ಪಡುಮಲೆ ಕೂವೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ

Puttur_Advt_NewsUnder_1
Puttur_Advt_NewsUnder_1

20160114013154 (1)ಬಡಗನ್ನೂರು: ಪಡುಮಲೆ ಕೂವೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಜ.14 ರಂದು ಶ್ರೀದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಮಹಾಪೂಜೆ ನಡೆಯಿತು. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನಿರ್ದೇಶನದಂತೆ ಕುಂಟಾರು ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಿತ್ಯಾನಂದ ನಾಯಕ್ ಸುಳ್ಯಪದವು ಮತ್ತು ಸಮಿತಿಯ ಸದಸ್ಯರುಗಳು, ಊರ ಪರವೂರ ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ನೆರೆದಿದ್ದರು.

ಜ.13 ರಂದು ರಾತ್ರಿ ಗಂ.9ಕ್ಕೆ ಶ್ರೀ ದೇವರ ಬಲಿ ಹೊರಟು, ಉತ್ಸವ ನೃತ್ಯ ಬಲಿ, ಕಟ್ಟೆ ಪೂಜೆ, ಸಿಡಿಮದ್ದು ಪ್ರದರ್ಶನ ಶ್ರೀ ಭೂತ ಬಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.