Breaking News

ಕೋಲ್ಪೆ: ಸಹಕಾರಿ ಸೇವೆಗಳ ಅರಿವು ಕಾರ್ಯಕ್ರಮ, ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

kolpe

ಕಬಕ: ಇಡ್ಕಿದು ಸೇವಾ  ಸಹಕಾರಿ ಸಂಘ  ಮತ್ತು ಅಮೃತ ಸಿಂಚನ ರೈತ ಒಕ್ಕೂಟದ ಸಹಭಾಗಿತ್ವದಲ್ಲಿ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಳ ಜಾತ್ರೆ ಗದ್ದೆಯಲ್ಲಿ ಸಹಕಾರಿ ಸಂಘದಿಂದ ದೊರೆಯುತ್ತಿರುವ ಸೇವೆಗಳ  ಅರಿವು ಕಾರ್ಯಕ್ರಮ ಪ್ರದರ್ಶನ ನಡೆಯಿತು.

ಕಾರ್ಯಕ್ರಮವನ್ನು ದೇವಳದ ಉತ್ಸವ ಸಮಿತಿ ಅಧಕ್ಷ ಸುರೇಶ್ ಕೆ.ಎಸ್‌ರವರು ಉದ್ಘಾಟಿಸಿದರು. ಸಹಕಾರಿ ಸಂಘದ ಸಾಧನೆಗಳ ಬಗ್ಗೆ ಸಂಘದ ಅಧ್ಯಕ್ಷ ಬಿ. ಗೋಪಾಲಕೃಷ್ಣ ಭಟ್ ಮಿತ್ತೂರು, ಅಮೃತ ಸಿಂಚನ ರೈತ ಒಕ್ಕೂಟದ ಅಧಕ್ಷ ಪಿ.ಜಿ. ಪ್ರಪುಲ್ಲಚಂದ್ರ ಕೋಲ್ಪೆ ಮಾಹಿತಿ ನೀಡಿದರು.  ಮಾಜಿ ಅಧ್ಯಕ್ಷ ಕೊಂಕೊಡಿ ಪದ್ಮನಾಭ, ರಾಜರಾಮ್ ಶೆಟ್ಟಿ ಕೋಲ್ಪೆಗುತ್ತು, ಕೆ.ಎಂ.ಎಪ್. ನಿರ್ದೇಶಕ ಡಾ| ಕೃಷ್ಣಭಟ್ ಹಾಗೂ ಸಂಘದ ನಿರ್ದೇಶಕಿ ವನಜಾಕ್ಷಿ , ಎಂ.ಎಚ್. ರಮೇಶ್ ಭಟ್ ,ಪ್ರವೀಣ್ ಕುಮಾರ್, ಮೋಹನ್ ಶೆಟ್ಟಿ ಮತ್ತು ಸಂಘದ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.  ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಈಶ್ವರ ನಾಯ್ಕ್ ಸ್ವಾಗತಿಸಿ, ನಿರ್ದೇಶಕ ಜಗದೀಶ ದೇವಸ್ಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.