ಮುಡಿಪುನಡ್ಕ: ಮುಕ್ತ ಕಬಡ್ಡಿ ಪಂದ್ಯಾಟ ಶ್ರೀಕೃಷ್ಣ ಟ್ರೋಫಿ

Puttur_Advt_NewsUnder_1
Puttur_Advt_NewsUnder_1

8ನಿಡ್ಪಳ್ಳಿ: ಶ್ರೀಕೃಷ್ಣ ಗೆಳೆಯರ ಬಳಗ, ಮುಡಿಪುನಡ್ಕ, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿ
ಯೇಶನ್ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿ
ಯೇಶನ್ ಇದರ ಆಶ್ರಯದಲ್ಲಿ ೪ನೇ ವರ್ಷದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ‘ಶ್ರೀಕೃಷ್ಣ ಟ್ರೋಫಿ-2016’ ಇದರ ಉದ್ಘಾಟನಾ ಸಮಾರಂಭ ಜ.10ರಂದು ಬೆಳಿಗ್ಗೆ ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬಿರ್ನೋಡಿ, ದೀಪ ಬೆಳಗಿಸಿ ಪಂದ್ಯಾಟವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲಾ ದೈ.ಶಿ. ಪಳಂಬೆ ಶೇಷಪ್ಪ ಗೌಡ, ಶ್ರೀ ಶಾಂತದುರ್ಗಾ ದೇವಸ್ಥಾನ ನಿಡ್ಪಳ್ಳಿ ಇದರ ಜೀರ್ಣೋ ದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೌಡ ಪುಳಿತ್ತಡಿ, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಶಿವಪ್ಪ ನಾಯ್ಕ ತಲೆಂಜಿ, ಭಜನಾ ಮಂದಿರದ ಕೋಶಾಧಿಕಾರಿ ನಾರಾಯಣ ಪೂಜಾರಿ ಮುಡಿಪುನಡ್ಕ, ಮಂಗಳಾದೇವಿ ಟ್ರಾನ್ಸ್‌ಪೊರ್ಟ್‌ನ ಮಾಲಕ ಸುಧಾಕರ ಶೆಟ್ಟಿ ಮುಡಿಪುನಡ್ಕ, ಆಶೀರ್ವಾದ್ ಸ್ಟೋರ್‌ನ ಮಾಲಕ ಲಿಯೋ ಡಿ`ಸೋಜ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುಮತಿ ಕೆ. ಅಧ್ಯಕ್ಷತೆ ವಹಿಸಿ ದ್ದರು. ಗೆಳೆಯರ ಬಳಗದ ಅಧ್ಯಕ್ಷ ದಾಮೋದರ ಆಚಾರ್ಯ ಉಪಸ್ಥಿತರಿದ್ದರು. ನಂತರ ನಾರಾಯಣ ಭಟ್‌ರವರು ತೆಂಗಿನಕಾಯಿ ಒಡೆಯುವುದರ ಮೂಲಕ ಕ್ರೀಡಾಂಗಣದ ಉದ್ಘಾಟನೆ ಮಾಡಿ ದರು.
ಗೆಳೆಯರ ಬಳಗದ ಸದಸ್ಯ ಉಮ್ಮರ್ ಪಟ್ಟೆ ಸ್ವಾಗತಿಸಿ, ಸುರೇಶ ಬರೆಂಬೊಟ್ಟು ವಂದಿಸಿದರು. ಚಂದ್ರಶೇಖರ ಗೌಡ ಉಳಯ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲ, ಅಮರ್ ಸೊರಕೆ ಟ್ರಾನ್ಸ್‌ಪೋರ್ಟ್‌ನ ಅಮರನಾಥ ರೈ, ಬಡಗನ್ನೂರು ಗ್ರಾ.ಪಂ. ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ, ಮಣಿ ಅರ್ಥ್ ಮೂವರ್‍ಸ್‌ನ ರಾಧಾಕೃಷ್ಣ ರೈ ಪಟ್ಟೆ, ಶ್ರೀಕೃಷ್ಣ ಗೆಳೆಯರ ಬಳಗದ ಅಧ್ಯಕ್ಷ ದಾಮೋದರ ಆಚಾರ್ಯ ನೆಕ್ಕರೆ, ನಾಗೇಶ ಗೌಡ ಪುಳಿತ್ತಡಿ ಉಪಸ್ಥಿತರಿದ್ದು ವಿಜಯಿ ತಂಡಗಳಿಗೆ ಬಹುಮಾನ ವಿತರಿಸಿದರು. ಯುವಕರ ಬಳಗ ಮರೀಲ್ ಪುತ್ತೂರು ಪ್ರಥಮ, ಗ್ರೀನ್‌ಸ್ಟಾರ್ ಕಿನ್ನಿಂಗಾರ್ ದ್ವಿತೀಯ, ಶ್ರೀರಾಂ ಪುತ್ತಿಲ ತೃತೀಯ ಹಾಗೂ ಫ್ರೆಂಡ್ಸ್ ಸುಳ್ಯಪದವು ಚತುರ್ಥ ಸ್ಥಾನ ಪಡೆದುಕೊಂಡವು.

9

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.