Breaking News

ಜ.14,15: ನೆಲ್ಯಾಡಿಯಲ್ಲಿ 38ನೇ ವರ್ಷದ ಮಕರ ಜ್ಯೋತಿ ಉತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 38ನೇ ವರ್ಷದ ಮಕರ ಜ್ಯೋತಿ ಉತ್ಸವ, ಭಜನಾ ಮಹೋತ್ಸವದ ಸಮಾರೋಪ, ಅಶ್ವಥ ಉಪನಯನ ಹಾಗೂ ವಿವಾಹ ಮಂಗಳ ಮಹೋತ್ಸವ ಕಾರ್ಯಕ್ರಮ ಜ.14 ಮತ್ತು 15ರಂದು  ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಜ.14ರಂದು ಸಂಜೆ ಅಶ್ವಥ ವಿವಾಹ ಮಂಗಲೋತ್ಸವದ ಅಂಗವಾಗಿ ಅಶ್ವಥ ಕಟ್ಟೆಗೆ ವಾಸ್ತು ಬಲಿ ಮತ್ತು ವಾಸ್ತು ಹೋಮಾದಿಗಳು ನಡೆಯಲಿವೆ. ರಾತ್ರಿ ಮಕರಜ್ಯೋತಿ ಉತ್ಸವ ಆರಂಭ’ಪಡಿಪೂಜೆ’ನಡೆಯಲಿದೆ. ಜ.15ರಂದು ಬೆಳಿಗ್ಗೆ ಮಹೋತ್ಸವದ ಭಜನೆ ಪ್ರಾರಂಭ, ಅಶ್ವಥ ಕಟ್ಟೆಯಲ್ಲಿ ಪುಣ್ಯಾಹ ವಾಚನ, ಪ್ರಾರ್ಥನೆ, ನವಗ್ರಹ ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಗಣಪತಿ ಹೋಮ ನಡೆಯಲಿದೆ. ಬಳಿಕ ದೇವಸ್ಥಾನದ ಒಳಗೆ ಗಣಹೋಮ, ನಿತ್ಯಪೂಜೆ, ಸೀಯಾಳಾಭಿಷೇಕ, ಪಂಚಾಮೃತ ಅಭಿಷೇಕ, ಅಯ್ಯಪ್ಪ ಸ್ವಾಮಿಗೆ ವಿಶೇಷ ತುಪ್ಪಾಭಿಷೇಕ ನಡೆಯಲಿದೆ. ಬಳಿಕ 9.50ರ ಕುಂಭ ಲಗ್ನ ಸುಮುಹೂರ್ತದಲ್ಲಿ ಅಶ್ವಥ ಉಪನಯನ ಹಾಗೂ ವಿವಾಹ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೇರಳದ ಪ್ರಖ್ಯಾತ ಸಿಂಗಾರಿ ಮೇಳ ಇವರ ಚೆಂಡೆವಾದನದೊಂದಿಗೆ ಮಕರ ಜ್ಯೋತಿಯ ವೈಭವದ ಮೆರವಣಿಗೆ, ‘ನೀಲಾಂಜನ ದೀಪದರ್ಶನ’ನಡೆಯಲಿದೆ. ರಾತ್ರಿ ದೀಪಾರಾಧನೆ, ಪುಷ್ಪಾಭಿಷೇಕ ನಡೆಯಲಿದೆ. ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಸುಳ್ಯ ಶಾಸಕ ಎಸ್.ಅಂಗಾರ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೆಲ್ಯಾಡಿ ಉಕ್ಷಿಪ್ತ ನೃತ್ಯ ಕಲಾ ಶಾಲೆಯ ವಿದುಷಿ ಶ್ರೀಮತಿ ಸುರೇಖಾ ಹರೀಶ್ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ, ಜಾನಪದ ನೃತ್ಯ ನಡೆಯಲಿದೆ. ನಂತರ ಮಂಗಳೂರು ಬಾಳ-ಕಳಾರ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಮಹಿಮೆದ-ಮಂತ್ರದೇವತೆ” ಯಕ್ಷಗಾನ ನಡೆಯಲಿದೆ. ಜ.16ರಂದು ಬೆಳಿಗ್ಗೆ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.