Breaking News

ತಾಲೂಕು ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ಪ್ರಕೃತಿ ಅಧ್ಯಯನ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕರ್ನಾಟಕದ ಸರಕಾರ ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಸರ್ವ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸಮನ್ವಯ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ಪ್ರಕೃತಿ ಅಧ್ಯಯನ ಶಿಬಿರ ನಡೆಯಿತು.

ಕ್ಷೇತ್ರ  ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್, ಸಮನ್ವಯಾಧಿಕಾರಿ ಸುರೇಶ್ ಕುಮಾರ್ ಪಿ, ಶಿಕ್ಷಣ ಸಂಯೋಜಕ ಕುಕ್ಕ ಎಂ, ಬಿಆರ್ ಪಿ ದೇವಕಿ, ಬಿ ಆರ್ ಪಿ ದಿನೇಶ್‌ಮಾಚಾರ್, ವಿಶೇಷ ಶಿಕ್ಷಕಿಯರಾದ ಶಶಿಕಲಾ,  ಸುಪ್ರೀಯ ಹಾಗೂ ಚಿರಾಗ್ ಸಂಸ್ಥೆಯ ಮಾಲಕಾ ಶಾನುಭೋಗ್ ಅವರ ಶುಭಹಾರೈಕೆಯೊಂದಿಗೆ ಹೊರಟ ಚಿಣ್ಣರ ತಂಡವು ಬಿರುಮಲೆ ಬೆಟ್ಟ, ನರಿಮೊಗರಿನ ನಳಿನಿ ಲೋಕಪ್ಪ ಗೌಡರ ಗೋಶಾಲೆ, ಸವಣೂರುನಲ್ಲಿರುವ ರಾಜಾರಾಮ್ ಪ್ರಭುರವರ ಒಡೆತನದ ‘ಅಶ್ವಿನಿ ಫಾರ್ಮ್’, ಶಾಂತಿಗೋಡು ನದಿ ತೀರಕ್ಕೆ, ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ಮರುದಿನ ಕೌಡಿಚ್ಚಾರಿನಲ್ಲಿರುವ ಕುಂಬಾರರ ಗುಡಿ ಕೈಗಾರಿಕಾ ಕೇಂದ್ರ, ಪರ್ಲಡ್ಕ ಶಿವರಾಮ ಕಾರಂತ ಬಾಲವನಕ್ಕೆ ತೆರಳಿದರು. ತಂಡದಲ್ಲಿ ಚಿತ್ರಕಲಾ ಶಿಕ್ಷಕರಾದ ಜಗನ್ನಾಥ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಚೈತ್ರ ಉಪಸ್ಥಿತರಿದ್ದರು.

IMG_1088

IMG_1121

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.