ಪರ್ಲಡ್ಕ ಶಿವಪೇಟೆಯಲ್ಲಿ 17ನೇ ವರ್ಷದ ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1

101ಪುತ್ತೂರು: ಇಲ್ಲಿನ ಪರ್ಲಡ್ಕ ಶಿವಪೇಟೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಪೂಜಾ ಸಮಿತಿ ವತಿಯಿಂದ 17ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅರ್ಚಕ ವಸಂತ ಕುಮಾರ್ ಕೆದಿಲಾಯ ಮತ್ತು ಬಳಗದವರಿಂದ ಜ. 13ರಂದು ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಅನ್ನದಾನದ ಪ್ರಾಯೋಜಕತ್ವವನ್ನು ಪೈ ಕೆಟರರ್‍ಸ್‌ನ ದಿನೇಶ್ ಪೈ ಮತ್ತು ಮನೆಯವರು ವಹಿಸಿದ್ದರು. ಕಟ್ಟೆಪೂಜೆ ಸಮಿತಿ ಅಧ್ಯಕ್ಷ ಡಾ. ಮಂಜುನಾಥ ಶೆಟ್ಟಿ, ಗೌರವಾಧ್ಯಕ್ಷ ಡಾ. ಬಿ.ವಿ.ಆರ್. ಭಟ್ ಬಂಗಾರಡ್ಕ, ಕಾರ್ಯದರ್ಶಿ ಕಿಶೋರ್ ಕುಮಾರ್ ಬೇರಿಕೆ, ಖಜಾಂಜಿ ಶ್ರೀಧರ ಗೌಡ, ಸದಸ್ಯರುಗಳಾದ ವರದರಾಜ ನಾಯಕ್ ಪರ್ಲಡ್ಕ, ಜಯಪ್ರಕಾಶ್ ಆಚಾರ್ಯ ಮಚ್ಚಿಮಲೆ, ಕಿಟ್ಟಣ್ಣ ರೈ, ಗಣೇಶ್ ಜೋಗಿ, ಪ್ರಶಾಂತ್ ಗೌಡ, ರಾಮಚಂದ್ರ ಗೌಡ, ಕೃಷ್ಣ ಮಚ್ಚಿಮಲೆ, ಗೋಪಾಲಕೃಷ್ಣ ಕೊಡಿಪ್ಪಾಡಿ, ಸೀತಾರಾಮ ಬಾಲವನ, ಮುತ್ತಪ್ಪ ಗೌಡ, ನವೀನ್ ಕುಮಾರ್ ಬೆಟ್ಟಂಪಾಡಿ, ಕಿರಣ್, ಶ್ರೀಧರ್ ಮಾಣಿಯಾಣಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.