ಮೆಸ್ಕಾಂ ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸಭೆ : ಪರೀಕ್ಷೆ, ಸಂಜೆ ವೇಳೆ ಲೋಡ್‌ಶೆಡ್ಡಿಂಗ್ ಮಾಡದಂತೆ ಆಗ್ರಹ

Puttur_Advt_NewsUnder_1
Puttur_Advt_NewsUnder_1

nld14a4ಪುತ್ತೂರು: ಮೆಸ್ಕಾಂ ಸಲಹಾ ಸಮಿತಿ ಸಭೆ ಜ.8ರಂದು ನೆಲ್ಯಾಡಿ ಶಾಖೆಯಲ್ಲಿ ನಡೆಯಿತು. ಪರೀಕ್ಷೆ ವೇಳೆಯಲ್ಲಿ ವಿದ್ಯುತ್ ನಿಲುಗಡೆ ಅಥವಾ ಲೋಡ್ ಶೆಡ್ಡಿಂಗ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸಂಜೆ ವೇಳೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವುದರಿಂದ ಕೃಷಿ ಮತ್ತು ಇತರೇ ರೈತರುಗಳಿಗೆ, ಉದ್ಯೋಗಸ್ಥರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪರೀಕ್ಷೆ ಸಮಯ ಹಾಗೂ ಸಂಜೆ ವೇಳೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಬಾರದೆಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಖಾಧಿಕಾರಿ ಸಜಿಕುಮಾರ್, ಪರೀಕ್ಷೆ ವೇಳೆಯಲ್ಲಿ ವಿದ್ಯುತ್ ನಿಲುಗಡೆ ಮತ್ತು ಫಾಲ್ಟ್‌ಗಳು ಸಂಭವಿಸಿದ್ದಲ್ಲಿ ತುರ್ತಾಗಿ ಕಾರ್ಯಪ್ರರ್ವತ್ತರಾಗುತ್ತೇವೆ ಎಂದು ಹೇಳಿದರು.

ಮೀಟರ್ ರೀಡರ್ ಸಮಸ್ಯೆ:

ಉದನೆ, ಇಚ್ಲಂಪಾಡಿ, ಸೋಣಂದೂರು, ಕೌಕ್ರಾಡಿ, ಕೊಕ್ಕಡ ಪ್ರದೇಶಗಳಲ್ಲಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ಲು ನೀಡಲಾಗುತ್ತಿದೆ. ಮಾಪಕ ಓದುಗರು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ವಿದ್ಯುತ್ ಬಿಲ್ಲು ಪಾವತಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪ್ರತಿ ತಿಂಗಳು ವಿದ್ಯುತ್ ಬಿಲ್ಲು ನೀಡುವ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಶಿರಾಡಿ, ಇಚ್ಲಂಪಾಡಿ ಕೌಕ್ರಾಡಿ ಗ್ರಾಮ ವ್ಯಾಪ್ತಿಯ ಸಲಹಾ ಸಮಿತಿ ಸದಸ್ಯರಾದ ದಿವಾಕರ ಗೌಡ, ವರ್ಗೀಸ್ ಅಬ್ರಾಹಂ, ಹನೀಫ್‌ರವರು ಒತ್ತಾಯಿಸಿದರು. ಕೆಎಲ್-೪೮೬೬ರ ಸ್ಥಾವರಕ್ಕೆ ಎರಡು ತಿಂಗಳ ನಂತರ ಬಿಲ್ಲು ನೀಡಿದ್ದು, ಹಿಂದಿನ ತಿಂಗಳ ಬಿಲ್ಲು ನೀಡದೆ ಬಾಕಿ ಎಂದು ತೋರಿಸಲಾಗಿದೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶಾಖಾಧಿಕಾರಿ ಸಜಿಕುಮಾರ್, ಮಾಪಕ ಓದುಗರನ್ನು ಬದಲಾಯಿಸುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

6 ತಿಂಗಳ ಸರಾಸರಿ ಬಿಲ್ಲು ನೀಡಿ:

ಬಿಪಿಎಲ್ ಕಾರ್ಡುದಾರರಿಗೆ ಆರು ತಿಂಗಳ ಸರಾಸರಿ ಬಿಲ್ಲು ನೀಡದೇ ತಿಂಗಳ ಬಿಲ್ಲು ನೀಡಿರುವುದರಿಂದ ರೂ.೪೦೦ಕ್ಕಿಂತ ಜಾಸ್ತಿ ಬಿಲ್ಲು ತೋರಿಸಿ ಕಾರ್ಡು ರದ್ದಾಗುವಂತೆ ಆಗಿರುವ ಬಗ್ಗೆಯೂ ಸಲಹಾ ಸಮಿತಿ ಸದಸ್ಯರು ಸಭೆಯ ಗಮನ ಸೆಳೆದು, ಆರು ತಿಂಗಳ ಸರಾಸರಿ ಬಿಲ್ಲು ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಖಾಧಿಕಾರಿ ಸಜಿಕುಮಾರ್, ಬಿಪಿಎಲ್ ಕಾರ್ಡುದಾರರಿಗೆ ಆರು ತಿಂಗಳ ಸರಾಸರಿ ಬಿಲ್ಲು ಬೇಕಾದಲ್ಲಿ ಕಡಬ ಉಪ ವಿಭಾಗದ ರೆವೆನ್ಯೂ ಇಲಾಖೆಯಿಂದ ದೃಢೀಕೃತ ಪ್ರತಿ ಪಡೆದು ಸಲ್ಲಿಸಬಹುದು ಎಂದು ತಿಳಿಸಿದರು.

ಜನಸ್ಪಂಧನ ಸಭೆ ನಡೆಸಿ:

ಸಾರ್ವಜನಿಕರಿಗೆ ಮೆಸ್ಕಾಂನ ಸಮಸ್ಯೆಗಳು ಮತ್ತು ಲೋಡ್ ಶೆಡ್ಡಿಂಗ್, ಲೈನ್ ಫಾಲ್ಟ್‌ಗಳ ನಿಖರವಾದ ಮಾಹಿತಿ ನೀಡುವ ಸಲುವಾಗಿ ಮೆಸ್ಕಾಂನ ಮೇಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜನನಿಬಿಡ ಪ್ರದೇಶ ಮತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೆಸ್ಕಾಂ ಜನಸ್ಪಂದನ ಸಭೆ ನಡೆಸುವಂತೆಯೂ ಸದಸ್ಯರು ಆಗ್ರಹಿಸಿದರು. ಟ್ರಿ ಕಟ್ಟಿಂಗ್ ಕೆಲಸಕ್ಕೆ ಪಡೆದಿರುವ ಸಿಬ್ಬಂದಿಗಳನ್ನು ಇಲಾಖೆಗೆ ಸೇರಿಸಿಕೊಳ್ಳವುದಕ್ಕೆ ಪ್ರಯತ್ನ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ಹೆಚ್ಚುವರಿ ಪರಿವರ್ತಕ ಅಳವಡಿಸಿ:

ಶಿರಾಡಿ ಗ್ರಾಮದ ಪದಂಬಳ ಬಳಿ ತುಂಡಾಗಿರುವ ಕಂಬ, ಗಾಣದ ಕೊಟ್ಟಿಗೆ ರಸ್ತೆಯಲ್ಲಿ ವಾಲಿರುವ ಟ್ರಾನ್ಸ್‌ಫಾರಂ ಸೆಂಟರ್, ಕಂಬಗಳ ಬದಲಾವಣೆ, ಕೆಳಗಿನ ಬಲ್ಯ ಪರಿವರ್ತಕದ ವಾಹಕ ಬದಲಾವಣೆ, ಬದನೆ-೨ ಪರಿವರ್ತಕಕ್ಕೆ ಹೆಚ್ಚುವರಿ ಪರಿವರ್ತಕ ಮತ್ತು ವಾಹಕ ಬದಲಾವಣೆ, ಬಸ್ತಿ ಬಳಿ ಹೆಚ್ಚುವರಿ ಪರಿವರ್ತಕ ಮತ್ತು ವಾಹಕ ಬದಲಾವಣೆ, ನೆಲ್ಯಾಡಿ ತೊಟ್ಟಿಲಗುಂಡಿ ಬಳಿ ಹೆಚ್ಚುವರಿ ಪರಿವರ್ತಕ ಅಳವಡಿಕೆ, ಮಾನಡ್ಕ ಪರಿವರ್ತಕ ೬೩ ಕೆವಿಎ ಮತ್ತು ೧೦೦ ಕೆವಿಎ ವಾಹಕ ಬದಲಾವಣೆ, ಮುಡಿಪು ಪರಿವರ್ತಕ ಜೋತು ಬಿದ್ದಿರುವ ವಾಹಕಗಳ ಬದಲಾವಣೆ, ಮಾದೇರಿಯಿಂದ ಮಾಪಲವರೆಗೆ ೧೧ ಕೆವಿ ಲೈನಿನ ಬದಲಾವಣೆ, ಶಿರಾಡಿ ಗ್ರಾಮದ ದೇವರಮಾರು ಪದಂಬಳ ಬಳಿ ಹೆಚ್ಚುವರಿ ಪರಿವರ್ತಕ ಅಳವಡಿಕೆ. ಅಡ್ಡಹೊಳೆ ಆನೆತೋಟ ಮತ್ತು ಅಡ್ಡಹೊಳೆ ಚರ್ಚ್ ಬಳಿ ಹೆಚ್ಚುವರಿ ಪರಿವರ್ತಕ ಅಳವಡಿಸುವಯೂ ಸಲಹಾ ಸಮಿತಿ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಜಿಕುಮಾರ್‌ರವರು, ಹೆಚ್ಚುವರಿ ಪರಿವರ್ತಕ ಅಳವಡಿಕೆ, ವಾಹಕ ಬದಲಾವಣೆ ಬಗ್ಗೆ ತಯಾರಿಸಲಾದ ಅಂದಾಜುಪಟ್ಟಿಗಳನ್ನು ಮಂಜೂರಾತಿಗೆ ಸಲ್ಲಿಸಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಹನೀಫ್ ನೆಲ್ಯಾಡಿ ಕೌಕ್ರಾಡಿ, ಪ್ರಜಲ ಬೇಬಿ ಕೊಣಾಲು, ವರ್ಗೀಸ್ ಅಬ್ರಹಾಂ ಇಚ್ಲಂಪಾಡಿ, ದಿವಾಕರ ಗೌಡ ಶಿರಾಡಿ, ಗಂಗಾಧರ ಶೆಟ್ಟಿ ನೆಲ್ಯಾಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.