ಪುತ್ತೂರ ಮಹಾಲಿಂಗೇಶ್ವರನಿಗೆ ಕನಕಾಭಿಷೇಕ

puttur

ಪುತ್ತೂರು: ಮಕರ ಸಂಕ್ರಮಣದ ಅಂಗವಾಗಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.೧೪ರಂದು ವಿಶೇಷ ಬಲಿ ಉತ್ಸವ ನಡೆಯಿತು.  ಸಂಜೆ ಶ್ರೀ ದೇವರ ಉತ್ಸವ, ಪಲ್ಲಕಿ ಉತ್ಸವ, ವಾದ್ಯ, ಚೆಂಡೆ ಉತ್ಸವ ಬಳಿಕ ಶ್ರೀ ಉಳ್ಳಾಲ್ತಿ ನಡೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಗೆ ಸುವಸ್ತು ಕನಕಾಭಿಷೇಕ ನಡೆಯಿತು. ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್ ಶ್ರೀ ದೇವರ ಉತ್ಸವ ಮೂರ್ತಿಗೆ ಕನಕಾಭಿಷೇಕ  ಚಿಮ್ಮಿಸಿದರು. ಬಳಿಕ   ವಸಂತ ಕಟ್ಟೆಯಲ್ಲಿ ಭಕ್ತರಿಗೆ ಕನಕಾಭಿಷೇಕದ ಪ್ರಸಾದ ವಿತರಣೆ ಮಾಡಲಾಯಿತು. ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಮಾಜಿ ಸದಸ್ಯೆ ಡಾ. ಸುಧಾ ಎಸ್ ರಾವ್, ಕಚೇರಿ ವ್ಯವಸ್ಥಾಪಕ ಜಗದೀಶ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಸುವಸ್ತು ಕನಕಾಭಿಷೇಕ

ಪರಂಪರಾಗತವಾಗಿ ಬಂದಿರುವಂತೆ ಉತ್ಸವ ಮೂರ್ತಿಗೆ ಸುವಸ್ತು ಕನಕಾಭಿಷೇಕ ಸಮರ್ಪಣೆಯಲ್ಲಿ ವೀಲ್ಯದೆಳೆ, ಅಡಿಕೆ, ಹೊದುಳು, ಅಕ್ಕಿ, ಒಳ್ಳೆಮೆಣಸು, ನಾಣ್ಯಗಳು, ಮತ್ತು ಚಿನ್ನ ಮತ್ತು ಬೆಳ್ಳಿಯ ಚೂರುಗಳನ್ನು ತಟ್ಟೆಯಲ್ಲಿ ಸುಂದರವಾಗಿ ಜೋಡಿಸಿ ಇಟ್ಟು. ಶ್ರೀ ದೇವರ ಕೊನೆಯ ಬಲಿಯ ಸಂದರ್ಭದಲ್ಲಿ ಸುವಸ್ತು ಕನಕಾಭಿಷೇಕ ನೆರವೇರುವುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.