ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ವಿವೇಕಾನಂದ ಜಯಂತಿ

20160113201717ಪುತ್ತೂರು: ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಮೀ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ನೆಟ್ಟಣಿಗೆ ಮುಡ್ನೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಶ್ರೀರಾಮ ಪಕಳರವರು ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಡಿವೈನ್ ಪಾರ್ಕ್ ಸಾಲಿಗ್ರಾಮದ ಕಾರ್ಯಕರ್ತ  ಪ್ರವೀಣ್ ಕುಮಾರ್ ಮೇನಾಲ ವಿದ್ಯಾರ್ಥಿಗಳಿಗೆ ಸ್ವಾಮೀ ವಿವೇಕಾನಂದರ ವಿಚಾರಧಾರೆ,ಅವರ ಜೀವನ ಚರಿತ್ರೆಯನ್ನು  ತಿಳಿಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಮಪಂಚಾಯತು ವತಿಯಿಂದ ಪ್ರೌಢಶಾಲೆಗೆ ನೀಡಲ್ಪಟ್ಟ ನ್ಯಾಪ್ಕಿನ್ ಬರ್ನಿಂಗ್ ಮೆಷಿನನ್ನು ಗ್ರಾಮಪಂಚಾಯತ್ ಉಪಾಧ್ಯಕ್ಷ ಶ್ರೀರಾಮ ಪಕಳ ಹಾಗೂ ಸದಸ್ಯ ಮಹಮ್ಮದ್ ಕೆ ಎಂ ಮೇನಾಲರವರು ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯ  ಮಹಮ್ಮದ್ ,ಅಬ್ದುಲ್ ರಹಿಮಾನ್  ರಾಗಾಳಿ, ಈಶ್ವರ ನಾಯ್ಕ, ಲೀಲಾವತಿ, ಫೌಝಿಯಾ ಕೊಟ್ಯಾಡಿರವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಝೀರ್ ಪಿ ಸ್ವಾಗತಿಸಿ ,ಸಹಶಿಕ್ಷಕಿ ಇಂದಿರಾ ಎ ವಂದಿಸಿದರು. ಸಹಶಿಕ್ಷಕಿ ಸುನೀತಾ ಬಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ದೇವಿಪ್ರಕಾಶ್ ಶೆಟ್ಟಿ,ಅರುಣ್ ಕುಮಾರ್,  ರಮ್ಯಾ ಎಸ್ ಹಾಗೂ ಪವಿತ್ರಾ ಕೆ  ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.