ. ನಾವು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ನೇರ ಮಾತು, ನಿರಂತರ ಕೆಲಸದ ಮೂಲಕ ಸಂಘಟನೆ ಮಾಡಬೇಕೆಂದು ಹೇಳಿದರು. ಜಿಲ್ಲಾ ಸಮಿತಿಯ ಕೆ.ಜಯಮ್ಮ, ಬಿ.ಎನ್.ಪೂಜಾರಿ, ಆರ್ಥರ್ ಡಿ.ಸೋಜ, ಅಲ್ಬರ್ಟ್ ರೊಡ್ರಿಗಸ್, ಶ್ರೀಮತಿ ಆಗ್ನಿಸ್ ಡಿ.ಸೋಜ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.