ಮುಗೇರಡ್ಕ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ ದೈವರಾಧನೆಗಳು ಪ್ರಾಕೃತಿಕವಾಗಿಯೇ ನಡೆಯಬೇಕು: ದಯಾನಂದ ಕತ್ತಲ್‌ಸರ್

Puttur_Advt_NewsUnder_1
Puttur_Advt_NewsUnder_1

1451ಪುತ್ತೂರು: ದೈವಗಳು ಈ ಮಣ್ಣಿನ ಸತ್ಯ. ಅವುಗಳ ಆರಾಧನೆ ಪ್ರಾಕೃತಿಕವಾಗಿಯೇ ನಡೆಯಬೇಕು. ಪ್ರಾಕೃತಿಕವಾದ ಮಣ್ಣು ಇದ್ದಲ್ಲಿ ಮಾತ್ರ ದೈವಿ ಶಕ್ತಿಯೂ ಇರುತ್ತದೆ ಎಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ವಿಧ್ವಾಂಸ ದಯಾನಂದ ಜಿ.ಕತ್ತಲ್‌ಸರ್ ಹೇಳಿದರು.
ಅವರು ಉಪ್ಪಿನಂಗಡಿ ಸಮೀಪದ ಮೊಗ್ರು ಗ್ರಾಮದ ಮುಗೇರಡ್ಕ ಶ್ರೀ ಮೂವರು ದೈವಗಳ ದೈವಸ್ಥಾನದಲ್ಲಿ ಕಲ್ಕುಡ ಮತ್ತು ಪಿಲಿಚಾಮುಂಡಿ ದೈವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಜ.13ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಮೂಡನಂಬಿಕೆಯಿಂದ ಮೂಲನಂಬಿಕೆ ಮರೆಯಾಗುತ್ತಿದೆ. ನಮಗೆ ದೈವದ ಎದುರು ಶರಣಾಗತಿ ಭಾವನೆ ಬರಬೇಕು. ದೈವ ಕಟ್ಟುವರರಲ್ಲೂ ನಿಯಮವಿರಬೇಕೆಂದು ಹೇಳಿದರು.

ತುಳುನಾಡು ಸುಭದ್ರ: ಪ್ರಕೃತಿಯೇ ಈ ನಾಡಿನ ಶಕ್ತಿ. ನಾವು ಪ್ರಕೃತಿ ಆರಾಧಕರು. ಎಲ್ಲೆಡೆ ಭೂಕಂಪ, ಸುನಾಮಿ ಸಂಭವಿಸಿ ಪ್ರಕೃತಿಯೇ ನಾಶವಾಗಿದೆ. ಆದರೆ ತುಳುನಾಡು ದೈವಾರಾಧನೆಯ ನಾಡು. ಇಲ್ಲಿ ಇಂದಿನ ತನಕವೂ ಪ್ರಕೃತಿ ಮುನಿದಿಲ್ಲ. ದೈವರಾಧಾನೆಯಿಂದಲೇ ತುಳುನಾಡು ಸುಭದ್ರವಾಗಿದೆ ಎಂದು ದಯಾನಂದ ಕತ್ತಲ್‌ಸರ್ ಅಭಿಪ್ರಾಯಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುದ್ಯ ಪಾರಂತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ವೇ.ಮೂ.ಅನಂತಕೃಷ್ಣ ಉಡುಪ, ದೈವಾನುಗ್ರಹ ಹಾಗೂ ಪ್ರಯತ್ನದಿಂದ ಮುಗೇರಡ್ಕ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಇಲ್ಲಿ ಸಂಘಟನೆ ಇದೆ. ಯುವಶಕ್ತಿ ಒಗ್ಗೂಡಿ ಕೆಲಸ ಮಾಡಿದೆ ಎಂದು ಹೇಳಿದರು. ಬೆಳ್ತಂಗಡಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಬಂದಾರು ಗ್ರಾ.ಪಂ.ಅಧ್ಯಕ್ಷ ಉದಯ ಬಿ.ಕೆ., ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಕಾರ್ಯಕಾರಿಣಿ ಸದಸ್ಯೆ ಶಾರದಾ ಆರ್.ರೈ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಮುಗೇರಡ್ಕ ದೈವಗಳ ಸೇವಾ ಸಮಿತಿ ಅಧ್ಯಕ್ಷ ಡಿ.ರಾಮಣ್ಣ ಗೌಡ ದೇವಶ್ಯಗುತ್ತು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮನೋಹರ ಗೌಡ ಅಂತರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಂದರ ಗೌಡ ಉಪ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಸುದೇವ ಅಂತರ, ಸುಧಾಕರ ನಾಮಾರು, ರಮೇಶ್ ನೆಕ್ರಾಜೆ, ಶೀಲಾವತಿ, ಪುರುಷೋತ್ತಮ ಪುಣಿಕೆದಡಿ, ದಿಕ್ಷೀತ್ ಎರ್ಮಾಳ, ಮೇದಪ್ಪ, ಬೋಜ ಗೌಡ ಎರ್ಮಾಳ ಅತಿಥಿಗಳಿಗೆ ಶಾಲು ಹೊದಿಸಿ ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವೇ.ಮೂ.ಅನಂತಕೃಷ್ಣ ಉಡುಪ ಹಾಗೂ ದೈವಗಳ ಗುಡಿ ನಿರ್ಮಾಣದಲ್ಲಿ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆ ಸಮಿತಿ ಸಂಚಾಲಕ ಕುಶಾಲಪ್ಪ ಗೌಡ ಸ್ವಾಗತಿಸಿ ಕೇಶವ ಜಾಲ್ನಡೆ ವಂದಿಸಿದರು. ಚೇತನ್ ಆನೆಗುಂಡಿ ಕಾರ್‍ಯಕ್ರಮ ನಿರೂಪಿಸಿದರು. ಕು.ಲತಾ, ಕು.ರಕ್ಷಿತಾ ಹಾಗೂ ಕು.ರಮ್ಯಾ ಪ್ರಾರ್ಥಿಸಿದರು.
ತುಳುನಾಡ ವೈಭವ: ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ “ತುಳುನಾಡ ವೈಭವ”ಕಾರ್‍ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.