ಕಾಣಿಯೂರು: ಸ್ವಾಮೀ ವಿವೇಕಾನಂದರ ಜನ್ಮ್ಮದಿನೋತ್ಸವದ ರಾಷ್ಟ್ರೀಯ ಯುವ ದಿನಾಚರಣೆ ಪಾಶ್ಚ್ಚಾತ್ಯ ಸಂಸ್ಕೃತಿಯಿಂದ ಅಪ್ಪ ಅಮ್ಮನ ವಾತ್ಸಲ್ಯದ ಬೆಸುಗೆಯ ಕೊಂಡಿ ಸಡಿಲಗೊಳ್ಳುತ್ತಿದೆ-ರಜನೀಶ್

Puttur_Advt_NewsUnder_1
Puttur_Advt_NewsUnder_1

kaniyoor

ಕಾಣಿಯೂರು: ನಮ್ಮ ರಾಷ್ಟ್ರೀಯ ಶಿಕ್ಷಣದ ನೀತಿ ಬದಲಾಗಬೇಕಾಗಿದೆ. ಮೌಲ್ಯವಿಲ್ಲದ ಸಂಸ್ಕಾರ ರಹಿತವಾದ ಶಿಕ್ಷಣವನ್ನು ಪಡೆದುಕೊಂಡಾಗ ಭವ್ಯ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ. ಇವತ್ತು ನಾವು ಜೀವನದಲ್ಲಿ ಪ್ರಾಶ್ಚಾತ್ಯ ಸಂಸ್ಕೃತಿಗಳನ್ನು ಅಳವಡಿಸಿಕೊಂಡಿದ್ದೇವೆ. ಇದರಿಂದಾಗಿ ಅಪ್ಪ ಅಮ್ಮನ ವಾತ್ಸಲ್ಯ ಮತ್ತು ಬಂಧು ಬಳಗದವರ ಬಾಂಧವ್ಯದ ಬೆಸುಗೆಯ ಕೊಂಡಿ ಸಡಿಲಗೊಳ್ಳುತ್ತಿದೆ. ಇಡೀ ವಿಶ್ವಕ್ಕೆ ಧರ್ಮ ಮತ್ತು ಸಂಸ್ಕಾರವನ್ನು ಬೋಧಿಸಿದ ಸ್ವಾಮೀ ವಿವೇಕಾನಂದರ ತತ್ವ ಸಿದ್ಧಾಂತಗಳು ಅನನ್ಯವಾಗಿದೆ ಎಂದು ರಜನೀಶ್ ಪಿ ಸವಣೂರು ಹೇಳಿದರು.

ಅವರು ಕಾಣಿಯೂರು ವಿಶ್ವಜ್ಞ ಯುವಕ ಮಂಡಲ ಮತ್ತು ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಜ 12 ರಂದು ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಾಮೀ ವಿವೇಕಾನಂದರ ಜನ್ಮದಿನೋತ್ಸವದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ, ಆಧ್ಯಾತ್ಮಿಕ ಚಿಂತನೆಯ ಜೊತೆಗೆ ಇಡೀ ವಿಶ್ವದಲ್ಲಿ ಧರ್ಮ ಜಾಗೃತಿ ಮೂಡಿಸಿದ ಸ್ವಾಮೀ ವಿವೇಕಾನಂದರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡರವರು, ಸ್ವಾಮೀ ವಿವೇಕಾನಂದರು ನಮ್ಮ ಭಾರತೀಯ ಧರ್ಮವನ್ನು ಇಡೀ ವಿಶ್ವಕ್ಕೆ ಬೋಧಿಸಿದ ವೀರ ಸನ್ಯಾಸಿಯಾಗಿದ್ದರು. ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರುರವರು ವಹಿಸಿ ಶುಭಹಾರೈಸಿದರು. ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಕೃಷ್ಣ ಭಟ್, ಕಾಣಿಯೂರು, ಸವಣೂರು ಕ್ಲಸ್ಟರ್ ಸಿಆರ್‌ಪಿ ಜಯಂತ್ ವೈ, ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಕಾರ್ಯಾಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥ ಕೇಶವ ಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ದೀಕ್ಷಿತ್ ಬೈತಡ್ಕ, ಪುರುಷೋತ್ತಮ ಗೌಡ ಬೈತಡ್ಕ, ಸುಧಾಕರ್ ಕಾಣಿಯೂರು, ಲಕ್ಷ್ಮೀಶ್ ಬೆಳಂದೂರು, ಚಂದ್ರಶೇಖರ ಬನಾರಿ, ಸ್ವಸ್ತಿಕ್ ಕಲ್ಪಡ, ಕುಲಕೀರ್ತಿ ಉಪ್ಪಡ್ಕ, ರಕ್ಷಿತ್ ಹುದೇರಿ, ಪ್ರಮೋದ್ ನೀರಜರಿ, ರಾಕೇಶ್ ಬನಾರಿಯವರು ಅತಿಥಿಗಳನ್ನು ಗೌರವಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ಶಿಶ್ಮಿತಾ ರೈ, ಸ್ವಾತಿ, ಪುಷ್ಪವೇಣಿಯವರು ಪ್ರಾರ್ಥಿಸಿದರು. ಯುವಕ ಮಂಡಲದ ಸದಸ್ಯ ಪುರುಷೋತ್ತಮ ಗೌಡ ಬೆತಡ್ಕ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಹುದೇರಿ ವಂದಿಸಿದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ಯುವಕ ಮಂಡಲದ ಸದಸ್ಯ ಸುಬ್ರಹ್ಮಣ್ಯ ಸಿ.ಕೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.