ಕೋಡಿಂಬಾಳ: ಮನೆಗೆ ನುಗ್ಗಿ ಮಾನಭಂಗ ಯತ್ನ ಪ್ರಕರಣದ 8 ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಪುತ್ತೂರು: ಕೋಡಿಂಬಾಳ ಪನ್ನೆ ಎಂಬಲ್ಲಿ ಮನೆಗೆ ನುಗ್ಗಿ ಮಹಿಳೆಯೋರ್ವರನ್ನು ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಕೋಡಿಂಬಾಳ ಪಣ್ಣೆ ಎಂಬಲ್ಲಿ 2015ರ ದ.27ರಂದು ಸಂಜೆ ಪ್ರಕಾಶ್, ರಮೇಶ್, ಜೋಮ, ಗಂಗಾಧರ, ಯಾದವ, ಶೇಖರ, ಗುರುವ ಎಂಬವರು ಮನೆಗೆ ನುಗ್ಗಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಕಮಲದೇವಿ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಗಳ ಪರ ವಕೀಲರಾದ ಕಿಶೋರ್ ಕೊಳತ್ತಾಯ, ಮಹೇಶ್ ಕಜೆ, ಪ್ರಸಾದ್ ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.