ಲಯನ್ಸ್ ಸೇವಾ ರಥಯಾತ್ರೆಗೆ ನೆಲ್ಯಾಡಿಯಲ್ಲಿ ಸ್ವಾಗತ

Puttur_Advt_NewsUnder_1
Puttur_Advt_NewsUnder_1

nld14a5ಪುತ್ತೂರು: ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಇದರ ಶತಮಾನೋತ್ಸವದ ಅಂಗವಾಗಿ ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆಯಾದ್ಯಂತ ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್‌ನ ಸ್ಥಾಪಕ ಮೆಲ್ವಿನ್ ಜೋನ್ಸ್‌ರವರ ಸಂದೇಶವನ್ನು ಹೊತ್ತ ರಥಯಾತ್ರೆ ಸಕಲೇಶಪುರ ಮಾರ್ಗವಾಗಿ ನೆಲ್ಯಾಡಿಗೆ ಆಗಮಿಸಿತು. ಈ ವೇಳೆ ನೆಲ್ಯಾಡಿ ಲಯನ್ಸ್ ಕ್ಲಬ್ ಮತ್ತು ಕಡಬ ಲಯನ್ಸ್ ಕ್ಲಬ್‌ನ ವತಿಯಿಂದ ಸ್ವಾಗತ ನೀಡಲಾಯಿತು.

ರಥಯಾತ್ರೆ ಉದ್ದೇಶಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಕೆ.ಸಿ. ಪ್ರಭು, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜ ಸೇವೆಯನ್ನು ಮಾಡುತ್ತಿರುವ ಲಯನ್ಸ್ ಕ್ಲಬ್ ವಿಶ್ವದಲ್ಲೇ ಮಾನ್ಯತೆಯನ್ನು ಪಡೆದಿದೆ. ಮೆಲ್ವಿನ್ ಜೋನ್ಸ್‌ರವರಿಂದ ಸ್ಥಾಪಿತವಾದ ಲಯನ್ಸ್ ಕ್ಲಬ್‌ಗೆ ನೂರು ಸಂವತ್ಸರಗಳು ತುಂಬಿದ ಸಂದರ್ಭದಲ್ಲಿ ಶತಮಾನೋತ್ಸವ ಸಂಭ್ರಮದ ಆಚರಣೆಯಲ್ಲಿದೆ. ಲಯನ್ಸ್‌ನ ಸಂದೇಶಗಳನು, ತತ್ವಾದರ್ಶಗಳನ್ನು, ಸಮಾಜಮುಖೀ ಸೇವೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಉದ್ದೇಶಕ್ಕಾಗಿ ಈ ರಥಯಾತ್ರೆ ಅತ್ಯಂತ ಯಶಸ್ವಿಯಾಗಿ ಸಾಗುತ್ತ ಇದೆ. ಲಯನ್ಸ್ ಕ್ಲಬ್‌ನ ಮೇಲೆ ಜನ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ ಎಂದು ಹೇಳಿದರು.

ಈ ರಥಯಾತ್ರೆಯ ಕಾರ್ಯಕ್ರಮದ ವಿವರವನ್ನು ರಥಯಾತ್ರೆಯ ಕಾರ್ಯಕ್ರಮದ ಸಂಯೋಜಕರಾದ ಪ್ರಶಾಂತ್ ಪೈ ನೀಡಿದರು. ನೆಲ್ಯಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು. ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಅಂಜೇರಿ ಜೋಸ್, ನೆಲ್ಯಾಡಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಒ.ಜಿ. ನೈನಾನ್, ಕಾರ್ಯದರ್ಶಿ ಕೆ.ಪಿ.ಟಿಟ್ಟಿ, ಕೋಶಾಧಿಕಾರಿ ಶಿವಣ್ಣ ಪಿ. ಹೆಗ್ಡೆ, ಕೆ.ಜೆ.ಜೋಸ್, ಜಯೇಶ್, ನೆಲ್ಯಾಡಿಯ ಉದ್ಯಮಿ ಮಹಮ್ಮದ್ ಹನೀಫ್, ಲಯನ್ಸ್ ಪದಾಧಿಕಾರಿಗಳು ರಥಯಾತ್ರೆಯನ್ನು ಸ್ವಾಗತಿಸಿದರು, ಒ.ಜಿ. ನೈನಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.