ತಿಂಗಳಾಡಿ ಶಾಲಾ ಬಾವಿಗೆ ಕಬ್ಬಿಣದ ಬಲೆ ಅಳವಡಿಸಲು ಮಕ್ಕಳಿಂದ ಮನವಿ

Puttur_Advt_NewsUnder_1
Puttur_Advt_NewsUnder_1

thingaladi

ಕೆದಂಬಾಡಿ ಗ್ರಾ.ಪಂ ಮಕ್ಕಳ ಗ್ರಾಮ ಸಭೆ

ಪುತ್ತೂರು: ತಿಂಗಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಬಾವಿಯು ಶಾಲಾ ಆಟದ ಮೈದಾನದ ಬದಿಯಲ್ಲಿದ್ದು, ಬಾವಿಯ ಮೇಲ್ಬಾಗಕ್ಕೆ ಯಾವುದೇ ಮುಚ್ಚಳಿಕೆ ಇರುವುದಿಲ್ಲ ಇದರಿಂದ ಮಕ್ಕಳಿಗೆ ಅಪಾಯವಿದ್ದು ಈ ಕೂಡಲೇ ಪಂಚಾಯತ್ ವತಿಯಿಂದ ಬಾವಿಯ ಮೇಲ್ಬಾಗಕ್ಕೆ ಕಬ್ಬಿಣದ ನೆಟ್ ಅಳವಡಿಸಿಕೊಡುವಂತೆ ಮಕ್ಕಳು ಪಂಚಾಯತ್‌ಗೆ ತಮ್ಮ ಬೇಡಿಕೆಯನ್ನು ಮಕ್ಕಳ ಗ್ರಾಮಸಭೆಯಲ್ಲಿ ಸಲ್ಲಿಸಿದರು.

ಗ್ರಾಮ ಪಂಚಾಯತ್‌ದ ಮಕ್ಕಳ ಗ್ರಾಮ ಸಭೆಯು ಜ.7 ರಂದು ತಿಂಗಳಾಡಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಿಂಗಳಾಡಿ ಮತ್ತು ಕೆದಂಬಾಡಿ ಶಾಲೆಯ ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕು.ಪವನಾ ಬಲ್ಲಾಳ್ ಮತ್ತು ಪ್ರತೀಕ್ ಕೆದಂಬಾಡಿ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಕಾರ‍್ಯದರ್ಶಿ ಸುರೇಂದ್ರ ರೈ ಇಳಂತಾಜೆಯವರು ಮಾಹಿತಿ ನೀಡಿದರು. ಸಭೆಯಲ್ಲಿ ಮಕ್ಕಳ ಬೇಡಿಕೆಗಳನ್ನು ಸ್ವೀಕರಿಸಲಾಯಿತು. ಮುಖ್ಯವಾಗಿ ತಿಂಗಳಾಡಿ ಶಾಲಾ ಬಾವಿಗೆ ಕಬ್ಬಿಣದ ನೆಟ್ ಅಳವಡಿಸುವುದು, ಶಾಲಾ ಆಟದ ಮೈದಾನವನ್ನು ವಿಸ್ತರಿಸುವುದು, ಗ್ರಂಥಾಲಯ, ಶಾಲಾ ಕೊಠಡಿ ರಚನೆ, ಕುಡಿಯುವ ನೀರಿನ ಟಾಂಕಿ, ಶಾಲಾ ಶೌಚಾಲಯ ದುರಸ್ತಿ ಹಾಗೂ ಶಿಕ್ಷಕರ ನೇಮಕಾತಿ ಆಗಬೇಕು ಎಂದು ಮಕ್ಕಳು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ತಿಂಗಳಾಡಿ ಶಾಲಾ ಸಹಶಿಕ್ಷಕಿ ನಯನಾ ವಿ.ರೈಯವರು ಶಾಲಾ ಬೇಡಿಕೆಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಕೆದಂಬಾಡಿ ಶಾಲಾ ಸಹಶಿಕ್ಷಕಿ ಶ್ವೇತಾ, ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಉಪಾಧ್ಯಕ್ಷೆ ಅಸ್ಮಾ ಜಿ.ಗಟ್ಟಮನೆ ಹಾಗೂ ಗ್ರಾ.ಪಂನ ಸದಸ್ಯರು ಉಪಸ್ಥಿತರಿದ್ದರು. ಕಾರ‍್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ,ವಂದಿಸಿದರು.ಸಿಬ್ಬಂದಿಗಳಾದ ಪೊಡಿಯಾ ಕೋರಂಗ, ಶ್ರೀಮತಿ ಪರಮೇಶ್ವರಿ, ಜಯಂತ ಮೇರ್ಲ, ಗಣೇಶ್, ಕು.ಮೃದುಳಾ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.