ನೆಲ್ಯಾಡಿ: ದಲಿತ ದೌರ್ಜನ್ಯದ ಆರೋಪಿ ಕಲಾವತಿಗೆ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಲ್ಯಾಡಿಯಲ್ಲಿ ದಲಿತ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.

ಜ. 7 ರಂದು ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಸ್ಥಳೀಯ ನಿವಾಸಿ ಮಂಚೆ ಎಂಬವರಿಗೆ ಕೋಣಾಲಿನ ಕಲಾವತಿ ಎಂಬವರು ದಲಿತ ದೌರ್ಜನ್ಯ ಎಸಗಿದ್ದರು. ಈ ಕುರಿತು ಮಂಚೆ ಎಂಬವರು ಪುತ್ತೂರು ಎ.ಎಸ್ಪಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎ.ಎಸ್ಪಿ ರಿಷ್ಯಂತ್‌ರವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿ ಕಲಾವತಿಯವರು ನ್ಯಾಯಾಲಯಕ್ಕೆ ಶರಣಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಆರೋಪಿ ಪರ ವಕೀಲರಾದ ಕಿಶೋರ್ ಕೊಳತ್ತಾಯ, ಮಹೇಶ್ ಕಜೆ, ಪ್ರಸಾದ್ ರೈ, ಮಂಗಳೂರಿನ ನ್ಯಾಯವಾದಿ ರಾಜೇಶ್ ರೈ ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.